/newsfirstlive-kannada/media/post_attachments/wp-content/uploads/2025/03/Ranya-roa-Gold-Case-8.jpg)
ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಬಂಧನಕ್ಕೆ ಒಳಗಾಗಿರುವ ರನ್ಯಾ ರಾವ್ಗೆ ದಿನದಿಂದ ದಿನಕ್ಕೆ ಕಾನೂನಿನ ಕುಣಿಕೆ ಬಿಗಿಯಾಗುತ್ತಾ ಸಾಗುತ್ತಿದೆ. ಸದ್ಯ ಈ ಸ್ಮಗ್ಲಿಂಗ್ ಕೇಸ್ನ್ನು ಮೂರು ಆಯಾಮಗಳಲ್ಲಿ ಪ್ರತ್ಯೇಕ ತನಿಖೆ ನಡೆಸಲಾಗುತ್ತಿದೆ. ಅದು ಕೂಡ ಮೂರು ತನಿಖಾ ಸಂಸ್ಥೆಗಳಿಂದ. ಮೊದಲಿಗೆ ಡಿಆರ್ಐ ಅಧಿಕಾರಿಗಳಿಂದ ಸ್ಮಗ್ಲಿಂಗ್ ಬಗ್ಗೆ ತನಿಖೆ ಶುರುವಾಗಿದೆ. ಒಟ್ಟು ಮೂರು ಸಂಸ್ಥೆಗಳು ಈ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಹಿಂದೆ ಕೈತೊಳೆದುಕೊಂಡು ಬೆನ್ನಟ್ಟಿವೆ.
ಇದನ್ನೂ ಓದಿ:ಮಂಡ್ಯದಲ್ಲಿ ಮನಕಲಕುವ ಘಟನೆ.. ಪ್ರೀತಿ, ಪ್ರೇಮದ ಮಾಯ ಬಜಾರ್ನಲ್ಲಿ ತಾಯಿ ಮಗಳು ಸಾವು
ಮೊದಲನೇ ಆಯಾಮದ ತನಿಖೆ ಯಾವುದು ಎಂಬುದನ್ನು ನೋಡುವುದಾದ್ರೆ, ಗೋಲ್ಡ್ ಸ್ಮಗ್ಲಿಂಗ್ ಜಾಲ ಬೆನ್ನಟ್ಟಿರುವ ಡಿಆರ್ಐ ಈಗಾಗಲೇ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. ದುಬೈ ಟು ಬೆಂಗಳೂರು ಗೋಲ್ಡ್ ಜಾಲ ಎಲ್ಲೆಡೆ ವಿಸ್ತರಿಸಿದೆ. ಇದರ ಪ್ರಮುಖ ಕಿಂಗ್ಪಿನ್ ಯಾರು ಎಂಬುದನ್ನು ತಿಳಿಯುವ ನಿಟ್ಟಿನಲ್ಲಿ ತನಿಖೆಯನ್ನು ಕೈಗೆತ್ತಿಕೊಂಡಿದೆ.
ಇನ್ನು ಎರಡನೇ ಆಯಾಮದಲ್ಲಿ ಸಿಬಿಐ ಕೂಡ ಈಗ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಅಖಾಡಕ್ಕೆ ಇಳಿದಿದೆ. ಕೇಂದ್ರ ಸರ್ಕಾರದ ಅಧಿಕಾರಿಗಳು ಭಾಗಿಯಾಗಿರುವ ಸಂಶಯದ ದೃಷ್ಟಿಯಲ್ಲಿ ಸಿಬಿಐ ತನ್ನ ತನಿಖೆಯನ್ನು ಕೈಗೆತ್ತಿಕೊಂಡಿದೆ. ಏರ್ಪೋರ್ಟ್ನಲ್ಲಿರುವ ಕೆಲ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ಸಿಬಿಐಗೆ ಇದೆ.
ಮತ್ತೊಂದು ಆಯಾಮದಲ್ಲಿ ಜಾರಿ ನಿರ್ದೇಶನಾಲಯವು ಕೂಡ ಈಗ ರನ್ಯಾ ರಾವ್ ಚಿನ್ನದ ಕಳ್ಳ ಸಾಗಾಟಣೆ ಪ್ರಕರಣದಲ್ಲಿ ಎಂಟ್ರಿ ಕೊಟ್ಟಿದೆ. ದುಬೈನಲ್ಲಿ ಗೋಲ್ಡ್ ಪಡೆಯಲು ಹಣ ಎಲ್ಲಿಂದ ಬಂತು. ಅಕ್ರಮ ಹಣ ವರ್ಗಾವಣೆ ಇಲ್ಲಿ ಆಗಿದೆಯಾ? ಎಂಬುದರೊಂದಿಗೆ ರನ್ಯಾ ಮನೆಯಲ್ಲಿ ಸಿಕ್ಕ 2 ಕೋಟಿ ರೂಪಾಯಿ ಹಣದ ಬಗ್ಗೆಯೂ ಇ.ಡಿ ತನಿಖೆ ನಡೆಸುತ್ತಿದೆ. ಗೋಲ್ಡ್ ಖರೀದಿಯಲ್ಲಿ ಯಾವ ರೀತಿ ಹಣ ಪಾವತಿ ಆಗಿದೆ ಎಂಬ ಬಗ್ಗೆಯೂ ಕೂಡ ತನಿಖೆ ನಡೆಸುತ್ತಿದೆ
ಇನ್ನು ಡಿಆರ್ಐ ತನಿಖೆಯಲ್ಲಿ ಮತ್ತೊಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಜನವರಿಯಿಂದ ಇಲ್ಲಿಯವರೆಗೂ ದುಬೈನಿಂದ ಭಾರತಕ್ಕೆ ಬರೋಬ್ಬರಿ 38.98 ಕೆಜಿ ಚಿನ್ನ ಬಂದಿದೆ ಎಂದು ಮೂಲಗಳು ಹೇಳಿವೆ. ಬೆಂಗಳೂರು ಹಾಗೂ ಮುಂಬೈ ಏರ್ಪೋರ್ಟ್ಗೆ 38.98 ಕೆಜಿ ಚಿನ್ನ ಅಕ್ರಮವಾಗಿ ಸಾಗಾಟವಾಗಿದೆ ಎಂದು ಹೇಳಲಾಗುತ್ತದೆ. ಈ ಸಂಬಂಧ ಇದುವರೆಗೂ ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಡಿಆರ್ಐ ಅಧಿಕಾರಿಗಳು, ಇದರಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ವ್ಯಕ್ತಪಡಿಸಿದೆ.
ಇದನ್ನೂ ಓದಿ:Justice for Swati: ಅಪರಿಚಿತ ಶವ ಪತ್ತೆ ಕೇಸ್‌ಗೆ ಟ್ವಿಸ್ಟ್; ಕರ್ನಾಟಕದಲ್ಲಿ ಭಾರೀ ಸಂಚಲನ.. ಏನಿದು ಕೇಸ್..?
ಈ ಬಗ್ಗೆ ತನಿಖೆ ನಡೆಸಲು ಸಿಬಿಐಗೆ, ಡಿಆರ್ಐ ಅಧಿಕಾರಿಗಳು ಪತ್ರವನ್ನೂ ಕೂಡ ಬರೆದಿದ್ದರು. ಹೀಗಾಗಿ ಬೆಂಗಳೂರು ಹಾಗೂ ಮುಂಬೈ ಏರ್ಪೋರ್ಟ್ನ ಕಸ್ಟಮ್ಸ್ ಅಧಿಕಾರಿಗಳನ್ನು ಸಿಬಿಐ ವಿಚಾರಣೆ ನಡೆಸುತ್ತಿದೆ. ಕಸ್ಟಮ್ಸ್ ಅಧಿಕಾರಿಗಳ ಸಹಾಯವಿಲ್ಲದೆ ಇಷ್ಟೆಲ್ಲಾ ದೊಡ್ಡ ಮಟ್ಟದ ಚಿನ್ನವನ್ನು ಅಕ್ರಮಾಗಿ ಸಾಗಾಟ ಮಾಡಲು ಸಾಧ್ಯವಿಲ್ಲ ಎಂಬ ಅನುಮಾನ ಮೂಡಿದೆ. 2024ರಲ್ಲಿ ದಾಖಲಾಗಿದ್ದ ಕೇಸ್ಗಳಲ್ಲಿ ಕಸ್ಟಮ್ಸ್ ಅಧಿಕಾರಿಗಲು ಭಾಗಿಯಾಗಿರುವುದು ಬಯಲಾಗಿತ್ತು. ಹೀಗಾಗಿ ಕಸ್ಟಮ್ಸ್ ಅಧಿಕಾರಿಗಳ ವಿಚಾರಣೆಗೆ ಸಿಬಿಐ ಮುಂದಾಗಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ