ಕೇವಲ 20 ನಿಮಿಷ ಚಾರ್ಜ್​​ ಮಾಡಿದ್ರೆ 200 ಕಿ.ಮೀ ಮೈಲೇಜ್​ ಕೊಡುತ್ತೆ; ಬೆಂಗಳೂರು ಸಿಟಿಗೆ ಬೆಸ್ಟ್​ ಬೈಕ್​​

author-image
Ganesh Nachikethu
Updated On
ಕೇವಲ 20 ನಿಮಿಷ ಚಾರ್ಜ್​​ ಮಾಡಿದ್ರೆ 200 ಕಿ.ಮೀ ಮೈಲೇಜ್​ ಕೊಡುತ್ತೆ; ಬೆಂಗಳೂರು ಸಿಟಿಗೆ ಬೆಸ್ಟ್​ ಬೈಕ್​​
Advertisment
  • ದೇಶಿಯ ಮಾರುಕಟ್ಟೆಗೆ ಬಂತು ಹೈ-ಮೋಲ್ಟೇಜ್​​ ಎಲೆಕ್ಟ್ರಿಕ್​​​ ಬೈಕ್
  • 250-300 ಸಿಸಿಯನ್ನು ಹೊಂದಿದೆ ಹೊಸ ಎಲೆಕ್ಟ್ರಿಕ್​ ಟೂ ವ್ಹೀಲರ್
  • 3.6 ಸೆಕೆಂಡ್​​ಗೆ 0 ರಿಂದ 60kmph ವೇಗವನ್ನು ಪಡೆಯುತ್ತದೆ..!

ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಲಗ್ಗೆ ಇಟ್ಟ ಮೇಲೆ ಎಲ್ಲರ ಚಿತ್ತ ಅದರತ್ತ ನೆಟ್ಟಿದೆ. ಕಡಿಮೆ ಖರ್ಚಿನಲ್ಲಿ ಸುಖಕರ ಪ್ರಯಾಣವನ್ನು ಎಲೆಕ್ಟ್ರಿಕ್​ ವಾಹನ ಒದಗಿಸುತ್ತದೆ. ಸದ್ಯ ಭಾರತದಲ್ಲಿ ನಾನಾ ಕಂಪನಿಗಳು ಅತಿ ಕಡಿಮೆ ಸಮಯದಲ್ಲಿ ಚಾರ್ಜಿಂಗ್​ ಮತ್ತು ಹೆಚ್ಚಿನ ಮೈಲೇಜ್​ ಒದಗಿಸುವ ವಾಹನವನ್ನ ಪರಿಚಯಿಸುತ್ತಿದೆ. ಅದರಂತೆಯೇ ಚೆನ್ನೈ ಮೂಲದ ಸ್ಟಾರ್ಟ್​ಅಪ್​ Raptee.HV ದೇಶಿಯ ಮಾರುಕಟ್ಟೆಗೆ ಹೈ-ಮೋಲ್ಟೇಜ್​​ ಎಲೆಕ್ಟ್ರಿಕ್​​​ ಬೈಕ್ ಅನ್ನು ಬಿಡುಗಡೆ ಮಾಡಿದೆ.

ಹೊಸ ಬೈಕ್​ 250-300 ಸಿಸಿಯನ್ನು ಹೊಂದಿದ್ದು, ಪೆಟ್ರೋಲ್​​ ಬೈಕ್​ಗಳೊಂದಿಗೆ ಸ್ಪರ್ಧಿಸುವ ಸಾಮರ್ಥ್ಯ ಹೊಂದಿದೆ. ಅಂದಹಾಗೆಯೇ Raptee.HV ಪರಿಚಯಿಸಿರುವ ಬೈಕ್ ಸಾರ್ವತ್ರಿಕ ಚಾರ್ಜಿಂಗ್​ ವ್ಯವಸ್ಥೆಯನ್ನು ಹೊಂದಿರುವ ದೇಶದ ಮೊದಲ ಮಾದರಿಯಾಗಿದೆ. ಇವುಗಳನ್ನು ಎಲೆಕ್ಟ್ರಿಕ್​​ ಕಾರುಗಳಲ್ಲಿ ಬಳಸಲಾಗುತ್ತದೆ.

ವಿಭಿನ್ನ ಲುಕ್​​

ಅಂದಹಾಗೆಯೇ ನೂತನ ಬೈಕ್​​ ಅನ್​ಬೋರ್ಡ್​​ ಚಾರ್ಜರ್​ನೊಂದಿಗೆ ಬರುತ್ತದೆ. CC52 ಕಾರು​ ಚಾರ್ಜಿಂಗ್​ ಸ್ಟೇಷನ್​ಗಳಲ್ಲಿಯೂ ಲಭ್ಯವಿದೆ. ಇನ್ನು ನೋಟ ಮತ್ತು ವಿನ್ಯಾಸದಲ್ಲಿ ವಿಭಿನ್ನ ಲುಕ್​ ಹೊಂದಿದೆ. ಬೈಕ್​ನ ಹೆಚ್ಚಿನ ಭಾಗವನ್ನು ಮುಚ್ಚಲಾಗಿದೆ. ಇದರಲ್ಲಿ ಎಲ್​ಇಡಿ ಹೆಡ್​​ಲೈಟ್​​, ಟಚ್​ಸ್ಕ್ರೀನ್​​ ಡಿಜಿಟಲ್​​ ಇನ್ಟ್ರುಮೆಂಟ್​​ ಕ್ಲಸ್ಟರ್​​​ ಹೊಂದಿದೆ. ಡಿಸ್​​ಪ್ಲೇನಲ್ಲಿ ​ವೇಗ ಬ್ಯಾಟರಿ, ಸಮಯ, ಸ್ಟ್ಯಾಂಡ್​​, ಬ್ಲೂಟೂತ್​ ಕನೆಕ್ಟಿವಿಟಿ, ಜಿಪಿಎಸ್​​ ನ್ಯಾವಿಗೇಷನ್​ ಮುಂತಾದ ಮಾಹಿತಿಯನ್ನು ಒದಗಿಸುತ್ತದೆ.

publive-image

ನೂತನ ಬೈಕ್​ನಲ್ಲಿ 5.4kWh ಸಾಮರ್ಥ್ಯದ 240 ವೋಲ್ಡ್​​ ಬ್ಯಾಟರಿಯನ್ನು ನೀಡಲಾಗಿದೆ. ಒಂದೇ ಚಾರ್ಜ್​ನಲ್ಲಿ 200 ಕಿಮೀ ಕ್ರಮಿಸುತ್ತದೆ. ಬೈಕಿನಲ್ಲಿರುವ ಎಲೆಕ್ಟ್ರಿಕ್​ ಮೋಟಾರ್​​ 22kw ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ. 30BHP ಪವರ್​ ಮತ್ತು 70 ನ್ಯೂಟನ್​ ಮೀಟರ್​ ಟಾರ್ಕ್​ಗೆ ಸಮನಾಗಿದೆ ಎಂದು ಕಂಪನಿ ಹೇಳಿದೆ.

ಎಷ್ಟು ಸ್ಪೀಡ್​?

ಇನ್ನು Raptee.HV ಪರಿಚಯಿಸಿರುವ ಬೈಕ್ 3.6 ಸೆಕೆಂಡ್​​ಗೆ 0 ರಿಂದ 60kmph ವೇಗವನ್ನು ಪಡೆಯುತ್ತದೆ. ಗಂಟೆಗೆ 135 ಕಿ.ಮೀ ಗರಿಷ್ಠ ವೇಗವನ್ನು ಹೊಂದಿದೆ. ಈ ಬೈಕ್​ನಲ್ಲಿ ಮೂರು ಬಿಭಿನ್ನ ರೈಡಿಂಗ್​ ಮೋಡ್​ ನೀಡಲಾಗಿದೆ.

ಟ್ಯೂಬ್​ಲೆಸ್​​ ಟಯರ್​, ಆರಾಮ ಮತ್ತು ಸುರಕ್ಷಿತವಾದ ಸೀಟ್​​, ಮುಂಭಾಗ 320 ಎಂಎಂ ಡಿಸ್ಕ್​ ಬ್ರೇಕ್​​, ಹಿಂಭಾಗ 230 ಎಂಎಂ ಡಿಸ್ಕ್​ ಬ್ರೇಕ್​​, ಡ್ಯುಯೆಲ್​ ಚಾನೆಲ್​​ ಆ್ಯಂಟಿ ಲಾಕ್​​ ಬ್ರೇಕಿಂಗ್​ ಸಿಸ್ಟಂ ನೀಡಲಾಗಿದೆ.

ಗ್ರಾಹಕರಿಗಾಗಿ ಕಂಪನಿಯು ಈ ಬೈಕನ್ನು 2.39 ಲಕ್ಷ ರೂಪಾಯಿಗೆ ಪರಿಚಯಿಸಿದೆ. ಬಿಳಿ, ಕೆಂಪು, ಕಪ್ಪು, ಬೂದು ಬಣ್ಣದ ಆಯ್ಕೆಯಲ್ಲಿ ಸಿಗುತ್ತದೆ. 1 ಸಾವಿರ ರೂಪಾಯಿ ನೀಡಿ ಬೈಕ್​ ಬುಕ್ಕಿಂಗ್​ ಮಾಡುವ ಆಯ್ಕೆಯೂ ಇದೆ. ಬೆಂಗಳೂರು ಮತ್ತು ಚೆನ್ನೈ ಗ್ರಾಹಕರು ಬೇಗ ವಿತರಿಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment