newsfirstkannada.com

×

ರೆಡ್ ಬ್ಲೂ ಸಾರಿಯಲ್ಲಿ ಮಿರ ಮಿರ ಮಿಂಚಿದ ರಾಣಿ ಮುಖರ್ಜಿ; ಸೋಷಿಯಲ್ ಮೀಡಿಯಾದಲ್ಲಿ ಹೊಸ ಅಲೆ ಸೃಷ್ಟಿಸಿದ ಸೀರೆ

Share :

Published October 10, 2024 at 5:08pm

    ಕೊಲ್ಕತ್ತಾದ ದುರ್ಗಾದೇವಿ ಪೆಂಡಾಲ್​ಗೆ ಭೇಟಿ ನೀಡಿದ ರಾಣಿ ಮುಖರ್ಜಿ

    ನಟಿ ರಾಣಿ ಮುಖರ್ಜಿ ಉಟ್ಟುಕೊಂಡಿದ್ದ ಸೀರೆ ಕಂಡು ಫಿದಾ ಆದ ನೆಟ್ಟಿಗರು

    ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿದ ರಾಣಿ ಉಟ್ಟಿದ್ದ ಸೀರೆ

ಇದು ಹೇಳಿ ಕೇಳಿ ಹಬ್ಬದ ಸಡಗರದ ದಿನಗಳು. ಬಾಲಿವುಡ್ ಹೀರೋಯಿನ್​ಗಳಿಗೂ ಹಬ್ಬಕ್ಕೂ ಒಂದು ನಂಟಿದೆ. ಅವರ ಕಾಸ್ಟ್ಯೂಮ್​ಗಳ ಬಗ್ಗೆ ಜನರಲ್ಲಿ ಒಂದು ರೀತಿಯ ಕುತೂಹಲ ಇರುತ್ತಾ. ಈ ಬಾರಿ ಅವರು ಉಡುವ ಸೀರೆಯಿಂದ ಹಿಡಿದು ಅದರ ಬಾರ್ಡರ್​ ವಿನ್ಯಾಸದವರೆಗೂ ಒಂದು ತೀವ್ರ ಕುತೂಹಲ ಇರುತ್ತೆ. ಅದರಂತೆ ಬಾಲಿವುಡ್ ನಟಿಯರು ಹೊಸ ಹೊಸ ವಿನ್ಯಾಸದ ಉಡುಪುಗಳನ್ನು ಉಟ್ಟು ಫೋಟೋಗೆ ಪೋಸ್​ ಕೊಟ್ಟು ಟ್ರೆಂಡ್ ಸೃಷ್ಟಿ ಮಾಡುತ್ತಾರೆ ಅದರಲ್ಲಿ ಬಾಲಿವುಡ್​ನ ನಟಿ ರಾಣಿ ಮುಖರ್ಜಿ ಕೂಡ ಹಿಂದೆ ಬಿದ್ದಿಲ್ಲ.

ಇದನ್ನೂ ಓದಿ: Meal Prepping ಭಾರತದಂತಹ ದೇಶದಲ್ಲಿ ಇದು ಒಳ್ಳೆಯ ಐಡಿಯಾನಾ? ಇದರಿಂದಾಗುವ ಪ್ರಯೋಜನಗಳೇನು?

ರಾಣಿ ಮುಖರ್ಜಿ ಒಂದು ಕಾಲದಲ್ಲಿ ಬಾಲಿವುಡ್​ನ ಬಹು ಬೇಡಿಕೆಯ ನಟಿ. ಸೌಂದರ್ಯ ಲಾಲಿತ್ಯವೇ ಆಕೆಯಲ್ಲಿ ಕುಣಿಯುತ್ತಿದೆಯೋ ಏನೋ ಅನ್ನುವಂತ ಕಣ್ತುಂಬಿಕೊಳ್ಳುವ ಚೆಲುವು ರಾಣಿಯದ್ದು. ಇಂದಿಗೂ ಕೂಡ ಆ ಚೆಲುವನ್ನು ಹಾಗೆ ಕಾಪಾಡಿಕೊಂಡು ಬಂದಿರುವ ನಟಿ, ಆಗಾಗ ತಮ್ಮ ವಿಶೇಷ ಕಾಸ್ಟ್ಯೂಮ್​ಗಳ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಮೂಲತಃ ಪಶ್ಚಿಮ ಬಂಗಾಳದವರಾದ ರಾಣಿ ಮುಖರ್ಜಿ, ಅಲ್ಲಿಯ ಸಂಸ್ಕೃತಿಯನ್ನು ಇಂದಿಗೂ ಪ್ರೀತಿಸುತ್ತಲೇ ಇದ್ದಾರೆ. ಅವರ ಬೇರುಗಳು ಇಂದಿಗೂ ಬಂಗಾಳಿ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿವೆ. ಸದ್ಯ ನವರಾತ್ರಿಯಂದು ದುರ್ಗಾ ಪೂಜೆಯ ಅಂಗವಾಗಿ ದುರ್ಗಾ ಪೂಜಾ ಪೆಂಡಾಲ್​ಗೆ ಭೇಟಿ ನೀಡಿದ್ದ ರಾಣಿ ತಮ್ಮ ಸಾರಿಯಿಂದಾಗಿ ಎಲ್ಲರ ಕಣ್ಮನ ಸೆಳೆದರು.

ಇದನ್ನೂ ಓದಿ: ಹೊಸ ಫ್ಯಾಶನ್ ಸೆಟ್​ ಮಾಡಿದ ನೀತಾ ಅಂಬಾನಿಯವರ ಆ ಸಾರಿ! ಸೀರೆಯೊಂದಿಗೆ ಮತ್ತೊಂದು ಸ್ಟೈಲ್ ಕೂಡ ಟ್ರೆಂಡ್​ ಆಯ್ತು, ಏನದು?

ರಾಣಿ ಮುಖರ್ಜಿ ದುರ್ಗಾದೇವಿ ಪೆಂಡಾಲ್​ಗೆ ಭೇಟಿ ನೀಡಿದಾಗ ರೆಡ್​ ಮತ್ತು ಕೆಂಪು ಬಣ್ಣದ ಸೀರೆಯಲ್ಲಿ ಮಿಂಚುತ್ತಿದ್ದರು. ಕೆಂಪು ಮತ್ತು ಬಂಗಾರದ ಬಣ್ಣವಿರುವ ಬಾರ್ಡರ್​ನ ಸೀರೆಯಲ್ಲಿ ರಾಣಿ ಫೋಟೋಗೆ ಪೋಸ್ ಕೊಟ್ಟಿದ್ದು, ಸದ್ಯ ರಾಣಿ ಫೋಟೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ಸೀರೆಯ ಜೊತೆಗೆ ಅವರು ಮಾಡಿಕೊಂಡಿರುವ ಜ್ಯುವೆಲರ್ ಸೆಲೆಕ್ಷನ್ ಕೂಡ ಅದ್ಭುತವಾಗಿದ್ದು. ರಾಣಿ ಮುಖರ್ಜಿಯವರ ಈ ಡ್ರೆಸ್ಸಿಂಗ್ ಸೆನ್ಸ್​​ನ್ನು ಜನರು ಹಾಡಿ ಹೊಗಳುತ್ತಿದ್ದಾರೆ. ಇನ್ನು ಹತ್ತು ವರ್ಷ ಹೋದ್ರು ರಾಣಿ ಹೀಗೆ ಇರುತ್ತಾರೆ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ.

View this post on Instagram

A post shared by F I L M Y G Y A N (@filmygyan)

ರೆಡ್ ಮತ್ತು ಬ್ಲೂ ಸಾರಿಯೊಂದಿಗೆ ರೆಡ್​ ಬ್ಲೌಸ್​ ಧರಿಸಿದ್ದ ರಾಣಿ ಮುಖರ್ಜಿ ಕೊರಳಿನಲ್ಲಿ ದೊಡ್ಡದಾದ ಬಂಗಾರದ ನೆಕ್ಲೆಸ್ ಹಾಕಿಕೊಂಡಿದ್ದರು. ದುರ್ಗಾ ಪೆಂಡಾಲ್​ಗೆ ಬಂದಿಳಿದ ರಾಣಿ ಮುಖರ್ಜಿ ದೇವಿಯ ದರ್ಶನ ಪಡೆದುಕೊಂಡು, ಅಲ್ಲಿ ನೆರೆದಿದ್ದ ಮೀಡಿಯಾದ ಕ್ಯಾಮರಾಗಳಿಗೆ ಪೋಸ್ ಕೊಟ್ಟರು. ಇತ್ತೀಚೆಷ್ಟೇ ನೀತಾ ಅಂಬಾನಿಯವರು ಉಟ್ಟುಕೊಂಡಿದ್ದ ನಿಯೋನ್ ಗ್ರೀನ್ ಬಣ್ಣದ ಸೀರೆ ಟ್ರೆಂಡ್ ಸೃಷ್ಟಿಸಿತ್ತು. ಈಗ ರಾಣಿ ಮುಖರ್ಜಿಯ ಸೀರೆ ಟ್ರೆಂಡ್ ಸೃಷ್ಟಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೆಡ್ ಬ್ಲೂ ಸಾರಿಯಲ್ಲಿ ಮಿರ ಮಿರ ಮಿಂಚಿದ ರಾಣಿ ಮುಖರ್ಜಿ; ಸೋಷಿಯಲ್ ಮೀಡಿಯಾದಲ್ಲಿ ಹೊಸ ಅಲೆ ಸೃಷ್ಟಿಸಿದ ಸೀರೆ

https://newsfirstlive.com/wp-content/uploads/2024/10/RANI-MUKARJEE-SARI.jpg

Load More