/newsfirstlive-kannada/media/post_attachments/wp-content/uploads/2025/02/YouTuber-Ranveer-Allahbadia.jpg)
ಯೂಟ್ಯೂಬರ್‌ಗಳಾದ ರಣವೀರ್ ಅಲಹಾಬಾದಿಯಾ, ಸಮಯ್ ರೈನಾ ಹಾಗೂ ಸಂಗಡಿಗರು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ತಂದೆ-ತಾಯಿ ಸೆಕ್ಸ್ ಬಗ್ಗೆ ಇವರ ವ್ಯಂಗ್ಯ, ಅಸಂಬದ್ಧ ಮಾತುಗಳು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ರಣವೀರ್ ಅಲಹಾಬಾದಿಯಾ ತಂದೆ-ತಾಯಿ ಸೆಕ್ಸ್ ಬಗ್ಗೆ ಮಾತನಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೇಸ್ ದಾಖಲಿಸಿರುವ ಮುಂಬೈ ಪೊಲೀಸರು ರಣವೀರ್ ಅಲಹಾಬಾದಿಯಾಗೆ ಸಮನ್ಸ್ ನೀಡಿದ್ದು ವಿಚಾರಣೆಗೆ ಹಾಜರಾಗಲು ಸೂಚಿಸಿದೆ.
ಇದನ್ನೂ ಓದಿ: ಬಂಧನದ ಭೀತಿಯಲ್ಲಿ ರಣವೀರ್ ಅಲಹಾಬಾದಿಯಾ.. ಕ್ಷಮೆ ಕೇಳಿದ ಯೂಟ್ಯೂಬರ್..!
ರಣವೀರ್ ಅಲಹಾಬಾದಿಯಾ ಅವರ ವಿಡಿಯೋ, ಅಸಂಬದ್ಧ ಹೇಳಿಕೆಯನ್ನು ಈಗಾಗಲೇ ಯೂಟ್ಯೂಬ್, ಸೋಷಿಯಲ್ ಮೀಡಿಯಾದಿಂದ ತೆಗೆದು ಹಾಕಲಾಗಿದೆ. ವ್ಯಾಪಕ ಟೀಕೆ ವ್ಯಕ್ತವಾದ ಮೇಲೆ ರಣವೀರ್ ಅಲಹಾಬಾದಿಯಾ ಅವರು ತನ್ನ ಮಾತಿಗೆ ಕ್ಷಮೆಯನ್ನು ಕೇಳಿದ್ದಾರೆ.
ದೇಶಾದ್ಯಂತ ಆಕ್ರೋಶಕ್ಕೆ ಗುರಿಯಾಗಿರುವ ರಣವೀರ್ ಅಲಹಾಬಾದಿಯಾ, ಸಮಯ್ ರೈನಾ ಹಿನ್ನೆಲೆ ಏನು? ಇವರಿಬ್ಬರ ಆಸ್ತಿ ಹಾಗೂ ತಿಂಗಳ ಸಂಪಾದನೆಯ ವಿವರ ಇಲ್ಲಿದೆ.
ಸಮಯ್ ರೈನಾ ಮತ್ತು ರಣವೀರ್ ಅಲಹಾಬಾದಿಯಾ ಇಬ್ಬರೂ ಎಂಜಿನಿಯರ್ ಪದವೀಧರರು. ಸಮಯ್ ರೈನಾ ಪ್ರಿಂಟಿಂಗ್ ಎಂಜಿನಿಯರಿಂಗ್ ಪದವಿ ಪಡೆದಿದ್ದರೆ, ರಣವೀರ್ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಎಂಜಿನಿಯರ್ ವ್ಯಾಸಂಗ ಮಾಡಿದ್ದಾರೆ.
01. ಸಮಯ್ ರೈನಾ
ಇಂಡಿಯಾ ಗಾಟ್ ಲ್ಯಾಟೆಂಟ್ ಶೋನ ಸಮಯ್ ರೈನಾ ಆಸ್ತಿ ಮೌಲ್ಯ ಬರೋಬ್ಬರಿ 140 ಕೋಟಿ ರೂಪಾಯಿ. ಕೆಲ ವರದಿಗಳ ಪ್ರಕಾರ ಸಮಯ್ ರೈನಾ ಸಂಪತ್ತು 195 ಕೋಟಿ ರೂಪಾಯಿಗೂ ಹೆಚ್ಚು ಎನ್ನಲಾಗಿದೆ.
ಸ್ಟಾಂಡಪ್ ಕಾಮಿಡಿ ಶೋಗಳಿಗೆ ಫೇಮಸ್ ಆಗಿರುವ ಸಮಯ್ ರೈನಾ ಅವರು ಕಾಮಿಕಸ್ತಾನ್ ಸೀಸನ್ 2ರ ವಿನ್ನರ್ ಆಗಿದ್ದಾರೆ. ಇನ್ಸ್‌ಸ್ಟಾಗ್ರಾಂ 5.9 ಮಿಲಿಯನ್ ಫಾಲೋವರ್ಸ್ ಮತ್ತು ಯೂಟ್ಯೂಬ್‌ನಲ್ಲಿ 7.33 ಮಿಲಿಯನ್ ಸಬ್ ಸ್ಕೈಬರ್ ಹೊಂದಿದ್ದಾರೆ.
02. ರಣವೀರ್ ಅಲಹಾಬಾದಿಯಾ
ರಣವೀರ್ ಅಲಹಾಬಾದಿಯಾ ಕೂಡ ಸಾಮಾನ್ಯ ವ್ಯಕ್ತಿಯೇನಲ್ಲ. ದೊಡ್ಡ ದೊಡ್ಡ ಸಾಧಕರು, ರಾಜಕಾರಣಿಗಳ ಜೊತೆಗೆ ರಣವೀರ್ ಪೋಡ್ ಕಾಸ್ಟ್ ನಡೆಸಿದ್ದಾರೆ. ರಣವೀರ್ ಅಲಹಾಬಾದಿಯಾ ಪ್ರಧಾನಿ ನರೇಂದ್ರ ಮೋದಿಯಿಂದಲೂ ಪ್ರಶಸ್ತಿ, ಸನ್ಮಾನ, ಗೌರವ ಪಡೆದಿರುವ ಯೂಟ್ಯೂಬರ್.
ರಣವೀರ್ ಅಲಹಾಬಾದಿಯಾ ಯೂಟ್ಯೂಬ್‌ನಿಂದಲೇ ಅತಿ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಇವರ ನಿವ್ವಳ ಸಂಪತ್ತಿನ ಮೌಲ್ಯ 60 ಕೋಟಿ ರೂಪಾಯಿ. ರಣವೀರ್ ಅವರು ಯೂಟ್ಯೂಬ್‌ನಿಂದ ತಿಂಗಳಿಗೆ 35 ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ