/newsfirstlive-kannada/media/post_attachments/wp-content/uploads/2025/07/Ranjani-Raghavan.jpg)
ಕನ್ನಡ ಕಿರುತೆರೆಯ ಜನ ಮೆಚ್ಚಿದ ಸೀರಿಯಲ್ ಎಂದರೆ ಅದು ಕನ್ನಡತಿ. ಈ ಸೀರಿಯಲ್ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಿರೋ ನಟಿ ರಂಜನಿ ರಾಘವನ್ ಎಲ್ಲರಿಗೂ ಅಚ್ಚುಮೆಚ್ಚು. ಕನ್ನಡತಿ ಧಾರಾವಾಹಿಯಲ್ಲಿ ಭುವಿ ಪಾತ್ರ ನಿಭಾಯಿಸಿದ್ದ ರಂಜನಿ ಅವರಿಗೆ ಸಾಕಷ್ಟು ಅಭಿಮಾನಿಗಳ ಬಳಗ ಇದೆ.
ಇದನ್ನೂ ಓದಿ:ತಪ್ಪಿದ ಭಾರೀ ಅನಾಹುತ.. 173 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ -ಮುಂದೆ ಏನಾಯ್ತು..?
ಜನ ಮೆಚ್ಚಿದ ಕನ್ನಡತಿ ಧಾರಾವಾಹಿ ಮುಕ್ತಾಯದ ನಂತರ ರಂಜನಿ ರಾಘವನ್ ಒಂದು ಲಾಂಗ್ ಬ್ರೇಕ್ ತೆಗೆದುಕೊಂಡಿದ್ದರು. ಸಿನಿಮಾ ಸೇರಿದಂತೆ ಬೇರೆ ಬೇರೆ ಕೆಲಸದಲ್ಲಿ ಬ್ಯುಸಿಯಾಗಿದ್ದ ನಟಿ ರಂಜನಿ ರಾಘವನ್ ಅವರು ಇದೀಗ ಭಾವಿ ಪತಿ ಜೊತೆಗೆ ಹೊಸ ಸಾಹಸ ಮಾಡಿದ್ದಾರೆ.
ಹೌದು, ಸ್ಯಾಂಡಲ್ವುಡ್ ನಟಿ ರಂಜನಿ ರಾಘವನ್ ನಂದಿ ಬೆಟ್ಟವನ್ನು ಹತ್ತಿದ್ದಾರೆ. ಅದು ಕೂಡ ಓಡಿಕೊಂಡು ನಂದಿ ಬೆಟ್ಟವನ್ನು ಹತ್ತಿದ್ದಾರೆ. ಅದೇ ವಿಡಿಯೋವನ್ನು ನಟಿ ರಂಜನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಇದು ನನ್ನ ಮೊದಲ ಹಿಲ್ಸ್ ರನ್. ನನ್ನ ಟೀನೇಜ್ ನಲ್ಲಿ ನಾನು ಹೊರಗಿನ ಪ್ರಪಂಚ ಹಾಗೂ ಸೂರ್ಯನ ಕಿರಣವನ್ನು ಅವೈಡ್ ಮಾಡ್ತಿದ್ದೆ. ಆದ್ರೆ ಈಗ ಸೂರ್ಯ ಮುತ್ತಿಡುತ್ತಿದ್ದಾನೆ. ಓಟ ಮತ್ತು ಫಿಟ್ನೆಸ್ ಮೂಲಕ ನಾನು ನನ್ನ ಬೆಳವಣಿಗೆ ಕಂಡುಕೊಳ್ತಿದ್ದೇನೆ. ನಂದಿಬೆಟ್ಟವನ್ನು ಓಡ್ತಾ ಏರಲು ಪ್ರೋತ್ಸಾಹ ನೀಡಿದ, ಜೊತೆಯಲ್ಲಿ ಓಡಿದ ತಮ್ಮ ಪಾರ್ಟನರ್ಗೆ ಧನ್ಯವಾದ ಎಂದಿದ್ದಾರೆ.
View this post on Instagram
ಇನ್ನೂ, ನಂದಿ ಬೆಟ್ಟವನ್ನು ಏರಿದ ನಟಿ ರಂಜನಿ ರಾಘವನ್ ಬರೋಬ್ಬರಿ 8 ಕಿಲೋಮೀಟರ್ ಓಡಿದ್ದಾರೆ. 8 ಕಿಲೋಮೀಟರ್ ನಂದಿ ಬೆಟ್ಟ ಏರಲು ಅವರು ಒಂದು ಗಂಟೆ 27 ನಿಮಿಷ ತೆಗೆದುಕೊಂಡಿದ್ದಾರೆ. ಕೋಲ್ಡ್ ಜ್ಯೂಸ್ ಕುಡಿದು ಕೂಲ್ ಆದ ರಂಜನಿ, ಉಚಿತವಾಗಿ ಬಸ್ ಪ್ರಯಾಣ ಮಾಡಿದ್ದಾರೆ. ಅದರ ಟಿಕೆಟ್ ಕೂಡ ಹಂಚಿಕೊಂಡಿರುವ ಅವರು, ನಂದಿ ಬೆಟ್ಟದ ಆರಂಭದಲ್ಲಿದ್ದ ಕಾರ್ ತಲುಪಲು ಬಸ್ ಪ್ರಯಾಣ ಬೆಳೆಸಿದ್ದರು. ಇದು ನನ್ನ ಮೊದಲ ಬೆಟ್ಟದ ಓಟವಾಗಿತ್ತು. ನೀವೂ ಟ್ರೈ ಮಾಡಿ ಅಂತ ವಿಡಿಯೋದ ಕೊನೆಯಲ್ಲಿ ಕ್ಯಾಪ್ಷನ್ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ