/newsfirstlive-kannada/media/post_attachments/wp-content/uploads/2025/04/SARPAGANDHA-SEEDS.jpg)
ಇದು ಬೇಸಿಗೆ ಸಮಯ, ಬಿಸಿಲಿನ ಬೇಗೆ ತಾಳಲಾರದೆ ಹಾವುಗಳು ತಾವು ಅಡಗಿಕೊಂಡಿರುವ ಜಾಗಗಳನ್ನು ತೊರೆದು ಆಚೆ ಬರುತ್ತವೆ. ಯಾವ ಸಮಯದಲ್ಲೂ ಯಾರ ಮನೆಯೊಳಗಾದರೂ ನುಗ್ಗಿಕೊಂಡು ಆಶ್ರಯ ಪಡೆಯಬಹುದು. ಒಂದೊಮ್ಮೆ ಮನುಷ್ಯರ ಮೇಲೆ ದಾಳಿ ಮಾಡುವ ಸಾಧ್ಯತೆಯೂ ಇರಬಹುದು. ಹೀಗಾಗಿ ಮನೆಯಲ್ಲಿ ಹಾವುಗಳು ಬರದಂತೆ, ಕಡಿದಾದ ಜಾಗಗಳಲ್ಲಿ ಅಡಗಿ ಕೂರದಂತೆ ಮಾಡಲು ಜಾರ್ಖಂಡನ ರಾಜಧಾನಿ ರಾಂಚಿಯಲ್ಲಿರುವ ಬಿರ್ಸಾ ಕೃಷಿ ವಿಶ್ವವಿದ್ಯಾಲಯವು ಒಂದು ಬೀಜದ ತಳಿಯನ್ನು ಸಂಶೋಧನೆಗೆ ಒಳಪಡಿಸಿದೆ. ಇದು ರಾಂಚಿಯ ಪಿಥೋರಿಯಲ್ ಇಲಾಖೆಯಲ್ಲಿ ಬರುವ ಒಂದು ಕಾಡಿನಲ್ಲಿ ಸಿಕ್ಕಿದೆ. ಇದನ್ನು ಈ ಕಾಡಿನ ಆದಿವಾಸಿಗಳು ಹಾವುಗಳು ತಮ್ಮತ್ತ ಸುಳಿಯದಂತೆ ಮಾಡಲು ಉಪಯೋಗಿಸುತ್ತಿದ್ದರು ಎಂದು ಕೂಡ ತಿಳಿದು ಬಂದಿದೆ. ಈ ಬೀಜದಿಂದ ಹೊರಹೊಮ್ಮುವ ಪರಿಮಳದಿಂದಾಗಿ ಹಾವುಗಳು ದೂರ ಹೋಗುತ್ತವೆ ಎಂದು ಹೇಳಲಾಗುತ್ತಿದೆ.
ಇದು ಮಾತ್ರವಲ್ಲ ವಿಶ್ವವಿದ್ಯಾಲಯದ ಸಂಶೋಧನೆಯಿಂದ ಈ ಬೀಜಗಳು ಮನುಷ್ಯರ ಆರೋಗ್ಯಕ್ಕೂ ಕೂಡ ಒಳ್ಳೆಯದು ಎಂದು ತಿಳಿದು ಬಂದಿದೆ. ಹೆಚ್ಚು ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುವಲ್ಲಿ ಈ ಬೀಜಗಳು ತುಂಬಾ ಒಳ್ಳೆಯ ಔಷಧವಾಗಿ ಕಾರ್ಯನಿರ್ವವಹಿಸುತ್ತವೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಅವಶ್ಯಕತೆಯಿಂದಲೇ ಆವಿಷ್ಕಾರಗಳಾಗೋದು.. ಮಂಚವನ್ನೇ ಮೋಟಾರು ಕಾರು ಮಾಡಿದ ಭೂಪ! ವಿಡಿಯೋ ವೈರಲ್!
ಬಿರ್ಸಾ ಕೃಷಿ ವಿಶ್ವವಿದ್ಯಾಲಯ ಹೇಳುವ ಪ್ರಕಾರ ರಾಂಚಿಯ ಈ ಅರಣ್ಯದಲ್ಲಿ ಅನೇಕ ರೀತಿಯ ಸಸ್ಯಗಳು ದೊರೆಯುತ್ತವೆ. ಅವುಗಳಲ್ಲಿ ಕೆಲವು ಬೀಜಗಳು ಸೃಷ್ಟಿಯಾಗುತ್ತವೆ. ಆ ಬೀಜಗಳ ಬಗ್ಗೆ ಈಗ ವಿಶ್ವವಿದ್ಯಾಲಯ ಸಂಶೋಧನೆಯನ್ನು ಕೈಗೊಂಡಿದ್ದು. ಅದರಲ್ಲಿ ಒಂದು ಬೀಜವನ್ನು ಸ್ಥಳೀಯರು ಈ ಹಿಂದೆಯೇ ಹಾವುಗಳನ್ನು ಓಡಿಸಲು ಬಳಸುತ್ತಿದ್ದರು ಎಂದು ತಿಳಿದು ಬಂದಿದೆ.
ಕೃಷಿ ವಿಶ್ವವಿದ್ಯಾಲಯ ಹೇಳುವ ಪ್ರಕಾರ ಈ ಬೀಜಕ್ಕೆ ಸರ್ಪಗಂಧ ಎಂದು ಹೆಸರು ಇಡಲಾಗಿದೆಯಂತೆ. ಇದರಿಂದ ಹೊರಹೊಮ್ಮುವ ವಾಸನೆಯಿಂದಾಗಿ ಸರ್ಪಗಳು ಬಹುದೂರದಿಂದಲೇ ಇದರಿಂದ ಭೀತಿಗೊಂಡು ಓಡಿ ಹೋಗುತ್ತವೆಯಂತೆ.
ಇದನ್ನೂ ಓದಿ:ಸುದೀಪ್, ಜಗ್ಗೇಶ್ ಜೊತೆ ಕಿರಿಕ್.. ಸ್ಯಾಂಡಲ್ವುಡ್ ನಿರ್ಮಾಪಕ M.N ಕುಮಾರ್ ಬಂಧನ; ಏನಿದು ಕೇಸ್?
ಸರ್ಪಗಳು ಮಾತ್ರವಲ್ಲ ಅವುಗಳ ಮರಿಗಳು ಕೂಡ ಈ ಬೀಜಗಳು ಇದ್ದಲ್ಲಿ ಬರುವುದಿಲ್ಲ, ಒಂದು ವೇಳೆಯ ಮನೆಯ ಯಾವುದಾದರೂ ಮೂಲೆಯಲ್ಲಿ ಹಾವು ಅಡಗಿಕೊಂಡಿದ್ದರು ಕೂಡ ಈ ಬೀಜಗಳ ವಾಸನೆಯಿಂದ ಆಚೆ ಓಡಿ ಹೋಗುತ್ತವ ಎಂದು ಸಂಶೋಧಕರು ಹೇಳುತ್ತಾರೆ. ಹೀಗಾಗಿ ಸರ್ಪಗಳು ಮನುಷ್ಯರ ಸರಹದ್ದಿನೊಳಗೆ ಬಾರದಂತೆ ತಡೆಯಲು ಈ ಬೀಜವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಂಶೋಧಕರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ