/newsfirstlive-kannada/media/post_attachments/wp-content/uploads/2025/01/100-note.jpg)
ಐತಿಹಾಸಿಕ ವಸ್ತುಗಳು, ಕ್ರಿಕೆಟಿಗರು ಮತ್ತು ಸೆಲೆಬ್ರಿಟಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಆಗಾಗ ಹರಾಜಿಗೆ ಇಡಲಾಗುತ್ತದೆ. ಮತ್ತು ಆ ವಸ್ತುಗಳು ಲಕ್ಷ, ಲಕ್ಷ, ಕೋಟಿ, ಕೋಟಿ ರೂಪಾಯಿಗೆ ಹರಾಜಿನಲ್ಲಿ ಮಾರಾಟವಾಗುತ್ತವೆ. ಇದೀಗ ಭಾರತದ ಹಳೆಯ 100 ರೂಪಾಯಿ ನೋಟು ಭರ್ಜರಿ ಬೆಲೆಗೆ ಮಾರಾಟವಾಗಿದೆ.
ಇತ್ತೀಚೆಗೆ ಲಂಡನ್ನಲ್ಲಿ ನಡೆದ ಹರಾಜಿನಲ್ಲಿ 74 ವರ್ಷ ಇತಿಹಾಸ ಹೊಂದಿರುವ 100 ರೂಪಾಯಿ ನೋಟು ಸುಮಾರು 56 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಇದನ್ನು ‘ಹಜ್ ನೋಟ್’ ಎಂದು ಕರೆಯಲಾಗುತ್ತದೆ. 1950ರಲ್ಲಿ RBI ಹಜ್ ಯಾತ್ರೆಗಾಗಿ ಗಲ್ಫ್ ದೇಶಗಳಿಗೆ ಹೋಗುವ ಭಾರತೀಯ ಯಾತ್ರಾರ್ಥಿಗಳಿಗಾಗಿ ಈ ವಿಶೇಷ ಕರೆನ್ಸಿ ನೋಟನ್ನು ಬಿಡುಗಡೆ ಮಾಡಿತ್ತು. ಅಕ್ರಮವಾಗಿ ಚಿನ್ನ ಖರೀದಿಸುವುದನ್ನು ತಡೆಯಲು ಈ ಹಜ್ ನೋಟನ್ನು ಬಿಡುಗಡೆ ಮಾಡಲಾಗಿತ್ತು.
ಇದನ್ನೂ ಓದಿ:ಚಿನ್ನದ ಬೆಲೆಯಲ್ಲಿ ಸತತ ಕುಸಿತ; ಬಂಗಾರ ಖರೀದಿಗೆ ಇದು ಸೂಕ್ತ ಸಮಯ
ಇವು ಸಾಮಾನ್ಯ ಭಾರತೀಯ ನೋಟುಗಳಿಗಿಂತ ವಿಭಿನ್ನ ಬಣ್ಣವನ್ನು ಹೊಂದಿವೆ. ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಬಹ್ರೇನ್, ಕುವೈತ್, ಒಮಾನ್ ಮುಂತಾದ ಗಲ್ಫ್ ರಾಷ್ಟ್ರಗಳಲ್ಲಿ ಈ ನೋಟುಗಳು ಕಾನೂನುಬದ್ಧ ಟೆಂಡರ್ ಆಗಿದ್ದರೂ, ಭಾರತದಲ್ಲಿ ಈ ನೋಟುಗಳು ಮಾನ್ಯವಾಗಿಲ್ಲ. 1970 ರಲ್ಲಿ ಆರ್‌ಬಿಐ ಈ ಹಜ್ ನೋಟುಗಳ ಮುದ್ರಣವನ್ನು ನಿಲ್ಲಿಸಿತು. ಈ ವಿಶೇಷ ನೋಟು ಹರಾಜು ಪ್ರಕ್ರಿಯೆಯಲ್ಲಿ 56,49,650 ರೂಪಾಯಿಗೆ ಮಾರಾಟವಾಗಿದೆ.
ಅಪರೂಪದ 10 ರೂಪಾಯಿ ನೋಟು 6.90 ಲಕ್ಷಕ್ಕೆ ಮಾರಾಟ
ಹರಾಜಿನಲ್ಲಿ ಎರಡು ಅಪರೂಪದ 10 ರೂಪಾಯಿ ನೋಟುಗಳು ಕೂಡ ಭಾರೀ ಬೆಲೆಗೆ ಮಾರಾಟವಾಗಿವೆ. ಒಂದು ನೋಟು 6.90 ಲಕ್ಷ ರೂಪಾಯಿಗೆ ಮಾರಾಟವಾದರೆ ಇನ್ನೊಂದು 5.80 ಲಕ್ಷ ರೂಪಾಯಿಗೆ ಮಾರಾಟವಾಗಿದೆ.
ಇದನ್ನೂ ಓದಿ:ಗೋವಿಂದನ 7 ಭಕ್ತರು ಕೊನೆಯುಸಿರು.. ಕಾಲ್ತುಳಿತಕ್ಕೆ ಅಸಲಿ ಕಾರಣ ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ