/newsfirstlive-kannada/media/post_attachments/wp-content/uploads/2024/06/RASHID_AFG_SA_.jpg)
T20 ವರ್ಲ್ಡ್ಕಪ್ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಫ್ಘಾನಿಸ್ತಾನ ತಂಡ ಹೀನಾಯವಾಗಿ ಸೋತು ಹೋಗಿದೆ. ಕೇವಲ 56 ರನ್ಗೆ ಆಲೌಟ್ ಆಗುವ ಮೂಲಕ ಅಫ್ಘಾನ್ ಟೀಮ್ T20 ವರ್ಲ್ಡ್ಕಪ್ನಲ್ಲಿ ದೊಡ್ಡ ಆಘಾತಕ್ಕೆ ಒಳಗಾಗಿದೆ. ಸೌತ್ ಆಫ್ರಿಕಾ ಗೆಲುವು ಪಡೆಯುತ್ತಿದ್ದಂತೆ ಅಫ್ಘಾನ್ ಕ್ಯಾಪ್ಟನ್ ರಶೀದ್ ಖಾನ್ ಸೇರಿದಂತೆ ಇತರೆ ಪ್ಲೇಯರ್ಸ್ ಕಣ್ಣೀರು ಹಾಕಿದ್ದಾರೆ.
ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನದ ನಾಯಕ ರಶೀದ್ ಖಾನ್ ಅವರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು ದೊಡ್ಡ ತಪ್ಪು ಎಂದು ಕೆಲವೇ ಕ್ಷಣದಲ್ಲಿ ಗೊತ್ತಾಯಿತು. ಏಕೆಂದರೆ ಮೊದಲ ಬ್ಯಾಟಿಂಗ್ ಮಾಡಲು ಮೈದಾನ ಸಹಕರಿಸಲಿಲ್ಲ. ಬೌಲರ್ಸ್ಗೆ ಹೆಚ್ಚು ಸಹಕಾರಿಯಾಯಿತು.
ಹೀಗಾಗಿ ತಂಡದ ಓಪನರ್ಸ್ ಗುರ್ಬಾಜ್ ಹಾಗೂ ಜರ್ದಾನಿ ಹೀಗೆ ಬಂದು ಹಾಗೇ ಹೋದರು. ತಂಡದಲ್ಲಿ ಅಜ್ಮತುಲ್ಲಾ 10 ರನ್ ಗಳಿಸಿದ್ದೆ ವೈಯಕ್ತಿಕ ಗರಿಷ್ಠ ರನ್ ಆಗಿದೆ. ಮೂವರು ಡಕೌಟ್ ಆದ್ರೆ ನಾಲ್ವರು ಪ್ಲೇಯರ್ಸ್ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅಫ್ಘಾನ್ ಕೇವಲ 11.5 ಓವರ್ಗಳಲ್ಲಿ 56 ರನ್ಗಳಿಗೆ ಆಲೌಟ್ ಆಯಿತು. ಈ ಟಾರ್ಗೆಟ್ ಅನ್ನು ಸೌತ್ ಆಫ್ರಿಕಾ ತಂಡ. 8.5 ಓವರ್ನಲ್ಲಿ 1 ವಿಕೆಟ್ ನಷ್ಟಕ್ಕೆ 60 ಗಳಿಸಿ ಗೆಲುವನ್ನು ಸಂಭ್ರಮಿಸಿತು.
ಇದನ್ನೂ ಓದಿ: ಜಸ್ಟ್ ಗುರಾಯಿಸಿದ್ಕೆ.. ಬಿಯರ್ ಬಾಟಲ್ಗಳಿಂದ ತಲೆಗೆ ಹೊಡೆದು ವ್ಯಕ್ತಿಯ ಭೀಕರ ಕೊಲೆ
ಇದರಿಂದ ಭಾರೀ ಬೇಸರಕ್ಕೆ ಒಳಗಾಗಿದ್ದ ಕ್ಯಾಪ್ಟನ್ ರಶೀದ್ ಖಾನ್ ಬ್ಯಾಟಿಂಗ್ ಆಯ್ಕೆ ಮಾಡಿ ದೊಡ್ಡ ತಪ್ಪು ಮಾಡಿದೆನಲ್ಲ ಎಂದುಕೊಂಡರು. ಬಳಿಕ ಕೋಚ್ ಬಳಿಗೆ ಹೋಗಿ ಕ್ಯಾಪ್ಟನ್ ರಶೀದ್ ಕಣ್ಣೀರು ಹಾಕಿದ್ದಾರೆ. ಉಳಿದ ಪ್ಲೇಯರ್ಸ್ ಮೊಗದಲ್ಲೂ ಖುಷಿ ಮಾಯವಾಗಿತ್ತು. ಬಾಂಗ್ಲಾ ವಿರುದ್ಧ ಗೆದ್ದು ವಿಶ್ವಕಪ್ ಗೆದ್ದಷ್ಟೇ ಸಂಭ್ರಮಿಸಿದ್ದ ಅಫ್ಘಾನ್ ಪ್ಲೇಯರ್ಸ್ ಸೆಮಿಫೈನಲ್ನಲ್ಲಿ ಸೋತು ಕಣ್ಣೀರು ಹಾಕಿದರು. ಮೈದಾನದಿಂದ ಹೊರ ಬರುವಾಗ ಎಲ್ಲ ಪ್ಲೇಯರ್ಸ್ ಅಳುತ್ತಾ ಬಂದರು. ಇದೇ ಮೊದಲ ಬಾರಿಗೆ ಸೆಮಿಫೈನಲ್ಗೆ ಬಂದಿದ್ದ ರಶೀದ್ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಂತೆ ಆಗಿದೆ. ಸದ್ಯ T20 ವರ್ಲ್ಡ್ಕಪ್ಗೆ ಅಫ್ಘಾನ್ ಸೋಲಿನ ವಿದಾಯ ಹೇಳಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ