BBK11: ಭವ್ಯಾ ಗೌಡ, ತ್ರಿವಿಕ್ರಮ ಲವ್​ ಇದ್ಯಾ; ಶಾಕಿಂಗ್​ ರಿಯಾಕ್ಷನ್​ ಬಿಚ್ಚಿಟ್ಟ ಬಿಗ್​ಬಾಸ್​ ರಂಜಿತ್​

author-image
Veena Gangani
Updated On
BBK11: ಭವ್ಯಾ ಗೌಡ, ತ್ರಿವಿಕ್ರಮ ಲವ್​ ಇದ್ಯಾ; ಶಾಕಿಂಗ್​ ರಿಯಾಕ್ಷನ್​ ಬಿಚ್ಚಿಟ್ಟ ಬಿಗ್​ಬಾಸ್​ ರಂಜಿತ್​
Advertisment
  • ತ್ರಿವಿಕ್ರಮ್​ ಹಾಗೂ ಭವ್ಯಾ ನಡುವೆ ಲವ್​ ಇದ್ಯಾ?
  • ನಾಲ್ಕನೇ ವಾರಕ್ಕೆ ಕಾಲಿಟ್ಟ ಬಿಗ್​ಬಾಸ್​ ಸೀಸನ್​ 11
  • ಈ ಲವ್​ ಸ್ಟೋರಿ ಬಗ್ಗೆ ರಂಜಿತ್​ ಹೇಳಿದ್ದೇನು ಗೊತ್ತಾ?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಶುರುವಾಗಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಕಳೆದ ಮೂರು ವಾರದಲ್ಲಿ ಬಿಗ್​ಬಾಸ್​ ಮನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಯಾವಾಗ ಯಾವ ಸ್ಪರ್ಧಿಗೆ ಯಾರ ಮೇಲೆ ಲವ್​ ಆಗುತ್ತೆ ಅಂತ ಹೇಳುದು ಕಷ್ಟ. ಅದರಲ್ಲೂ ಬಿಗ್​ಬಾಸ್​ ಮನೆಯಲ್ಲಿದ್ದ ಸ್ಪರ್ಧಿಗಳಿಗೆ ಯಾರ ಮೇಲೆ ಕ್ರಶ್ ಅಥವಾ ಲವ್​ ಆಗುತ್ತೆ ಅನ್ನೋದು ಇನ್ನೂ ಕಷ್ಟ.

publive-image

ಏಕೆಂದರೆ ಒಂದೇ ಮನೆಯಲ್ಲಿರೋ ಸ್ಪರ್ಧಿಗಳು ಪರಸ್ಪರ ಮಾತನಾಡಿಕೊಂಡಿರುತ್ತಾರೆ. ಹೀಗಾಗಿ ಇದನ್ನು ಸ್ಪರ್ಧಿಗಳು ಅಧಿಕೃತವಾಗಿ ಹೇಳುವವರೆಗೂ ವೀಕ್ಷಕರು ಕಾದು ಕುಳಿತುಕೊಳ್ಳುತ್ತಾರೆ. ಆದರೆ ಈ ಬಾರಿಯ ಸೀಸನ್​ 11ರಲ್ಲಿ ಅಂತದ್ದೇ ಗುಸು ಗುಸು ಚರ್ಚೆ ಶುರುವಾಗಿದೆ. ಹೌದು, ಈ ಹಿಂದೆ ತುಕಾಲಿ ಸಂತೋಷ್ ಜೊತೆಗೆ ಮಾತಾಡಿದ್ದ ಮಾನಸಾ ತ್ರಿವಿಕ್ರಮ್​ ಭವ್ಯಾ ಗೌಡಳನ್ನು ಲವ್​ ಮಾಡ್ತಾ ಇದ್ದಾರೆ ಅಂತ ಎಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ. ಸಿಕ್ರೇಟ್ ಆಗಿ ಲವ್​ ಮಾಡ್ತಾ ಇದ್ದಾರಂತೆ. ಅವರ ಇಬ್ಬರ ಮಧ್ಯೆ ಏನೋ ನಡೀತಾ ಇದೆ ಅಂತ ಗುಸುಗುಸು ಮಾತಾಡಿಕೊಳ್ಳುತ್ತಿದ್ದಾರೆ ಅಂತ ಫೋನ್​ನಲ್ಲಿ ಹೇಳಿದ್ದರು.

ಸದ್ಯ ಇದೇ ವಿಚಾರವಾಗಿ ನ್ಯೂಸ್​ ಫಸ್ಟ್​ ಸಂದರ್ಶನದಲ್ಲಿ ಬಿಗ್​ಬಾಸ್​ ಮನೆಯಿಂದ ಆಚೆಬಂದ ರಂಜಿತ್​ ಈ ಬಗ್ಗೆ ಮಾತಾಡಿದ್ದಾರೆ. ಅವರು ತುಂಬಾ ಕ್ಲೋಸ್​ ಆಗಿ ಇರ್ತಾರೆ. ಆಗಾಗ ಕಣ್ಣಲ್ಲೇ ಸನ್ನೆ ಮಾಡ್ತಾ ಇರ್ತಾ ಇದ್ರು. ನನಗೆ ಅನಿಸುತ್ತಿತ್ತು ಏನಾದ್ರೂ ನಡೆಯುತ್ತಾ ಇದ್ಯಾ ಅಂತ. ಗೊತ್ತಿಲ್ಲ ನನಗೆ ಭವ್ಯಾ ಅವರಿಗೆ ಬಾಯ್​ ಫ್ರೆಂಡ್​ ಇದಾರೋ ಇಲ್ವೋ ಗೊತ್ತಿಲ್ಲ. ಈ ವಿಚಾರದ ಬಗ್ಗೆ ನಾನು ಅವರ ಬಳಿ ಮಾತನಾಡಿಲ್ಲ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment