/newsfirstlive-kannada/media/post_attachments/wp-content/uploads/2024/11/Ranveer-and-Deepika.jpg)
ಬಾಲಿವುಡ್ ಕ್ಯೂಟ್ ಜೋಡಿ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಕಳೆದ ಸೆಪ್ಟೆಂಬರ್ 8ರಂದು ಮುದ್ದಾದ ಹೆಣ್ಣು ಮಗುವನ್ನು ಬರ ಮಾಡಿಕೊಂಡಿದ್ದಾರೆ. ದೀಪಾವಳಿ ಹಬ್ಬದ ಸಮಯದಲ್ಲಿ ಈ ಜೋಡಿ ಇದೀಗ ಮಗಳ ಮೊದಲ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ರಣ್ವೀರ್ ಸಿಂಗ್ ಮತ್ತು ದೀಪಿಕಾ ತಮ್ಮ ಮುದ್ದಾದ ಮಗಳ ಫೋಟೋ ಹಂಚಿಕೊಂಡಿದ್ದಾರೆ. ಪೋಸ್ಟ್ನಲ್ಲಿ ‘‘ದುವಾ ಪಡುಕೋಣೆ ಸಿಂಗ್’’ ಎಂದು ಬರೆದಿದ್ದಾರೆ. ಜೊತೆಗೆ ದುವಾ ಪದದ ಅರ್ಥವನ್ನು ಬರೆದಿದ್ದಾರೆ.
ಇದನ್ನೂ ಓದಿ: ಅಮೆಜಾನ್ಗೆ 20 ಕೋಟಿಗೂ ಅಧಿಕ ಪಂಗನಾಮ.. ಮಂಗಳೂರು ಪೊಲೀಸರ ಕೈಗೆ ಸೆರೆಸಿಕ್ಕ ಖತರ್ನಾಕ್ ಖದೀಮರು
ದುವಾ ಅಂದರೆ ಪ್ರಾರ್ಥನೆ ಎಂದು ಅರ್ಥ. ಯಾಕೆಂದರೆ ಆಕೆ ನಮ್ಮ ಪ್ರಾರ್ಥನೆಗೆ ಒಳಿದ ಉತ್ತವಾಗಿದ್ದಾಳೆ. ನಮ್ಮ ಹೃದಯ ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿವೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕಿರುತೆರೆ ನಟಿ ನೇಹಾ ಗೌಡ, ಚಂದನ್ ಗೌಡ ಮಗು ಹೇಗಿದೆ? ಈ ಬಗ್ಗೆ ಅನುಪಮಾ ಗೌಡ ಏನಂದ್ರು ಗೊತ್ತಾ?
ಇನ್ನು ಫೋಟೋದಲ್ಲಿ ರಣ್ವೀರ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಮಗಳಿಗೆ ಕೆಂಪು ಬಣ್ಣದ ಬಟ್ಟೆಯನ್ನು ಹಾಕಿದ್ದು, ಆಕೆಯ ಪಾದದ ಫೋಟೋವನ್ನು ಶೇರ್ ಮಾಡಿದ್ದಾರೆ.
View this post on Instagram
ಅತ್ತ ರಣ್ವೀರ್ ಕಪೂರ್ ಮತ್ತು ಆಲಿಯಾ ಭಟ್ ಕೂಡ ತಮ್ಮ ದೀಪಾವಳಿ ಹಬ್ಬದಂದು ಮುದ್ದಾದ ಮಗಳ ಜೊತೆಗೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ