newsfirstkannada.com

ಹೊಸ ಲುಕ್​ನಲ್ಲಿ ಕಾಣಿಸಿಕೊಂಡ ಕನ್ನಡತಿ; ರಂಜನಿ ರಾಘವನ್ ಕೊಟ್ಟ ಸುಳಿವು ಏನು?

Share :

Published March 14, 2024 at 7:56pm

    ಕನ್ನಡತಿ ಸೀರಿಯಲ್​​ ಮೂಲಕ ಜನಪ್ರಿಯತೆ ಪಡೆದುಕೊಂಡ ರಂಜನಿ

    ಹೊಸ ಲುಕ್​ನಲ್ಲಿ ಐತಿಹಾಸಿಕ ಉಡುಗೆಯಲ್ಲಿ ಕಾಣಿಸಿಕೊಂಡ ನಟಿ

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಈ ವಿಡಿಯೋ

ಕಿರುತೆರೆಯ ಎಲ್ಲರ ಫೇವರೈಟ್ ನಟಿ ಅಂದ್ರೆ ಅದು ರಂಜನಿ ರಾಘವನ್. ಕನ್ನಡತಿ ಧಾರಾವಾಹಿಯಲ್ಲಿ ಭುವಿ ಪಾತ್ರ ನಿಭಾಯಿಸಿದ್ದ ನಟಿ ರಂಜನಿ ರಾಘವನ್ ಅವರಿಗೆ ಸಾಕಷ್ಟು ಅಭಿಮಾನಿಗಳ ಬಳಗ ಇದೆ. ​ಸದ್ಯ ರಂಜನಿ ರಾಘವನ್ ಸುದ್ದಿಯಲ್ಲಿದ್ದು ಬಹಳ ದಿನಗಳೇ ಆಗಿವೆ. ಜನ ಮೆಚ್ಚಿದ ಕನ್ನಡತಿ ಧಾರಾವಾಹಿ ಮುಕ್ತಾಯದ ನಂತರ ಒಂದು ಲಾಂಗ್ ಬ್ರೇಕ್ ತೆಗೆದುಕೊಂಡಿದ್ದರು ನಟಿ ರಂಜನಿ.

ಇದನ್ನು ಓದಿ: ಸ್ಟಾರ್​​ ಕ್ರಿಕೆಟರ್​​​​ ಚಲಿಸುತ್ತಿದ್ದ ಕಾರ್​ಗೆ ಭೀಕರ ಅಪಘಾತ; ಆಸ್ಪತ್ರೆಗೆ ದಾಖಲು!

ಬಹು ದಿನಗಳ ನಂತರ ನಟಿ ರಂಜನಿ ರಾಘವನ್ ಹೊಸ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಅದುವೇ ಅವರ ನ್ಯೂ ಲುಕ್​ ಬಗ್ಗೆ. ಹೌದು, ತಮ್ಮ ಸಿನಿಮಾರಂಗದ ಕಡೆ ಸಿಕ್ಕಾಪಟ್ಟೆ ಬ್ಯೂಸಿ ಆಗಿದ್ದಾರೆ ಕನ್ನಡತಿ. ತಮಗೆ ತಾವೇ ಸಮಯ ಕೊಡದೆ ಇರೋದು ಬೇಸರದ ವಿಷಯ ಎಂದು ಹೇಳಿಕೊಂಡಿದ್ದರು. ಆದ್ರೂ ನೆನ್ನೆಯಷ್ಟೆ ಒಂದು ಹೊಸ ಫೋಟೋಶೂಟ್ ಬಗ್ಗೆ ಸಣ್ಣ ಸುಳಿವನ್ನು​ ಬಿಟ್ಟುಕೊಟ್ಟಿದ್ದಾರೆ. ಅಭಿಮಾನಿಗಳಿಗೆ ಇತಿಹಾಸ ಅಂದ್ರೆ ನಿಮ್ಮ ಪ್ರಕಾರ ಏನು? ಎಂಬ ಪ್ರಶ್ನೆ ಕೇಳುವ ಸಲುವಾಗಿ ತಮ್ಮ ನ್ಯೂ ಲುಕ್​​ ಅನ್ನು ರೀವಿಲ್ ಮಾಡಿದ್ದಾರೆ.

ಇನ್ನೂ, ಹೊಸ ಲುಕ್​ನಲ್ಲಿ ಐತಿಹಾಸಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು, ಜೊತೆಗೆ ಲೊಕೇಶನ್ ಕೂಡ ಐತಿಹಾಸಿಕವಾಗೇ ಇದೆ. ಈ ರೀತಿಯ ವಿಭಿನ್ನ ವಿಡಿಯೋ ಅಭಿಮಾನಿಗಳಿಗೆ ಕೂತುಹಲ ಹುಟ್ಟಿಸಿದೆ. ಇದು ಬರೀ ಫೋಟೋಶೂಟ್ ಅಥವಾ ಯಾವಾದಾದ್ರೂ ಸಿನಿಮಾ ಪಾತ್ರವೋ ಎಂದು ಕೇಳ್ತಿದ್ದಾರೆ. ಒಟ್ಟಿನಲ್ಲಿ ಬಹುದಿನಗಳ ನಂತರ ಹೊಸ ಲುಕ್​​ನಲ್ಲಿ ಕಾಣಿಸಿಕೊಂಡಿದ್ದು ವೀಕ್ಷರಿಗೆ ಇಷ್ವಾವಾಗಿದೆ. ಅಭಿಮಾನಿಗಳಿಗೋಸ್ಕರ ಹೊಸ ಅಪ್ಡೇಟ್ಸ್​ ಸದ್ಯದಲ್ಲೇ ನೀಡುತ್ತೇನೆ ಅನ್ನೋ ಭರವಸೆ ಕೂಡ ನೀಡಿದ್ದಾರೆ ನಟಿ ರಂಜನಿ ರಾಘವನ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಸ ಲುಕ್​ನಲ್ಲಿ ಕಾಣಿಸಿಕೊಂಡ ಕನ್ನಡತಿ; ರಂಜನಿ ರಾಘವನ್ ಕೊಟ್ಟ ಸುಳಿವು ಏನು?

https://newsfirstlive.com/wp-content/uploads/2024/03/rajini-8.jpg

Load More