/newsfirstlive-kannada/media/post_attachments/wp-content/uploads/2024/06/Rashmika-Mandanna.jpg)
ನಿರ್ದೇಶಕ ಪ್ರಶಾಂತ್ ನೀಲ್​​​ ಸಿನಿಮಾಗೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂಬ ಮಾತೊಂದು ಕೇಳಿಬಂದಿದೆ. ಪ್ರಶಾಂತ್​ ನೀಲ್​ ತನ್ನ ಸಿನಿಮಾದಲ್ಲಿ ನ್ಯಾಷನಲ್​ ಕ್ರಶ್ ಅನ್ನು ಹಾಕಿಕೊಳ್ಳುವ ಮೂಲಕ ಗಮನಸೆಳೆಯಲು ಮುಂದಾಗಿದ್ದಾರಂತೆ.​
/newsfirstlive-kannada/media/post_attachments/wp-content/uploads/2024/04/Rashmika-Mandanna-Pushpa.jpg)
ಇದನ್ನೂ ಓದಿ: ಅಮ್ಮನಿಗೆ ಅನಾರೋಗ್ಯ, ಕಣ್ಣೀರು ಹಾಕಿತ್ತಿರೋ ಅಕ್ಕ.. ದರ್ಶನ್​ ನಂಬಿ ಜೈಲು ಸೇರಿದ ನಂದೀಶ್ ಕುಟುಂಬಕ್ಕೆ ಸಂಕಷ್ಟ
ಅಂದಹಾಗೆಯೇ ಪ್ರಶಾಂತ್​ ನೀಲ್​ ಸದ್ಯಕ್ಕೆ ಜೂನಿಯರ್ NTR ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಇಷ್ಟೊತ್ತಿಗಾಗಲೇ ಡ್ರ್ಯಾಗನ್ ಶೂಟಿಂಗ್ ಶುರು ಆಗ್ಬೇಕಿತ್ತು. ಆದ್ರೆ, ಕಾರಣಾಂತರಗಳಿಂದ ಸ್ವಲ್ಪ ತಡವಾಗಿತ್ತು. ಈಗ ಹರಿದಾಡ್ತಿರೋ ಲೇಟೆಸ್ಟ್ ಏನಂದ್ರೆ ಈ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿ ಆಗ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ.
/newsfirstlive-kannada/media/post_attachments/wp-content/uploads/2023/09/jr-ntr-5.jpg)
ಈಗಾಗಲೇ ಪ್ರಶಾಂತ್ ನೀಲ್ ಸಿನಿಮಾ ಕುರಿತಾಗಿ ನಟಿ ರಶ್ಮಿಕಾ ಮಂದಣ್ಣ ಜೊತೆ ಮಾತುಕತೆ ನಡೆಸಿದ್ದಾರೆ. ರಶ್ಮಿಕಾ ಜೊತೆ ಬಾಬಿ ಡಿಯೋಲ್ ಕೂಡ ನಟಿಸೋ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
/newsfirstlive-kannada/media/post_attachments/wp-content/uploads/2024/03/PRASHANTH_NEEL_NTR_3.jpg)
ಇನ್ನು ಜ್ಯೂನಿಯರ್​ ಎನ್​ಟಿಆರ್​ ಸದ್ಯ ದೇವರಾ-1 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಕೊರತಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ. ಅತ್ತ ರಶ್ಮಿಕಾ ಮಂದಣ್ಣ, ಪುಷ್ಪ-2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ರೈನ್​ ಬೋ, ದಿ ಗರ್ಲ್​ ಫ್ರೆಂಡ್​, ಚಾವಾ, ಸಿಖಂದರ್, ಕುಬೇರಾ ಸಿನಿಮಾಗಳಲ್ಲಿ ರಶ್ಮಿಕಾ ನಟಿಸಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us