ರನ್ಯಾ ರಾವ್ ಪ್ರಕರಣದಲ್ಲಿ ಮತ್ತೊಬ್ಬ ಅರೆಸ್ಟ್; ಯಾರು ಸಾಹಿಲ್ ಜೈನ್..?

author-image
Ganesh
Updated On
ರನ್ಯಾ ರಾವ್ ಪ್ರಕರಣದಲ್ಲಿ ಮತ್ತೊಬ್ಬ ಅರೆಸ್ಟ್; ಯಾರು ಸಾಹಿಲ್ ಜೈನ್..?
Advertisment
  • ರನ್ಯಾ ರಾವ್ ಪ್ರಕರಣದಲ್ಲಿ ಒಟ್ಟು ಮೂವರು ಅರೆಸ್ಟ್
  • ಸಾಹಿಲ್​ಗೂ ರನ್ಯಾಗೂ ಇರೋ ಸಂಬಂಧ ಏನು?
  • ಅಕ್ರಮ ಚಿನ್ನ ಕಳ್ಳಸಾಗಾಟ ಕೇಸ್​ನಲ್ಲಿ ರನ್ಯಾ ಬಂಧನ

ಬಳ್ಳಾರಿ: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಬಳ್ಳಾರಿ ಜಿಲ್ಲೆಯ ಚಿನ್ನಾಭರಣ ವ್ಯಾಪಾರಿಯನ್ನು ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯದ (DRI) ಅಧಿಕಾರಿಗಳು ಬಂಧಿಸಿದ್ದಾರೆ. ಸಾಹಿಲ್ ಸಕಾರಿಯಾ ಜೈನ್ ಬಂಧಿತ ಆರೋಪಿ.

ಯಾರು ಈತ..?

ಬಂಧಿತ ಸಾಹಿಲ್ ಜೈನ್ ಕುಟುಂಬ ಮೂಲತಃ ಬಳ್ಳಾರಿಯವರು. ಇಲ್ಲಿನ ಬ್ರಾಹ್ಮಿನ್ ರಸ್ತೆ ಬಳಿ ಇವರ ನಿವಾಸ ಇದೆ. ಸಾಹಿಲ್ ಜೈನ್ ತಂದೆ ಮಹೇಂದ್ರ ಜೈನ್ ಸಹೋದರರ ಬಟ್ಟೆ ಅಂಗಡಿ ಬಳ್ಳಾರಿಯಲ್ಲಿದೆ. ಸಾಹಿಲ್ ತಂದೆ ಮಹೇಂದ್ರ ಜೈನ್ ಸಹೋದರರು ಬಳ್ಳಾರಿಯಲ್ಲೇ ವಾಸವಿದ್ದಾರೆ.

ಸಾಹಿಲ್ ಜೈನ್ ಕುಟುಂಬ ಬೆಂಗಳೂರಿಗೆ ಶಿಫ್ಟ್ ಆಗಿದೆ. ಸಾಹಿಲ್ ಸೋದರ ಮಾವನ‌ ಜೊತೆಗೆ ಮುಂಬೈನಲ್ಲಿ ವಾಸವಿದ್ದಾನೆ. ಗೋಲ್ಡ್ ಸ್ಮಗ್ಲಿಂಗ್ ಕೇಸ್​ನಲ್ಲಿ ಸಾಹಿಲ್ ಈ ಹಿಂದೆಯೂ ಅರೆಸ್ಟ್ ಆಗಿದ್ದ. ಮುಂಬೈ ಏರ್​ ಪೋರ್ಟ್​ನಲ್ಲಿ ಅಧಿಕಾರಿಗಳು ಬಂಧಿಸಿದ್ದರು. ಈತನಿಗೆ ಹಲವು ಚಿನ್ನದ ವ್ಯಾಪಾರಿಗಳ ಜೊತೆ ನಂಟು ಹೊಂದಿರೋ ಆರೋಪ ಇದೆ. ಮುಂಬೈ‌ನಲ್ಲಿ ಗೋಲ್ಡ್ ಮಾರಾಟ ಮಾಡಿದ ಶಂಕೆ ಇದೆ.

ಸಾಹಿಲ್ ಮೇಲಿನ ಆರೋಪ ಏನು..?

ವಿದೇಶದಿಂದ ಅಕ್ರಮವಾಗಿ ತಂದ ಚಿನ್ನವನ್ನು ಮಾರಾಟ ಮಾಡುವಲ್ಲಿ ಸಾಹಿಲ್, ರನ್ಯಾಗೆ ನೆರವು ನೀಡುತ್ತಿದ್ದ ಎನ್ನಲಾಗಿದೆ. ಸ್ನೇಹಿತರ ಮೂಲಕ ರನ್ಯಾ ರಾವ್, ಸಾಹಿಲ್​ಗೆ ಪರಿಚಯ ಆಗಿದ್ದ. ಹಣದ ಆಸೆಗೆ ಚಿನ್ನ ಕಳ್ಳಸಾಗಣೆ ಕೃತ್ಯಕ್ಕೆ ಸಹಕಾರ ನೀಡಿದ್ದಾನೆ. ಅಂತೆಯೇ ಆತನ ಮಾರ್ಗದರ್ಶನದ ಮೂಲಕವೇ ರನ್ಯಾ ದುಬೈನಿಂದ ಬೆಂಗಳೂರು ಮೂಲಕ ಚಿನ್ನ ತರುತ್ತಿದ್ದಳು. ಬೆಂಗಳೂರಿಗೆ ಬಂದ ಚಿನ್ನವನ್ನು ಸಾಹಿಲ್ ವಿಲೇವಾರಿ ಮಾಡುತ್ತಿದ್ದ ಎಂಬ ಆರೋಪ ಇದೆ.

ಇದನ್ನೂ ಓದಿ: ರನ್ಯಾ ರಾವ್ ಮಲತಂದೆ, ಡಿಜಿಪಿಗೆ ಸರ್ಕಾರದ ಶಿಕ್ಷೆ; ಗೋಲ್ಡ್ ಸ್ಮಗ್ಲಿಂಗ್ ಕೇಸ್‌ಗೆ CBI ಎಂಟ್ರಿ ಆಗುತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment