/newsfirstlive-kannada/media/post_attachments/wp-content/uploads/2024/09/Mosquito.jpg)
ಸೊಳ್ಳೆಯಿಂದ ಮಲೇರಿಯಾ, ಡೆಂಗ್ಯೂ, ವೆಸ್ಟ್ ನೈಲ್ ವೈರಸ್, ಚಿಕೂನ್‌ಗುನ್ಯಾ, ಹಳದಿ ಜ್ವರ, ಫೈಲೇರಿಯಾಸಿಸ್, ಟುಲರೇಮಿಯಾ, ಡೈರೋಫಿಲೇರಿಯಾಸಿಸ್, ಜಪಾನೀಸ್ ಎನ್ಸೆಫಾಲಿಟಿಸ್, ಸೇಂಟ್ ಲೂಯಿಸ್ ಎನ್ಸೆಫಾಲಿಟಿಸ್ ಹೀಗೆ ಹಲವು ರೋಗಗಳು ಹರಡುತ್ತವೆ. ಈ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಅಪರೂಪದ ಸೊಳ್ಳೆಯೊಂದರಿಂದ ಅಪರೂಪದ ‘EEE’ ಎಂಬ ವೈರಸ್ ನೂಯಾರ್ಕ್​ನಲ್ಲಿ​ ಕಾಣಿಸಿಕೊಂಡಿದೆ.
‘EEE’ ಎಂದರೆ ಈಸ್ಟರ್ನ್​​ ಎಕ್ವೈನ್​​ ಎನ್ಸೆಫಾಲಿಟಿಸ್​​. ಅಪರೂಪದ ಸೊಳ್ಳೆಯೊಂದರಿಂದ ಈ ವೈರಸ್​​ ಹರಡುತ್ತದೆ. ನ್ಯೂಯಾರ್ಕ್​ನಲ್ಲಿ ‘EEE’ ವೈರಸ್​​ನಿಂದಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಇದೀಗ ಅಲ್ಲಿನ ಸರ್ಕಾರ ಜಾಗರೂಕರಾಗಿರಿ ಎಂದು ಹೇಳಿದೆ.
ಇದನ್ನೂ ಓದಿ: ಆರೋಗ್ಯ ಇಲಾಖೆಯಲ್ಲಿ ಖಾಲಿ ಹುದ್ದೆಗಳ ನೇಮಕಾತಿ.. 18- 46 ವರ್ಷದ ಅಭ್ಯರ್ಥಿಗಳಿಗೆ ಚಾನ್ಸ್​
/newsfirstlive-kannada/media/post_attachments/wp-content/uploads/2024/09/Mosquito-1.jpg)
ಆಗಸ್ಟ್​​ ತಿಂಗಳಿನಲ್ಲಿ ಹ್ಯಾಂಪ್​ಶೈರ್​ ನಿವಾಸಿಯೊಬ್ಬರು ‘EEE’ ವೈರಸ್​​ನಿಂದ ಸಾವನ್ನಪ್ಪಿದ್ದರು. ಇದಾದ ಬಳಿಕ ಅಲ್ಟ್ಸರ್​​ ಕೌಂಟಿಯಲ್ಲಿ ವೈರಸ್​​ನಿಂದ ಎರಡನೇ ಸಾವು ಸಂಭವಿಸಿದೆ.
ಇದನ್ನೂ ಓದಿ: ಏ..! ನಿಮ್ಮ ವಯಸ್ಸು ಎಷ್ಟು..? ಹಾಗಿದ್ದರೆ ಪ್ರತಿದಿನ ನೀವು ಎಷ್ಟು ಹೆಜ್ಜೆ ನಡೆಯಬೇಕು ಗೊತ್ತೇ..?
ಸೆಪ್ಟೆಂಬರ್​ 17ರ ನಂತರ ನ್ಯೂಯಾರ್ಕ್​ ಅಪರೂಪದ ಸೊಳ್ಳೆಯಿಂದ ಹರಡುವ​​ ಪ್ರಕರಣವನ್ನು ಗುರುತಿಸಿಕೊಂಡರು. ಕಳೆದ ವರ್ಷ ರಾಷ್ಟ್ರವ್ಯಾಪಿ 7 ಪ್ರಕರಣಗಳು ಬೆಳಕಿಗೆ ಬಂದಿದೆ. 2019ರಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿತ್ತು.
‘EEE’ ಲಕ್ಷಣಗಳೇನೇನು?
- ‘EEE’ ಸೋಂಕಿತ ಸೊಳ್ಳೆಯಿಂದ ಹರಡುವ ವೈರಸ್​ ಆಗಿದೆ. ಇದು ಅಪರೂಪವಾಗಿದ್ದು, ಗಂಭೀರ ಕಾಯಿಲೆಯಾಗಿದೆ.
- ‘EEE’ ಯಾವುದೇ ಲಸಿಕೆಯಾಗಲಿ, ಚಿಕಿತ್ಸೆಗಳಾಗಲಿ ಇಲ್ಲ.
- ಇದರ ಸೋಂಕಿಗೆ ಒಳಗಾದ ಶೇ30ರಷ್ಟು ಜನರು ಸಾಯುತ್ತಾರೆ.
- ವೈರಸ್​ಗೆ ತುತ್ತಾದವರು ಜ್ವರ, ತಲೆನೋವು, ವಾಂತಿ, ಅತಿಸಾರ ಮತ್ತು ರೋಗದ್ರಸ್ತವಾಗುವಿಕೆಯಿಂದ ಬಳಲುತ್ತಾರೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us