/newsfirstlive-kannada/media/post_attachments/wp-content/uploads/2025/03/Ranya-roa-Gold-Case.jpg)
ವಿದೇಶದಿಂದ ಅಕ್ರಮವಾಗಿ ಚಿನ್ನವನ್ನು ಬಚ್ಚಿಟ್ಟುಕೊಂಡು ಬಂದ ಪ್ರಕರಣದಲ್ಲಿ ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ (Actress Ranya Rao) ಅರೆಸ್ಟ್ ಆಗಿದ್ದಾರೆ. ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ (Gold Smuggling) ಬಂಧನಕ್ಕೆ ಒಳಗಾಗಿರುವ ಕಳಂಕಿತ ನಟಿ, ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ್ದಾರೆ.
‘ನಾನು ಟ್ರ್ಯಾಪ್ಗೆ ಒಳಗಾಗಿದ್ದೆ’ ಎಂದು ನಟಿ ರನ್ಯಾ ರಾವ್ ಹೇಳಿಕೆ ನೀಡಿದ್ದಾರಂತೆ. ಹೀಗಾಗಿ ಪ್ರಕರಣದ ಮೇಲೆ ಮತ್ತಷ್ಟು ಅನುಮಾನಗಳು DRI Officials ಅಧಿಕಾರಿಗಳಿಗೆ ಕಾಡಿದೆ ಎನ್ನಲಾಗುತ್ತಿದೆ. ನಟಿಯ ಹೇಳಿಕೆಯ ಆಧಾರದ ಮೇಲೆ ‘ಟ್ರ್ಯಾಪ್’ ಹಿಂದಿರುವ ಸೂತ್ರಧಾರಿಗಳಿಗಾಗಿ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತೀವ್ರ ಶೋಧಕಾರ್ಯ ನಡೆಸ್ತಿದ್ದಾರೆ.
ರನ್ಯಾ ಹೇಳಿಕೆ ಏನು..?
ಈ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ. ನಾನು ಚಿನ್ನಾಭರಣಗಳ ಸ್ಮಗ್ಲರ್ಗಳಿಂದ ಟ್ರ್ಯಾಪ್ಗೆ ಒಳಗಾದೆ ಎಂಬ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಹಾಗಾದರೆ ನಟಿಗೆ ಬೆದರಿಕೆ ಹಾಕಿ ಈ ಕೆಲಸ ಮಾಡಿಸಿದ್ದು ಯಾರು? ಪ್ರಕರಣದ ಹಿಂದೆ ಇರುವ ಅಸಲಿ ಕೈ ಯಾವುದು ಎನ್ನುವ ತನಿಖೆಯನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ. ಚಿನ್ನ ಸಾಗಣೆ ಕೇಸ್ನಲ್ಲಿ ರನ್ಯಾ ಕೂಡ ಕಮೀಷನ್ ಪಡೆದಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ:ಇಂದು ರನ್ಯಾ ರಾವ್ ತೀರ್ಪು.. ತನಿಖೆ ವೇಳೆ ಕಾಡಿವೆ ಆ ಮೂರು ಪ್ರಶ್ನೆಗಳು..!
ಹೀಗಾಗಿ ಅಧಿಕಾರಿಗಳು ಎಲ್ಲಾ ಆಯಾಮದಲ್ಲೂ ತನಿಖೆ ಆರಂಭಿಸಿದ್ದಾರೆ. ನಟಿ ಹೇಳ್ತಿರೋದು ನಿಜನಾ? ಇಲ್ಲ, ಈ ಪ್ರಕರಣದಲ್ಲಿ ತಾನು ಮುಗ್ಧೆ ಎಂದು ಹೇಳಲು ಆ ರೀತಿಯ ಹೇಳಿಕೆ ನೀಡುತ್ತಿದ್ದಾರಾ? ಹಣದ ಆಸೆಗೆ ಬಿದ್ದು ಚಿನ್ನ ಸಾಗಾಟದಲ್ಲಿ ಭಾಗಿಯಾಗಿದ್ದರಾ ಎಂಬ ಪ್ರಶ್ನೆ ಶುರುವಾಗಿದೆ.
27ಕ್ಕೂ ಹೆಚ್ಚು ಬಾರಿ ದುಬೈ ಯಾತ್ರೆ
ಆರು ತಿಂಗಳ ಅವಧಿಯಲ್ಲಿ ರನ್ಯಾ ರಾವ್ ಬರೋಬ್ಬರಿ 27ಕ್ಕೂ ಹೆಚ್ಚು ಬಾರಿ ದುಬೈ ಪ್ರವಾಸ ಮಾಡಿದ್ದಾರೆ. ಈ ಬಗ್ಗೆಯೂ ಅಧಿಕಾರಿಗಳು ನಟಿಯನ್ನು ಪ್ರಶ್ನೆ ಮಾಡ್ತಿದ್ದಾರೆ. ದುಬೈಗೆ ನಿರಂತರವಾಗಿ ಹೋಗಿ ಬರುತ್ತಿರುವ ಬಗ್ಗೆಯೂ ಕೇಳಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಫೈನಲ್ ಪಂದ್ಯದ ಪ್ಲೇಯಿಂಗ್-11ರಲ್ಲಿ ಭಾರೀ ಬದಲಾವಣೆ? ಅಸಲಿ ವಿಚಾರ ಬಿಚ್ಚಿಟ್ಟ ಗವಾಸ್ಕರ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ