/newsfirstlive-kannada/media/post_attachments/wp-content/uploads/2025/03/Ranya-roa-dgp-ramachandra-roa.jpg)
ಚಿನ್ನದ ಮಲ್ಲಿಗೆ ಹೂವೆ ಅಂತ ಬೆಳೆಸಿದ ಮಗಳು ಡಿಜಿಪಿ ಕೆ. ರಾಮಚಂದ್ರ ರಾವ್ ಅವರಿಗೆ ಮುಳ್ಳಾಗಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಬೆಳಕಿಗೆ ಬಂದ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಮಲತಂದೆ ರಾಮಚಂದ್ರ ರಾವ್ ಖಾಕಿ ಡ್ರೆಸ್ಗೆ ಕಪ್ಪು ಚುಕ್ಕೆಗಳ ಸಂಗಮವಾಗಿದೆ.
ಡಿಜಿಪಿ ರಾಮ್ಚಂದ್ರರಾವ್ಗೆ ಕಡ್ಡಾಯ ರಜೆ ಕೊಟ್ಟ ಸರ್ಕಾರ
ಕಬ್ಬಿಣದ ಸರಳಿನಿಂದ ಆಚೆ ಬರಲು ರನ್ಯಾ ರಾವ್ ಸರ್ವ ಯತ್ನ
ನಟಿ ರನ್ಯಾ ರಾವ್ ಅಕ್ರಮ ಚಿನ್ನ ಕಳ್ಳಸಾಗಾಣೆ ಪ್ರಕರಣದ ತನಿಖೆಯಲ್ಲಿ ಆಕೆಯ ಮಲತಂದೆ ಡಿಜಿಪಿ ಕೆ. ರಾಮಚಂದ್ರ ರಾವ್ ಅವರು ಪ್ರಭಾವ ಬೀರುವ ಸಾಧ್ಯತೆ ಇದೆ. ಅಲ್ಲದೆ, ಏರ್‌ಪೋರ್ಟ್‌ನಲ್ಲಿ ಶಿಷ್ಟಾಚಾರ ಸೌಲಭ್ಯ ಕಲ್ಪಿಸಿದ್ದ ಆರೋಪವೂ ಇದೆ. ಈ ಕಾರಣ, ಮಲತಂದೆ ಡಿಜಿಪಿ ಕೆ.ರಾಮಚಂದ್ರ ರಾವ್ಗೆ ಕಡ್ಡಾಯ ರಜೆ ಶಿಕ್ಷೆ ನೀಡಲಾಗಿದೆ. ತನಿಖೆ ಮುಗಿಯೋ ತನಕ ಡಿಜಿಪಿ ಕೆ.ರಾಮಚಂದ್ರ ರಾವ್ರನ್ನ ಕಡ್ಡಾಯ ರಜೆ ಮೇಲೆ ಇರಲಿದ್ದಾರೆ ಅಂತ ರಾಜ್ಯ ಸರ್ಕಾರ ಹೇಳಿದೆ. ರಾಮಚಂದ್ರ ರಾವ್ ಅವರ ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಎಡಿಜಿಪಿ ಶರತ್ಚಂದ್ರರನ್ನ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಜಾಮೀನು ಕೋರಿ ಮೇಲ್ಮನವಿ ಸಲ್ಲಿಸಿದ ರನ್ಯಾ ರಾವ್
ನಾಳೆ ಆದ್ರೂ ಬೇಲ್ ಸಿಗುತ್ತಾ ಅನ್ನೋ ಟೆನ್ಶನ್ ಟೆನ್ಶನ್
ಕಳೆದ ಶುಕ್ರವಾರವಷ್ಟೇ ರನ್ಯಾ ರಾವ್ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತವಾಗಿತ್ತು. ಬೇಲ್ನ ನಿರೀಕ್ಷೆಯಲ್ಲಿದ್ದ ರನ್ಯಾಗೆ ಸದ್ಯ ಜೈಲುವಾಸ ಫಿಕ್ಸ್ ಆಗಿದೆ. ಆದ್ರೆ, ನಿನ್ನೆ ಸೆಷನ್ಸ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಕೆ ಆಗಿದೆ. ಇತ್ತ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಲ್ಲಿ ತರುಣ್ ಕೊಂಡೂರು ಸಲ್ಲಿಸಿದ್ದ ಜಾಮೀನು ಅರ್ಜಿಗೆ ಡಿಆರ್ಐ ಪರ ವಕೀಲರು ಅಕ್ಷೇಪಣೆ ಹಾಕಿದ್ದಾರೆ. ಈ ಎರಡು ಅರ್ಜಿಗಳು ಸೋಮವಾರ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
ಈ ಮಧ್ಯೆ, ಉಡುಪಿಯಲ್ಲಿ ಮಾತನಾಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕೇಸ್ನಲ್ಲಿ ರಾಜ್ಯದ ಸಚಿವರ ಹೆಸರು ಕೇಳುತ್ತಿದೆ. ಆದರೆ ರಾಜ್ಯ ಸರ್ಕಾರ ಚಕಾರ ಎತ್ತುತ್ತಿಲ್ಲ. ಹೀಗಾಗಿ ಸಂಪೂರ್ಣವಾಗಿ ತನಿಖೆಯನ್ನ ಸಿಬಿಐಗೆ ಒಪ್ಪಿಸಬೇಕು ಅಂತ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಜೈಲಿನಿಂದಲೇ ರನ್ಯಾ ರಾವ್ ಹೊಸ ಬಾಂಬ್.. ಡಿಜಿಪಿ ರಾಮಚಂದ್ರರಾವ್‌ಗೆ ಬಿಗ್ ಶಾಕ್; ಏನಿದು ಹೊಸ ಟ್ವಿಸ್ಟ್!
ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ರಾಜ್ಯ ಸರ್ಕಾರಕ್ಕೂ ಮುಜುಗರ ತರ್ತಿದೆ. ಕಸ್ಟಮ್ ತಪ್ಪಿಸಿ ಪ್ರೋಟೋಕಾಲ್ ಮೂಲಕ ಅಷ್ಟೊಂದು ಚಿನ್ನ ಹೇಗೆ ತರಲಾಯ್ತು? ಭಾರತ ಸರ್ಕಾರದ ಇಂಟೆಲಿಜೆನ್ಸ್ ಬರುವವರೆಗೆ ರಾಜ್ಯ ಇಂಟೆಲಿಜೆನ್ಸ್ ಏನ್ ಮಾಡ್ತಿತ್ತು ಅನ್ನೋ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ