/newsfirstlive-kannada/media/post_attachments/wp-content/uploads/2025/03/Ranya-roa-Gold-Case-3.jpg)
ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಸ್ಯಾಂಡಲ್​ವುಡ್ ನಟಿ ರನ್ಯಾ ರಾವ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಬಂಧನಕ್ಕೆ ಒಳಗಾಗಿರುವ ರನ್ಯಾ ಕೇಸ್​ನ ವಿಚಾರಣೆಯು ನಿನ್ನೆ ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ. ವಿಚಾರಣೆಯ ತೀರ್ಪು ಇಂದು ಹೊರ ಬರಲಿದೆ.
ಈ ವೇಳೆ ಡಿಆರ್​ಐ ಅಧಿಕಾರಿಗಳು ರನ್ಯಾಳನ್ನ ಮೂರು ದಿನಗಳ ಕಾಲ ಕಸ್ಟಡಿಗೆ ಕೊಡಲು ಮನವಿ ಮಾಡಿದ್ರೆ ಅತ್ತ, ರನ್ಯಾ ಪರ ವಕೀಲರು ಅದೇಲ್ಲ ಯಾಕ್ ಬಿಡ್ರಿ ಎಂದಿದ್ದಾರೆ.
ಹೇಗಿತ್ತು ವಾದ-ಪ್ರತಿವಾದ..?
DRI ಪರ ವಕೀಲರು: ಮಹಾ ಸ್ವಾಮಿ. ರನ್ಯಾ ರಾವ್​ಳನ್ನ ಮೂರು ದಿನಗಳ ಕಸ್ಟಡಿಗೆ ಕೊಟ್ರೆ ತನಿಖೆಗೆ ಅನುಕೂಲ ಆಗುತ್ತೆ..
ರನ್ಯಾ ರಾವ್ ಪರ ವಕೀಲರು: ಮಹಾಸ್ವಾಮಿ ಆಕ್ಷೇಪಣೆ ಸಲ್ಲಿಸಲು ದಯಮಾಡಿ ಕಾಲಾವಕಾಶ ಕೊಡಿ..
DRI ಪರ ವಕೀಲರು: ಆಕೆ ಮೈಗೆ ಚಿನ್ನ ಅಂಟಿಸಿಕೊಂಡು ಬಂದಿದ್ದಾಳೆ.. ಇದು ರಾಷ್ಟ್ರೀಯ ಭದ್ರತೆಯ ವಿಚಾರ.. ಎಲ್ಲವನ್ನೂ ಕೋರ್ಟ್​ನಲ್ಲಿ ಹೇಳೋಕೆ ಆಗಲ್ಲ.. ಪ್ರೋಟೋಕಾಲ್​ ವೈಲೇಶನ್ಸ್​ ಆಗಿದೆ.. ಹೀಗಾಗಿ ನಮಗೆ ಕಸ್ಟಡಿ ಬೇಕು.. ತನಿಖೆ ವಿಚಾರವನ್ನ ಬೇಕಿದ್ರೆ ಮುಚ್ಚಿದ ಲಕೋಟೆಯಲ್ಲಿ ನೀಡ್ತೀವಿ.. ಎಲ್ಲವನ್ನ ಓಪನ್ ಕೋರ್ಟ್​ನಲ್ಲಿ ಹೇಳೋಕೆ ಆಗಲ್ಲ.. ಹೀಗೆ ಹೇಳಿದ್ರೆ ತನಿಖೆ ಉಳಿಯಲ್ಲ..
ರನ್ಯಾ ರಾವ್ ಪರ ವಕೀಲರು: ಅವತ್ತೇ ಕಸ್ಟಡಿ ಕೇಳ್ಬೋದಿತ್ತು. ಆಕೆ ಮೊಬೈಲ್​ ಎಲ್ಲವನ್ನ ಸೀಜ್ ಮಾಡಲಾಗಿದೆ. ಮನೆಯನ್ನ ಶೋಧ ಕೂಡ ಮಾಡಲಾಗಿದೆ..
ಇದನ್ನೂ ಓದಿ: ಸಿದ್ದರಾಮಯ್ಯ ಬಜೆಟ್​​ನಲ್ಲಿ ‘ಸ್ಕಿಲ್ ಟು ಸ್ಕೂಲ್’ ಯೋಜನೆ ನಿರೀಕ್ಷೆ.. ಏನಿದು..?
ವಾದ ಪ್ರತಿವಾದದ ಬಳಿಕ ತೀರ್ಪು ಕೊಟ್ಟ ನ್ಯಾಯಧೀಶರು ಇಂದು ತೀರ್ಪು ಕೊಡೋದಾಗಿ ತಿಳಿಸಿದ್ದಾರೆ. ಪೊಲೀಸರು ಮಾತ್ರ ಇದೇ ಕೇಸ್​ನ ಎಲ್ಲಾ ಆಯಾಮಗಳಲ್ಲೂ ವಿಚಾರಣೆ ನಡೆಸ್ತಿದ್ದಾರೆ. ಪೊಲೀಸರ ಪ್ರಶ್ನೆಗೆ ಸಮರ್ಪಕವಾಗಿ ಈ ಬಂಗಾರಿ ಉತ್ತರವನ್ನೇ ಕೊಡ್ತಿಲ್ಲವಂತೆ. ಮತ್ತೊಂದ್ಕಡೆ, ಡಿಆರ್​ಐ ಟೀಂ ಟೆಕ್ನಿಕಲ್ ಆಗಿ ವಿಚಾರಣೆ ನಡೆಸೋಕೆ ಪ್ಲ್ಯಾನ್ ಮಾಡ್ಕೊಂಡಿದೆ.
ಬಂಗಾರದ ಬಲೆಯಲ್ಲಿ...!
- ಇಷ್ಟೊಂದು ಚಿನ್ನ ರಾಜಾರೋಷವಾಗಿ ತರೋದಕ್ಕೆ ಹೇಗೆ ಸಾಧ್ಯ?
- ಈ ಹಿಂದೆ ಇದೇ ರೀತಿ ತಂದಿದ್ರೆ ಏರ್​ಪೋರ್ಟ್​ ದಾಟಿದ್ದು ಹೇಗೆ?
- ಏರ್ ಪೋರ್ಟ್​ನಿಂದ ರನ್ಯಾ ಸುಲಭವಾಗಿ ಹೊರ ಬಂದಿದ್ಹೇಗೆ?
ಅಷ್ಟಕ್ಕೂ ರನ್ಯಾ ಮೊಬೈಲ್ ವಶಕ್ಕೆ ಪಡೆದಿರುವ ಡಿಆರ್​ಐ ಅಧಿಕಾರಿಗಳು, ಕಾಲ್ ಡಿಟೈಲ್ಸ್​ ಚೆಕ್ ಮಾಡೋಕೆ ಸಿದ್ಧತೆ ನಡೆಸಿದ್ದಾರೆ. ಅತ್ತ, ರನ್ಯಾ ಜೊತೆ ನಿರಂತರ ಸಂಪರ್ಕದಲ್ಲಿದ್ದವರಿಗೆ ಸಂಕಷ್ಟ ಸಾಧ್ಯತೆ ಇದ್ದು, ಚಿನ್ನದ ಮೂಲ ಹಾಗೂ ತಲುಪಿಸುವ ವಿಳಾಸದ ಬಗ್ಗೆಯೂ ಮಾಹಿತಿ ಕಲೆ ಹಾಕ್ತಿದ್ದಾರೆ. ಆದ್ರೆ, ಡಿಆರ್​​ಐ ಟೀಂ ಮೂರು ಪ್ರಮುಖ ಅನುಮಾನಗಳಿವೆ. ಇಷ್ಟೊಂದು ಚಿನ್ನವನ್ನ ರಾಜಾರೋಷವಾಗಿ ತರೋದಕ್ಕೆ ಹೇಗೆ ಸಾಧ್ಯ ಆಗುತ್ತೆ? ಹಾಗೇ ಈ ಹಿಂದೆ ಇದೇ ರೀತಿ ತಂದಿದ್ರೆ ಚೆಂದುಳ್ಳಿ ಏರ್​ಪೋರ್ಟ್​ ದಾಟಿದ್ದು ಹೇಗೆ? ಹಾಗೇ ಏರ್​ ಪೋರ್ಟ್​ನಿಂದ ರನ್ಯಾ ಸುಲಭವಾಗಿ ಹೊರ ಬಂದಿದ್ದೇಗೆ ಎಂಬ ಪ್ರಶ್ನೆ ಕಾಡಿದೆ. ಈ ರನ್ಯಾಳ ಹಿಂದೆ ದೊಡ್ಡ ಸಿಂಡಿಕೇಟ್​ ಇದ್ಯಾ ಅನ್ನೋ ಡೌಟ್ ಕೂಡ ಶುರುವಾಗಿದ್ದು, ಕಾಲ್ ಡಿಟೇಲ್ಸ್​ನಲ್ಲಿ ದೊಡ್ಡ ದೊಡ್ಡ ಹೆಸರು ಬಹಿರಂಗ ಸಾಧ್ಯತೆ ಕೂಡ ಇದೆ.
ಇದನ್ನೂ ಓದಿ: ಬಂಧನ ಬಳಿಕ ಸೋತು ಸೊರಗಿ ಹೋದ ನಟಿ ರನ್ಯಾ; Exclusive Photo
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us