ರಂಜನಿ ರಾಘವನ್, ಮೋಕ್ಷಿತಾ, ಭವ್ಯಾ ಗೌಡ.. ಈ ಮೂವರಲ್ಲಿ ಯಾರಾಗ್ತಾರೆ ಕರ್ಣನ ಹೀರೋಯಿನ್!

author-image
Veena Gangani
Updated On
ರಂಜನಿ ರಾಘವನ್, ಮೋಕ್ಷಿತಾ, ಭವ್ಯಾ ಗೌಡ.. ಈ ಮೂವರಲ್ಲಿ ಯಾರಾಗ್ತಾರೆ ಕರ್ಣನ ಹೀರೋಯಿನ್!
Advertisment
  • ಬಿಗ್​ಬಾಸ್​ ಮೂಲಕ ಅಪಾರ ಫ್ಯಾನ್ಸ್​ಗಳಿಸಿದ್ದ ಭವ್ಯಾ, ಮೋಕ್ಷಿ ಆಗ್ತೀರಾ ನಟಿ!
  • ಕನ್ನಡತಿ ಮೂಲಕ ಕಿರುತೆರೆಯ ಸೂಪರ್​ ಸ್ಟಾರ್​ ಆಗಿ ಮಿಂಚಿದ್ದರು ಕಿರಣ್​ ರಾಜ್
  • ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿದ ಈ ನಾಯಕಿಯರ ವಿಚಾರ

ಕನ್ನಡತಿ ಮೂಲಕ ಕಿರುತೆರೆಯ ಸೂಪರ್​ ಸ್ಟಾರ್​ ಆಗಿ ಮಿಂಚಿದ್ದು ನಟ ಕಿರಣ್​ ರಾಜ್​. ಸಾಲು ಸಾಲು ಸಿನಿಮಾಗಳ ಆಫರ್​ ನಡುವೆಯೂ ಡಾಕ್ಟರ್​ ಕರ್ಣ ಆಗಿ ಟಿವಿ ಪರೆದೆ ಮೇಲೆ ಮಿಂಚೋಕೆ ಮತ್ತೇ ಬರ್ತಿದ್ದಾರೆ. ಮಹಿಳಾ ಪ್ರಧಾನ ಕಥೆಗಳೇ ಹೆಚ್ಚು. ಧಾರಾವಾಹಿ ಟೈಟಲ್​ ಕೂಡ ನಾಯಕಿಯ ಮೂಲಕ ಶುರುವಾಗ್ತಿರುತ್ತೆ.

ಇದನ್ನೂ ಓದಿ: 10 ತಿಂಗಳ ಬಳಿಕ ಶೂಟಿಂಗ್‌ನಲ್ಲಿ ಭಾಗಿಯಾದ ನಟ ದರ್ಶನ್; ಟಾಪ್ 10 ಫೋಟೋ ಇಲ್ಲಿವೆ!

publive-image

ಎಲ್ಲೋ ಬೆರಳಿಣಿಕೆಯಷ್ಟು ನಾಯಕನನ್ನ ಒಳಗೊಂಡ ಶೀರ್ಷಿಕೆಗಳು ಬರುತ್ತೆ. ಕರ್ಣ ಟೋಟಲಿ ವಿಭಿನ್ನ ಧಾರಾವಾಹಿ. ನಾಯಕನ ಪಾತ್ರ ಹಲವು ಆಯಾಮಗಳಲ್ಲಿ ಸಾಗುತ್ತೆ. ತೂಕ ಇರೋ ಪಾತ್ರ. ಮನೆಯವರ ದ್ವೇಷದ ನಡುವೆಯೂ ಮಗನಾಗಿ ಕರ್ತವ್ಯ ನಿರ್ವಹಿಸೋದು, ಊರಿಗೆ ಬೇಕಾದ ವ್ಯಕ್ತಿಯಾಗಿರ್ತಾನೆ. ಲವರ್​ ಬಾಯ್​.. ಆದರೆ ಮುಂದೆ ಸೈಕೋ ಆಗ್ತಾನೆ. ಹೀಗೆ ಸಾಕಷ್ಟು ಪರ್ಫಾಮನ್ಸ್​ ಬಯಸುವ ಅದ್ಭುತವಾದ ಪಾತ್ರ. ಕಿರಣ್​ ರಾಜ್​ ಪರ್ಫಾಮನ್ಸ್​ ಹೇಗಿರಲಿದೆ ಎಂಬ ಕುತೂಹಲ ಸಹಜವಾಗಿಯೇ ಇದೆ. ಸದ್ಯ ಮತ್ತೊಂದು ವಿಚಾರ ಹೆಚ್ಚು ಚರ್ಚೆ ಆಗ್ತಿದೆ. ಕಿರಣ್​ಗೆ ನಾಯಕಿ ಆಗೋರು ಯಾರು?

publive-image

ಕರ್ಣ ಪ್ರೋಮೋ ರಿಲೀಸ್ ಆಗುತ್ತಿದ್ದಂತೆ ಕಿರಣ್​ ರಾಜ್​ ಅವರಿಗೆ ಶುಭಾಶಯಗಳ ಮಾಹಾಪೂರವೇ ಹರಿದು ಬಂದಿದೆ. ಜೊತೆಗೆ ನಾಯಕಿ ಯಾರು ಆಗಲಿದ್ದಾರೆ ಅನ್ನೋ ಚರ್ಚೆಗಳು ಶುರುವಾಗಿದೆ. ಮುಖ್ಯವಾಗಿ ಕೇಳಿ ಬರ್ತಿರೋ ಹೆಸರುಗಳು ರಂಜಿನಿ ರಾಘವನ್​, ಮೋಕ್ಷಿತಾ ಹಾಗೂ ಭವ್ಯಾ. ಕಿರಣ್ ರಾಜ್​​ ಅಭಿಮಾನಿಗಳೂ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಮಾಡ್ತಿರೋ ವಿಚಾರ ನಾಯಕಿಯದ್ದು. ರಂಜಿನಿ ಹಾಗೂ ಕಿರಣ್​ ಜೋಡಿ ಕನ್ನಡತಿ ಮೂಲಕ ಸೂಪರ್​ ಹಿಟ್​ ಆಗಿದೆ. ಇದೇ ಜೋಡಿ ಮತ್ತೇ ಮರಳಲ್ಲಿ ಅನ್ನೋದು ಹರ್ಷ ಭುವಿ ಫ್ಯಾನ್ಸ್ ಆಶಯ.

ಇದನ್ನೂ ಓದಿ:ಅಭಿಮಾನಿಗೆ ಕೊಟ್ಟ ಮಾತು ಉಳಿಸಿಕೊಂಡ ನಟ​ ಕಿರಣ್ ರಾಜ್‌.. ಕನ್ನಡ ಕಿರುತೆರೆಯಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ್ರಾ!

publive-image

ಇನ್ನೂ, ಬಿಗ್​ಬಾಸ್​ ಮೂಲಕ ಅಪಾರ ಫ್ಯಾನ್ಸ್​ ಸಂಪಾದನೆ ಮಾಡಿರೋ ಮೋಕ್ಷಿತಾ ಹಾಗೂ ಭವ್ಯಾ ಹೆಸರು ಕೇಳಿ ಬರ್ತಿದೆ. ಮೋಕ್ಷಿತಾನೇ ಕಿರಣ್​ಗೆ ಬೆಸ್ಟ್ ಜೋಡಿ ಅಂತಿದ್ರೇ, ಇನ್ನೊಂದು ಇಷ್ಟು ಜನ ಇಲ್ಲ.. ಇಲ್ಲ.. ಭವ್ಯಾನೇ ಕಿರಣ್​ಗೆ ಜೋಡಿಯಾಗ್ಬೇಕು ಅಂತಿದ್ದಾರೆ. ಕಮೆಂಟ್​ ಬಾಕ್ಸ್​ನಲ್ಲಿ ತಮ್ಮ ನೆಚ್ಚಿನ ನಟಿಯನ್ನ ಬೆಂಬಲಿಸಿ ಫ್ಯಾನ್ಸ್​ಗಳ ವಾರ್​ಯೇ ನಡಿತಿದೆ.

publive-image

ಅಂದ್ಹಾಗೆ, ಕರ್ಣ ಧಾರಾವಾಹಿ ನಿರ್ಮಾಣ ಮಾಡ್ತಿರೋದು ಜನಪ್ರಿಯ ನಿರ್ಮಾಪಕಿ, ನಿರ್ದೇಶಕಿ ಶ್ರುತಿ ನಾಯ್ಡು. ಶ್ರುತಿ ನಾಯ್ಡು ಅವರ ಹೊಸ ನಾಯಕಿಯರನ್ನ ಪರಿಚಯಿಸೋದರಲ್ಲಿ ಸದಾ ಮುಂದು. ಕರ್ಣನಿಗೆ ಹೊಸ ನಾಯಕಿನ ತುರುತ್ತಾರಾ? ಇಲ್ಲ ಫ್ಯಾನ್ಸ್​ಗಳ ಅಭಿಲಾಶೆಯಂತೆ ಸದ್ಯದ ಪಾಪ್ಯೂಲರ್​ ನಟಿಯನ್ನ ಪಿಕ್​ ಮಾಡ್ತಾರಾ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment