newsfirstkannada.com

BIGG BOSS: ಪ್ರತಾಪ್​ಗೆ ಕ್ಷಮೆ ಕೇಳಿಲ್ಲ ಅಂದ್ರೆ ಪರಿಣಾಮ ನೆಟ್ಟಗಿರಲ್ಲ; ಇಶಾನಿಗೆ ವಾರ್ನಿಂಗ್ ಕೊಟ್ಟ ಫ್ಯಾನ್ಸ್!

Share :

Published January 17, 2024 at 4:22pm

  ಕಾಗೆ ಇನ್ನೂ ಸಿಂಪತಿ ಕಾರ್ಡ್​ ಯೂಸ್ ಮಾಡಿಕೊಂಡು ಇದೆ

  ಕರುನಾಡ ಜನತೆಯ ಕೆಂಗಣ್ಣಿಗೆ ಗುರಿಯಾದ ಱಪರ್​ ಇಶಾನಿ​

  ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿದ ಡ್ರೋನ್​​ ಫ್ಯಾನ್ಸ್​

ಬಿಗ್​ಬಾಸ್​​ ಸೀಸನ್ 10 ನೋಡ ನೋಡುತ್ತಿದ್ದಂತೆ ತನ್ನ ಅಂತಿಮ ಘಟ್ಟಕ್ಕೆ ತಲುಪುತ್ತಿದೆ. ಈ ಸೀಸನ್ ಫಿನಾಲೆಗೆ ಇನ್ನೇನು ಎರಡೇ ವಾರಗಳು ಬಾಕಿ ಇರಲಿದ್ದು, ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚುತ್ತಿದೆ. ಇನ್ನೂ ಇದೇ ಸಮಯದಲ್ಲಿ ಬಿಗ್ ಮನೆಯೊಳಗೆ ಈ ವಾರ ಮಾಜಿ ಸ್ಪರ್ಧಿಗಳು ಅಂದ್ರೆ ಎಲಿಮಿನೇಟೆಡ್ ಕಂಟೆಸ್ಟೆಂಟ್​ಗಳು ಅತಿಥಿಗಳಾಗಿ ವಾಪಸ್ ಬಂದಿದ್ದಾರೆ.

ಇಶಾನಿ, ಮೈಕಲ್, ನೀತು, ಸ್ನೇಹಿತ್, ರಕ್ಷಕ್, ಸಿರಿ, ಭಾಗ್ಯಶ್ರೀ ಎಲ್ಲರೂ ಕೂಡ ಮನೆಗೆ ವಾಪಸ್ ಬಂದಿದ್ದಾರೆ. ತುಕಾಲಿ ಸಂತೋಷ್​ ಹುಟ್ಟು ಹಬ್ಬದ ಪ್ರಯುಕ್ತ ಮನೆಯ ಸ್ಪರ್ಧಿಗಳಿಗೆ ಬಿಗ್​ಬಾಸ್​ ಈ ರೀತಿಯ ಸರ್​ಪ್ರೈಸ್ ನೀಡಿದ್ದಾರೆ. ಇನ್ನು ಇಶಾನಿ ಅವರು ಬಂದ ಕೂಡಲೇ ಪ್ರತಾಪ್ ಅವರನ್ನ ಹೊರತು ಪಡಿಸಿ ಎಲ್ಲರನ್ನ ಮಾತಾಡಿಸಿದ್ದಾರೆ. ಇಶಾನಿ ಹಳೇ ಮನಸ್ತಾಪಗಳನ್ನ ಇಟ್ಟುಕೊಂಡು ಪ್ರತಾಪ್ ಅವರಿಗೆ ಏಕಾಏಕಿ ಮುಖದ ಮೇಲೆನೆ ಕಾಗೆ ಕಾ..ಕಾ.. ಅಂತಿದೆ ಎಂಬ ಪದ ಬಳಕೆಯನ್ನ ಮಾಡಿ ಕೋಪ ತೀರಿಸಿಕೊಂಡಿದ್ದಾರೆ.

ಈ ಮನೆಯಲ್ಲಿ ಕಾಗೆ ಇನ್ನೂ ಸಿಂಪತಿ ಕಾರ್ಡ್​ ಯೂಸ್ ಮಾಡ್ಕೊಂಡು ಇದೆ ಎಂದು ಎಲ್ಲರ ಮುಂದೆ ಪ್ರತಾಪ್ ಅವರಿಗೆ ಮಾನ ಹಾನಿ ಮಾಡಿದ್ದಾರೆ. ಇದಕ್ಕೆ ಪ್ರತಾಪ್ ಯಾವುದೇ ರೀತಿ ಮರು ಪ್ರತಿಕ್ರಿಯೇ ನೀಡಿಲ್ಲ. ಆದ್ರೆ ಮನೆಯಿಂದ ಆಚೆ ಇಶಾನಿ ಆಡಿದ ಮಾತುಗಳ ವಿರುದ್ಧ ಪ್ರತಾಪ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಿಡಿ ಕಾರಿದ್ದಾರೆ. ಇಶಾನಿ ಅವರ ಅಫಿಶಿಯಲ್ ಸೋಷಿಯಲ್ ಮೀಡಿಯಾ ಅಕೌಂಟ್​ಗಳಲ್ಲಿ ಪ್ರತಾಪ್ ಅಭಿಮಾನಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ನಿನ್ನೆ ರಾತ್ರಿಯಿಂದಲೂ ಇಡೀ ಸೋಷಿಯಲ್ ಮಿಡಿಯಾ ಫುಲ್ ಈ ವಿಷಯ ವೈರಲ್ ಆಗಿದೆ.

ಇದನ್ನು ಓದಿ: BBK10: ಕಾಗೆ ಹಾರಿಸಿಕೊಂಡು ಬಂದವ್ರಿಂದಲೇ ಗಲೀಜು.. ಇಶಾನಿ ಮಾತಿಗೆ ರೊಚ್ಚಿಗೆದ್ದ ಡ್ರೋನ್ ಪ್ರತಾಪ್‌ ಫ್ಯಾನ್ಸ್‌!

ಸದ್ಯ ಇಶಾನಿ ಈಗ ಟ್ರೋಲ್ ಪೇಜ್​ಗಳ ಆಹಾರವಾಗಿದ್ದಾರೆ. ಇಶಾನಿ ಈ ಮಾತುಗಳ ವರ್ತನೆಗೆ ಇಡೀ ಕರುನಾಡ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಒಟ್ಟಿನಲ್ಲಿ ಸಿಂಪಥಿ ಕಾರ್ಡ್​ ಯೂಸ್ ಮಾಡ್ಕೊಂಡು ಕಾಗೆ ಇನ್ನೂ ಕಾ..ಕಾ.. ಅಂತಿದೆ ಅನ್ನೋ ಈ ಪದ ಬಳಕೆಗೆ ದೊಡ್ಮನೆಯಿಂದ ಆಚೆ ಬಂದ್ಮೇಲೆ ಇಶಾನಿ ಬಾರಿ ಬೆಲೆ ತೆರಬೇಕಾಗುತ್ತದೆ ಅನ್ನಿಸುತ್ತಿದೆ. ಇಶಾನಿ ಆಚೆ ಬಂದ ಕೂಡಲೇ ಪ್ರತಾಪ್ ಅಭಿಮಾನಿಗಳು ಇಶಾನಿ ಅವರಲ್ಲಿ ಕ್ಷಮೆ ಕೇಳಿಸಬೇಕು ಎಂಬ ಕೂಗು ಕೂಡ ಕೇಳಿ ಬರ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

BIGG BOSS: ಪ್ರತಾಪ್​ಗೆ ಕ್ಷಮೆ ಕೇಳಿಲ್ಲ ಅಂದ್ರೆ ಪರಿಣಾಮ ನೆಟ್ಟಗಿರಲ್ಲ; ಇಶಾನಿಗೆ ವಾರ್ನಿಂಗ್ ಕೊಟ್ಟ ಫ್ಯಾನ್ಸ್!

https://newsfirstlive.com/wp-content/uploads/2024/01/bigg-boss-2024-01-17T160003.983.jpg

Load More