Advertisment

ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟ ಮಾಂತ್ರಿಕ; ರಶೀದ್​ ಖಾನ್ ಮದ್ವೆಯಾದ ಹುಡುಗಿ ಹೇಗಿದ್ದಾರೆ..?

author-image
Ganesh
Updated On
ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟ ಮಾಂತ್ರಿಕ; ರಶೀದ್​ ಖಾನ್ ಮದ್ವೆಯಾದ ಹುಡುಗಿ ಹೇಗಿದ್ದಾರೆ..?
Advertisment
  • ಸೆಕೆಂಡ್​ ಇನ್ನಿಂಗ್ಸ್​ ಆರಂಭಿಸಿದ ರಶೀದ್​ ಖಾನ್​
  • ರಶೀದ್​ ಅದ್ಧೂರಿ ವಿವಾಹ ಹೇಗಿತ್ತು ಗೊತ್ತಾ?
  • ಅಫ್ಘಾನಿಸ್ತಾನದ ಕಾಬೂಲ್​ನಲ್ಲಿ ಧರೆಗಿಳಿದ ಸ್ವರ್ಗ

ವಿಶ್ವ ಕ್ರಿಕೆಟ್​ ಲೋಕದ ನಯಾ ಸ್ಪಿನ್​ ಕಿಂಗ್​ ರಶೀದ್​ ಖಾನ್​ ಸೆಕೆಂಡ್​ ಇನ್ನಿಂಗ್ಸ್​ ಆರಂಭಿಸಿದ್ದಾರೆ. ಸ್ವರ್ಗವೇ ಧರೆಗಿಳಿದಂತೆ ರೆಡಿಯಾಗಿದ್ದ ಕಾಬೂಲ್​ನ ಹೋಟೇಲ್​ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ಧೂರಿಯಾಗಿ ವಿವಾಹವಾದ ರಶೀದ್​, ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಿದ್ದಾರೆ. ರಶೀದ್​ ಮನಗೆದ್ದ ಚೆಲುವೆ ಯಾರು ಅನ್ನೋದನ್ನೇ ಸಸ್ಪೆನ್ಸ್​ ಆಗಿಬಿಟ್ಟಿದೆ.

Advertisment

ಅರಮನೆಯಂತೆ ಬದಲಾದ ಹೋಟೆಲ್​
ಅಪ್ಘಾನಿಸ್ತಾನದ ಕಾಬೂಲ್​ನಲ್ಲಿ ಕಳೆದ ರಾತ್ರಿ ಅಕ್ಷರಶಃ ಸ್ವರ್ಗವೇ ಧರೆಗಿಳಿದಿತ್ತು. ನೀವು ನೋಡ್ತಾ ಇದಿರಲ್ವಾ. ಇದನ್ನ ಅರಮನೆ ಅನ್ಕೋಬೇಡಿ. ಕಾಬೂಲ್​ನ ಒಂದು ಹೋಟೇಲ್​ ಇದು. ಜಗದ್ವಿಖ್ಯಾತ ಸ್ಪಿನ್ನರ್​ ಮದುವೆಗೆ ಈ ಇಂಪಿರಿಯರ್ ಕಾಂಟಿನೇಂಟಲ್​ ಹೋಟೆಲ್ ಅರಮನೆಯಾಗಿ ಬದಲಾಗಿತ್ತು. ​

ಇದನ್ನೂ ಓದಿ:BBK11 ಇಂದು ಕಿಚ್ಚನ ಮೊದಲ ಮಾತುಕತೆ; ಈ ಸ್ಪರ್ಧಿಗಳಿಗೆ ಪುಕಪುಕ..! ವಿಡಿಯೋ

publive-image

2ನೇ ಇನ್ನಿಂಗ್ಸ್​ ಆರಂಭಿಸಿದ ಸ್ಪಿನ್​ ಕಿಂಗ್​

ಅರಮನೆಯ ಮೆರಗು ಪಡೆದಿದ್ದ ಹೋಟೆಲ್​ನಲ್ಲಿ ನಡೆದಿದ್ದು ಕ್ರಿಕೆಟ್​ ಲೋಕದ ನಯಾ ಸ್ಪಿನ್​ ಕಿಂಗ್​, ಅಪ್ಘನ್​ ಕ್ರಿಕೆಟ್​ ತಂಡದ ಮಾಜಿ ಕ್ಯಾಪ್ಟನ್​ ರಶೀದ್​ ಖಾನ್​ ವಿವಾಹ. 26 ವರ್ಷದ ಸ್ಪಿನ್​ ಮಾಂತ್ರಿಕ ರಶೀದ್​ ಖಾನ್​ ಕಾಬೂಲ್​ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ರಶೀದ್​ ಖಾನ್ ಜೀವನದ 2ನೇ ಇನ್ನಿಂಗ್ಸ್​ ಆರಂಭಿಸಿದ್ದಾರೆ.

Advertisment

ಒಂದೇ ವೇದಿಕೆಯಲ್ಲಿ ನಾಲ್ಕು ವಿವಾಹ
ಅದ್ಧೂರಿ ಸಮಾರಂಭದಲ್ಲಿ ರಶೀದ್​ ಖಾನ್​ ಮಾತ್ರವಲ್ಲ. ಮೂವರು ಸಹೋದರರು ಕೂಡ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸಹೋದರರಾದ ಅಮೀರ್​ ಖಲೀಲ್​, ಝಾಕುವುಲ್ಲಾ, ರಾಝಾ ಖಾನ್ ಜೊತೆಗೆ ರಶೀದ್​ ಖಾನ್ ಒಂದೇ ಸಮಾರಂಭದಲ್ಲಿ ಪಾಶ್ತೂನ್​ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಕಾಣಲಿಲ್ಲ ರಶೀದ್ ಪತ್ನಿಯ ಮುಖ.. ಮಾಹಿತಿ ನಿಗೂಢ
ಅದ್ಧೂರಿ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ರು ಪತ್ನಿಯ ವಿಚಾರದಲ್ಲಿ ರಶೀದ್​ ಗೌಪ್ಯತೆ ಕಾಯ್ದುಕೊಂಡಿದ್ದಾರೆ. ರಶೀದ್​ ಪತ್ನಿಯ ಹೆಸರು, ಫೋಟೋ, ವಿಡಿಯೋ ಎಲ್ಲೂ ಕೂಡ ರಿವೀಲ್​ ಆಗಿಲ್ಲ.

ಇದನ್ನೂ ಓದಿ:ಕರಿಮೆಣಸಿನಲ್ಲಿದೆ ಹಲವು ಆರೋಗ್ಯಕಾರಿ ಅಂಶಗಳು; ಯಾವೆಲ್ಲಾ ಸಮಸ್ಯೆಗಳಿಗೆ ರಾಮಬಾಣ ಗೊತ್ತಾ?

Advertisment

publive-image

ವಿವಾಹಕ್ಕೆ ಸಾಕ್ಷಿಯಾದ ಸ್ಟಾರ್​ ಕ್ರಿಕೆಟರ್ಸ್​
ರಶೀದ್​ ಖಾನ್​ ಅದ್ಧೂರಿ ವಿವಾಹಕ್ಕೆ ಅಫ್ಘಾನಿಸ್ತಾನ ಕ್ರಿಕೆಟ್​ನ ಪ್ರಮುಖರು ಸೇರಿದಂತೆ ಹಾಲಿ ಹಾಗೂ ಮಾಜಿ ಕ್ರಿಕೆಟರ್ಸ್​ ಭಾಗಿಯಾಗಿದ್ರು. ಇನ್ನು ವಿವಾಹಕ್ಕೆ ಬಂದ ಕ್ರಿಕೆಟರ್ಸ್​ ಜೊತೆ ಸೆಲ್ಫಿಗಂತೂ ಫ್ಯಾನ್ಸ್​ ಮುಗಿಬಿದ್ದಿದ್ರು.

ವಿವಾಹಕ್ಕೆ ಜನವೋ ಜನ
ಸ್ಟಾರ್​ ಕ್ರಿಕೆಟಿಗನ ವಿವಾಹದಲ್ಲಿ ಅಫ್ಘನ್​ ದೇಶದ ಗಣ್ಯಾತಿಗಣ್ಯರು, ಕುಟುಂಬಸ್ಥರ ಜೊತೆಗೆ ಆಪ್ತವಲಯದವರು ಭಾಗಿಯಾಗಿದ್ರು. ಜನ ಸಾಗರವೇ ಹರಿದಿದ್ದ ಸಮಾರಂಭದಲ್ಲಿ ಬಗೆ ಬಗೆಯ ಭಕ್ಷಗಳನ್ನ ತಯಾರಿಸಲಾಗಿತ್ತು. ಸ್ಪಿನ್​ ಮಾಂತ್ರಿಕನಿಗೆ ಇದೇ ಸಂದರ್ಭದಲ್ಲಿ ಐಷಾರಾಮಿ The new Lexus RX ಕಾರನ್ನ ಊಡುಗೊರೆಯಾಗಿ ನೀಡಲಾಗಿದೆ. ಭಾರತದಲ್ಲಿ ಇದ್ರ ಬೆಲೆ ಒಂದುವರೆ ಕೋಟಿಗೂ ಅಧಿಕವಾಗಿದೆ.

ಎಲ್ಲೆಲ್ಲೂ ಗನ್​.. ಸಂಭ್ರಮದ ನಡುವೆ ಆತಂಕ
ಸಂಭ್ರಮ-ಸಂತೋಷದಿಂದ ನಡೆದ ಸಮಾರಂಭವನ್ನೂ ಆತಂಕ ಕಾಡಿತ್ತು. ಹೀಗಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಆತಂಕದ ನಡುವೆಯೂ ನಡೆದ ಅದ್ಧೂರಿ ಸಮಾರಂಭದಲ್ಲಿ ರಶೀದ್​ ಖಾನ್​ 2ನೇ ಇನ್ನಿಂಗ್ಸ್​ ಆರಂಭಿಸಿದ್ದಾರೆ. ರಶೀದ್​ ಖಾನ್​ ವೈವಾಹಿಕ ಜೀವನ ವಿವಾಹದಷ್ಟೇ ಅದ್ಧೂರಿಯಾಗಿರಲಿ ಅನ್ನೋದು ಎಲ್ಲರ ಹಾರೈಕೆ.

Advertisment

ಇದನ್ನೂ ಓದಿ:ಟಿ-20 ವಿಶ್ವಕಪ್​, ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೋತ ಕೌರ್ ಪಡೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment