/newsfirstlive-kannada/media/post_attachments/wp-content/uploads/2025/03/Ranya-roa-dgp-ramachandra-roa.jpg)
ನಟಿ ರನ್ಯಾ ರಾವ್ ಕೇಸ್ನಲ್ಲಿ ತಂದೆ, ಡಿಜಿಪಿ ರಾಮಚಂದ್ರರಾವ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿನ್ನೆ ಚಿನ್ನ ಕಳ್ಳ ಸಾಗಾಟ ಮತ್ತು ಪ್ರೊಟೋಕಾಲ್ ಸಂಬಂಧ ಡಿಜಿಪಿ ರಾಮಚಂದ್ರರಾವ್ ಒಂದೂವರೆ ಗಂಟೆ ವಿಚಾರಣೆ ಎದುರಿಸಿದ್ದಾರೆ.
ರಾಮಚಂದ್ರರಾವ್ಗೆ ಸುತ್ತಿದ ಚಿನ್ನದ ಕೇಸ್!
ಗೋಲ್ಡ್ ಸ್ಮಗ್ಲಿಂಗ್ನಲ್ಲಿ ನಟಿ ರನ್ಯಾ ಬಂಧನದ ಬಳಿಕ ಆಕೆ ತಂದೆ ಡಿಜಿಪಿ ರಾಮಚಂದ್ರ ರಾವ್ಗೂ ಕಂಟಕ ಎದುರಾಗಿದೆ. ಶಕ್ತಿ ಭವನದಲ್ಲಿ ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತಾ, ಡಿಐಜಿ ವಂಶಿಕೃಷ್ಣ ನೇತೃತ್ವದಲ್ಲಿ ವಿಚಾರಣೆ. ನಡೆದಿದೆ. ಪ್ರೊಟೋಕಾಲ್ ಸಂಬಂಧ ರಾಮಚಂದ್ರರಾವ್ ವಿರುದ್ಧ ಕೇಳಿ ಬಂದ ಆರೋಪ ಸಂಬಂಧ ಉತ್ತರ ಪಡೆದಿದ್ದಾರೆ.
ಡಿಜಿಪಿ ಡಿಜಿಟ್ ಆನ್ಸರ್
- ರನ್ಯಾ ರಾವ್ಗೆ ಪ್ರೊಟೋಕಾಲ್ ನೀಡಲು ನೀವು ತಿಳಿಸಿದ್ರಾ?
- ಮಗಳಿಗಾಗಿ ನೀವೇನಾದ್ರು ವಾಹನವನ್ನ ಕಳುಹಿಸಿ ಕೊಟ್ರಾ?
- ಯಾರಿಗಾದ್ರು ಕರೆ ಮಾಡಿ ಪ್ರೊಟೋಕಾಲ್ ನೀಡಲು ಹೇಳಿದ್ರಾ?
- ಮಗಳ ಅಲ್ವಾ? ನೀವೇನಾದ್ರೂ ರನ್ಯಾ ಕರೆತರಲು ಹೋಗಿದ್ರಾ?
- ವಿಚಾರಣೆ ವೇಳೆ ರಾಮಚಂದ್ರ ರಾವ್ರಿಂದ ‘ನೋ’ ಉತ್ತರ!
ಇತ್ತ, ರಾಮಚಂದ್ರ ರಾವ್ ಎಲ್ಲದಕ್ಕೂ ಇಲ್ಲ ಅನ್ನೋ ರೆಡಿಮೇಡ್ ಆನ್ಸರ್ ಕೊಟ್ಟಿದ್ದಾರೆ. ಇನ್ನು, ಪ್ರೊಟೊಕಾಲ್ ಮತ್ತು ಸಿಸಿಟಿವಿ ದೃಶ್ಯ ಸೇರಿದಂತೆ ಕರೆ ಮಾಡಿರುವ ದಾಖಲೆಯನ್ನ ಗೌರವ್ ಗುಪ್ತಾ ಟೀಂ ಕಲೆ ಹಾಕಿದೆ. ಒಟ್ಟು ಒಂದೂವರೆ ಗಂಟೆ ವಿಚಾರಣೆ ಎದುರಿಸಿ ಹೊರ ಬರ್ತಿದ್ದಂತೆ ರಾಮಚಂದ್ರ ರಾವ್, ಯಾವುದೇ ಪ್ರತಿಕ್ರಿಯೆ ನೀಡ್ಲಿಲ್ಲ.
ರಾಮಚಂದ್ರರಾವ್ ವಿರುದ್ಧದ ಆರೋಪ ಸಂಬಂಧ ಸರ್ಕಾರ ತನಿಖೆಗೆ ಸೂಚಿಸಿತ್ತು. ಮೊನ್ನೆಯಷ್ಟೇ ರಾಮಚಂದ್ರರಾವ್ರನ್ನ ಕಡ್ಡಾಯ ರಜೆ ಮೇಲೆ ಕಳಿಸಿ ಶಿಕ್ಷೆ ನೀಡಲಾಗಿದೆ. ನಿನ್ನೆ ಗೌರವ್ ಗುಪ್ತಾ, ಡಿಐಜಿ ವಂಶಿಕೃಷ್ಣ ನೇತೃತ್ವದಲ್ಲಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ