/newsfirstlive-kannada/media/post_attachments/wp-content/uploads/2024/10/RASHID-KHAN.jpg)
ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ನೀಡಿದ್ದಾರೆ. ಅಕ್ಟೋಬರ್ 03 ರಂದು ಕಾಬೂಲ್​​ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆಗೆ ಅನೇಕ ಪ್ರಸಿದ್ಧ ವ್ಯಕ್ತಿಗಳು ಭಾಗವಹಿಸಿದ್ದರು.
ರಶೀದ್ ಖಾನ್ ಮದುವೆ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಮತ್ತೊಂದು ಕಡೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಇದರ ನಡುವೆ ರಶೀದ್ ಖಾನ್ ವಿರುದ್ಧ ಕೆಲವು ಕ್ರಿಕೆಟ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ರಶೀದ್ ಮದುವೆ ಆಗುವ ಮೂಲಕ ತಾವು ಹಿಂದೆ ನೀಡಿದ್ದ ದೊಡ್ಡ ಭರವಸೆಯನ್ನು ಮುರಿದಿದ್ದಾರೆ ಎಂಬ ಕೂಗು ಕೇಳಿಬಂದಿದೆ.
ಇದನ್ನೂ ಓದಿ:ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟ ಮಾಂತ್ರಿಕ; ರಶೀದ್​ ಖಾನ್ ಮದ್ವೆಯಾದ ಹುಡುಗಿ ಹೇಗಿದ್ದಾರೆ..?
ಯಾಕೆ ಅಭಿಮಾನಿಗಳಿಗೆ ಕೋಪ..?
2020ರಲ್ಲಿ ರಶೀದ್ ಖಾನ್ ‘ಆಜಾದಿ ರೇಡಿಯೊ’ ಸಂವಾದದಲ್ಲಿ ಭಾಗಿಯಾಗಿದ್ದರು. ಈ ವೇಳೆ ತಾವು ಅಫ್ಘಾನ್​​ಗೆ ವಿಶ್ವಕಪ್ ಗೆದ್ದು ಕೊಡುವವರೆಗೂ ಮದುವೆ ಆಗಲ್ಲ ಎಂದಿದ್ದರು. ವಿಶ್ವಕಪ್ ಗೆಲ್ಲುವವರೆಗೂ ನಿಶ್ಚಿತಾರ್ಥ ಮಾಡಿಕೊಳ್ಳುವುದಿಲ್ಲ ಅಥವಾ ಮದುವೆ ಆಗುವುದಿಲ್ಲ ಎಂದಿದ್ದರು. ಅವರ ಈ ಹೇಳಿಕೆ ಭಾರೀ ಸುದ್ದಿ ಆಗಿತ್ತು.
ಬಾಲಿವುಡ್ ನಟಿ ಮೇಲೆ..
2018 ರಲ್ಲಿ ತಮ್ಮ ನೆಚ್ಚಿನ ಬಾಲಿವುಡ್ ನಟಿಯರನ್ನು ಉಲ್ಲೇಖಿಸಿ ಸಾಕಷ್ಟು ಸುದ್ದಿಯಾದರು. ಇನ್‌ಸ್ಟಾಗ್ರಾಮ್ ಚಾಟ್ ಸೆಷನ್‌ನಲ್ಲಿ, ಅಭಿಮಾನಿಯೊಬ್ಬರು ನೀವು ಯಾವ ಬಾಲಿವುಡ್ ನಟಿಯನ್ನು ಇಷ್ಟಪಡುತ್ತೀರಿ ಎಂದು ಕೇಳಿದ್ದರು. ಅದಕ್ಕೆ ಅವರು ಇಬ್ಬರ ಹೆಸರನ್ನು ತೆಗೆದುಕೊಂಡಿದ್ದರು. ಅನುಷ್ಕಾ ಶರ್ಮಾ ಮತ್ತು ಪ್ರೀತಿ ಜಿಂಟಾ ಎಂದಿದ್ದರು.
ಇದನ್ನೂ ಓದಿ:IND vs BAN: ಟೀಂ ಇಂಡಿಯಾ ಪ್ಲೇಯಿಂಗ್-11 ಹೇಗಿರುತ್ತೆ..? ಆರಂಭಿಕ ಜೋಡಿ ಯಾರು..?
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us