Advertisment

ರನ್ಯಾ ಗೋಲ್ಡ್​ ಸ್ಮಗ್ಲಿಂಗ್, ಹಿರಿಯ ಅಧಿಕಾರಿಗಳಿಗೆ ಢವ ಢವ.. DRI ತನಿಖೆಯಲ್ಲಿ ಹೊರ ಬೀಳುತ್ತಾ ಹೆಸರುಗಳು?

author-image
Bheemappa
Updated On
ರನ್ಯಾ ರಾವ್​​ಗೆ ಮತ್ತೊಂದು ಬಿಗ್ ಶಾಕ್.. ಕಾನೂನು ಕುಣಿಕೆ ಮತ್ತಷ್ಟು ಬಿಗಿ..!
Advertisment
  • ಹಣದಾಸೆಗೆ ಏರ್​ಪೋರ್ಟ್​ನಲ್ಲಿ ಬಿಡುಬಿಟ್ಟಿದ್ದಾರಾ ಲಂಚಬಾಕರು?
  • ರನ್ಯಾಗೆ ಪ್ರೋಟೋಕಾಲ್ ವ್ಯವಸ್ಥೆ ಮಾಡಿದ ಹಿರಿಯ ಅಧಿಕಾರಿಗಳು
  • DRI ಸಿದ್ಧ ಪಡಿಸಿದ ಪಟ್ಟಿಯಲ್ಲಿ ಯಾರ ಯಾರ ಹೆಸರು ಇರಬಹುದು?

ಬೆಂಗಳೂರು: ರನ್ಯಾ ರಾವ್ ಮಾಡಿದ ಗೋಲ್ಡ್​ ಸ್ಮಿಗ್ಲಿಂಗ್​ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯದ ಪೊಲೀಸ್ ಇಲಾಖೆಯ ಕೆಲ ಹಿರಿಯ ಅಧಿಕಾರಿಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಈ ಸಂಬಂಧ ಹಿರಿಯ ಪೊಲೀಸ್​ ಅಧಿಕಾರಿಗೆ, ಡಿಆರ್​ಐ (Directorate of Revenue Intelligence) ಸಮನ್ಸ್​ ನೀಡಿದೆ.

Advertisment

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಆರ್​ಐ ಅಧಿಕಾರಿಗಳು ಹಿರಿಯ ಪೊಲೀಸ್ ಅಧಿಕಾರಿಗೆ ಸಮನ್ಸ್ ನೀಡಿದ್ದಾರೆ. ಏರ್ ಪೋರ್ಟ್​ನಲ್ಲಿ ನೇಮಕ ಆಗಿದ್ದ ನಾಲ್ವರು ಪ್ರೋಟೋಕಾಲ್ ಅಧಿಕಾರಿಗಳನ್ನ ವಿಚಾರಣೆ ಮಾಡಲಾಗಿದೆ. ರನ್ಯಾ ರಾವ್ ಬರುವಾಗ ಸೆಕ್ಯುರಿಟಿ ಕ್ಲಿಯರೆನ್ಸ್ ಮಾಡಲು ಹೇಳಿದ್ದರು. ಗ್ರೀನ್ ಚಾನೆಲ್ ಮೂಲಕ ಹೊರತರಲು ಸೂಚನೆ ನೀಡಿದ್ದರು. ಹಿರಿಯ ಅಧಿಕಾರಿ ಸೂಚನೆಯಂತೆ ನಾವು ನಮ್ಮ ಕೆಲಸ ಮಾಡಿದ್ದೇವೆ ಎಂದಿದ್ದಾರೆ. ಇದರಿಂದ ಪ್ರಾಥಮಿಕ ತನಿಖೆಯಲ್ಲಿ ಇಬ್ಬರು ಅಧಿಕಾರಿಗಳು ಕರ್ತವ್ಯ ಲೋಪ ಮಾಡಿರೋದು ಬೆಳಕಿಗೆ ಬಂದಿದೆ.

ವಿದೇಶದಿಂದ ಚಿನ್ನದ ಬಿಸ್ಕತ್​ಗಳನ್ನು ಅಕ್ರಮವಾಗಿ ತರುತ್ತಿದ್ದ ರನ್ಯಾಗೆ ಪ್ರೊಟೋಕಾಲ್ ಮಾಡಿರುವ ಹಿರಿಯ ಪೊಲೀಸರ ಪಟ್ಟಿಯನ್ನು ಡಿಆರ್​ಐ ಅಧಿಕಾರಿಗಳು ಸಿದ್ಧ ಮಾಡಿದ್ದಾರೆ. ಹೀಗೆ ಪದೇ ಪದೇ ಪ್ರೋಟೋಕಾಲ್​ಗೆ ಕರೆ ಮಾಡಿರುವ ಹೆಸರುಗಳ ಲಿಸ್ಟ್ ಮಾಡಲಾಗಿದೆ. ಇದು ವಿವಿಐಪಿ ಪ್ರೊಟೋಕಾಲ್​ಗೆ ಯಾರು ಯಾರು ಕರೆ ಮಾಡುತ್ತಿದ್ದರು ಅವರಿಗೆಲ್ಲರಿಗೂ ಈಗ ತಲೆ ಬಿಸಿ ಆಗಲಿದೆ.

ಇದನ್ನೂ ಓದಿ: ಟ್ರೈನ್​ ಹೈಜಾಕ್​​ ಅಪರೇಷನ್​ ಅಂತ್ಯ ಎಂದ ಪಾಕ್; ‘ಬರೀ ಸುಳ್ಳು’ ಎಂದ ಬಲೂಚಿಗಳು!

Advertisment

publive-image

ಸಾಮಾನ್ಯವಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಸಂಬಂಧಿಗಳು ಬರುವಾಗ ಪ್ರೊಟೋಕಾಲ್​ಗೆ ಕರೆ ಮಾಡುತ್ತಾರೆ. ಹೀಗೆ ಪದೇ ಪದೇ ಪ್ರೊಟೋಕಾಲ್​ಗೆ ಕರೆ ಮಾಡಿರುವ ಪೊಲೀಸ್ ಅಧಿಕಾರಿಗಳ ಲಿಸ್ಟ್ ಮಾಡಲಾಗಿದೆ. ಗೋಲ್ಡ್​ ಸ್ಮಗ್ಲಿಂಗ್ ಮಾಡಿರುವ ರನ್ಯಾ ರಾವ್​​ಗೆ ಪ್ರೋಟೋಕಾಲ್ ನೀಡಲು ಕೇವಲ ಒಬ್ಬ ಪೊಲೀಸ್ ಅಧಿಕಾರಿ ಮಾತ್ರ ಕರೆ ಮಾಡಿಲ್ಲ. 3- 4 ಜನ ಅಧಿಕಾರಿಗಳು ರನ್ಯಾಗೆ ಪ್ರೋಟೋಕಾಲ್ ವ್ಯವಸ್ಥೆ ಮಾಡಿದ್ದಾರೆ.

ಡಿಆರ್​ಐ ಎಲ್ಲವನ್ನು ತನಿಖೆ ಮಾಡಲು ಮುಂದಾದರೆ ಏರ್​ಪೋರ್ಟ್​ ಸಿಬ್ಬಂದಿಯ ಕಳ್ಳಾಟ ಕೂಡ ಬಯಲಾಗಲಿದೆ. ಪ್ರೋಟೋಕಾಲ್​ ಉಲ್ಲಂಘನೆ ಮಾಡಿದ ಎಲ್ಲ ಪೊಲೀಸರಿಗೆ ಸಂಕಷ್ಟಂತೂ ಇದ್ದೇ ಇರುತ್ತದೆ. ಸಿಎಂ ಹಾಗೂ ರಾಜ್ಯಪಾಲರಿಗೆ ಮಾತ್ರ ಶಿಷ್ಟಾಚಾರ ಪಾಲಿಸಬೇಕು. ಅವರು ಏರ್ಪೋರ್ಟ್​ಗೆ ಬಂದಾಗ ಮಾತ್ರ ಕಂಟ್ರೋಲ್​ ರೂಮ್​ಗೆ ಮಾಹಿತಿ ನೀಡಬೇಕು. ಆದರೆ ರನ್ಯಾ ಆಗಮನದ ವೇಳೆ ಏರ್​ಪೋರ್ಟ್​ಗೆ ಪೊಲೀಸರು ನಿಯೋಜನೆಗೊಂಡಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment