Advertisment

VIDEO: ಒಂದೇ ಕಾಲಲ್ಲಿ ಕುಂಟುತ್ತ ವೇದಿಕೆಗೆ ಬಂದ ರಶ್ಮಿಕಾ; ಅಭಿಮಾನಿಗಳು ಆಕ್ರೋಶ.. ದಿಲ್ ಗೆದ್ದ ವಿಕ್ಕಿ ಕೌಶಲ್

author-image
Ganesh
Updated On
VIDEO: ಒಂದೇ ಕಾಲಲ್ಲಿ ಕುಂಟುತ್ತ ವೇದಿಕೆಗೆ ಬಂದ ರಶ್ಮಿಕಾ; ಅಭಿಮಾನಿಗಳು ಆಕ್ರೋಶ.. ದಿಲ್ ಗೆದ್ದ ವಿಕ್ಕಿ ಕೌಶಲ್
Advertisment
  • ರಶ್ಮಿಕಾ ಮಂದಣ್ಣ ಕುಂಟುತ್ತ ವೇದಿಕೆಗೆ ಯಾಕೆ ಬಂದರು?
  • ವಿಕ್ಕಿ ಕೌಶಲ್ ನಡೆಗೆ ಯಾಕೆ ಅಭಿಮಾನಿಗಳು ಫಿದಾ ಆದರು?
  • ಐತಿಹಾಸಿಕ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅಭಿನಯ

ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಬ್ಯುಸಿ. ತೆಲುಗು, ಹಿಂದಿಯಲ್ಲಿ ಬ್ಯಾಕ್​ ಟು ಬ್ಯಾಕ್ ಸಿನಿಮಾ ಮಾಡ್ತಿರುವ ರಶ್ಮಿಕಾ, ಪುಷ್ಪ-2, ಅನಿಮಲ್ ಬೆನ್ನಲ್ಲೇ ಈಗ ‘ಛಾವಾ’ (Chhaava) ಚಿತ್ರದ ಬಗ್ಗೆ ಗಮನ ಕೊಡ್ತಿದ್ದಾರೆ. ‘ಛಾವಾ’ ಚಿತ್ರದಲ್ಲಿ ವಿಕ್ಕಿ ಕೌಶಲ್​ ಜೊತೆ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ.

Advertisment

ಅಂದ್ಹಾಗೆ ಶಿವಾಜಿ ಮಹಾರಾಜ ಕುರಿತ ಚಿತ್ರ ಇದಾಗಿದೆ. ಮೊನ್ನೆಯಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಜನ ಮೆಚ್ಚಿಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ಟ್ರೇಲರ್ ರಿಲೀಸ್ ಈವೆಂಟ್​ಗೆ ರಶ್ಮಿಕಾ ವ್ಹೀಲ್‌ಚೇರ್‌ನಲ್ಲಿ ಬಂದಿದ್ದರು. ವೇದಿಕೆಗೆ ಆಗಮಿಸುವ ವೇಳೆ ರಶ್ಮಿಕಾ ಕುಂಟುತ್ತಾ ಬಂದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಮೊದಲ ಬಾರಿ ಐತಿಹಾಸಿಕ ಪಾತ್ರಕ್ಕೆ ಬಣ್ಣ ಹಚ್ಚಿದ ರಶ್ಮಿಕಾ ಮಂದಣ್ಣ; ಏನಿದರ ವಿಶೇಷ? PHOTOS

publive-image

ವೇದಿಕೆ ಮೇಲೆ ಬರಲು ಕಷ್ಟಪಡುವುದನ್ನು ಕಾಣಬಹುದು. ಒಂದೇ ಕಾಲಿನಲ್ಲಿ ವೇದಿಕೆಗೆ ಬರಲು ಪ್ರಯತ್ನಿಸುತ್ತಾರೆ. ನಂತರ ಅಕ್ಕಪಕ್ಕದಲ್ಲಿದ್ದವರು ಅವರಿಗೆ ಸಹಾಯ ಮಾಡಿದ್ದಾರೆ. ಆಗ ರಶ್ಮಿಕಾ ಮಂದಣ್ಣಗೆ ನಟ ವಿಕ್ಕಿ ಕೌಶಲ್ ಸಹಾಯ ಮಾಡಿದರು. ವಿಡಿಯೋದಲ್ಲಿ ರಶ್ಮಿಕಾ, ಕೆಂಪು ಮತ್ತು ಗೋಲ್ಡನ್ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋ ನೋಡಿದ ಬೆನ್ನಲ್ಲೇ ಅಭಿಮಾನಿಗಳು ರಶ್ಮಿಕಾಗೆ ಏನಾಯ್ತು ಎಂದು ಕೇಳ್ತಿದ್ದಾರೆ.

Advertisment

ಇದು ಕೆಲವು ಅಭಿಮಾನಿಗಳ ಟೀಕೆಗೂ ಕಾರಣವಾಗಿದೆ. ಕುಂಟುತ್ತ ವೇದಿಕೆಗೆ ಬರುವ ಅಗತ್ಯ ಏನಿತ್ತು? ವ್ಹೀಲ್​ ಚೇರ್​ ತೆಗೆದುಕೊಂಡಿದ್ದರೆ ಮುಗಿದಿತ್ತು. ಇದು ಶಿಸ್ತು ಅಲ್ಲ. ವೇದಿಕೆ ಮೇಲೆ ರಶ್ಮಿಕಾ ಅಶಿಸ್ತಿನಿಂದ ಕಾಣಿಸಿಕೊಳ್ಳಬಾರದಿತ್ತು ಎಂಬ ಟೀಕೆಯೂ ವ್ಯಕ್ತವಾಗ್ತಿದೆ. ಇನ್ನು ವಿಕ್ಕಿ ಕೌಶಲ್ ಸಹಾಯಕ್ಕೆ ಬಂದಿರೋದು ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ:ವಿದ್ಯಾರ್ಥಿಗಳು ಶ್ರದ್ಧೆಯಿಂದ ತಪಸ್ಸು ಮಾಡಿದರೆ ಯಶಸ್ಸು ಖಚಿತ; ಗಾಯಕ ರಾಜೇಶ್ ಕೃಷ್ಣನ್

ಕಾಲಿನ ಮೂಳೆ ಮುರಿತವಾಗಿದೆ ಎಂದು ರಶ್ಮಿಕಾ ಮಂದಣ್ಣ ಇತ್ತೀಚೆಗೆ ಅಪ್​ಡೇಟ್ ಕೊಟ್ಟಿದ್ದರು. ಜಿಮ್ ಮಾಡುವ ವೇಳೆ ಗಾಯವಾಗಿದೆ ಎಂದು ತಿಳಿಸಿದ್ದರು. ಅದೇ ಕಾರಣಕ್ಕೆ ‘ಸಿಕ್ಕಂದರ್’ ಚಿತ್ರೀಕರಣ ಮುಂದೂಡಲಾಗಿದೆ. ಸದ್ಯ ರಶ್ಮಿಕಾ ಚೇತರಿಸಿಕೊಳ್ಳುತ್ತಿದ್ದಾರೆ, ಇದೀಗ ‘ಛಾವಾ’ ಪ್ರಚಾರದ ಭಾಗವಾಗಿದ್ದಾರೆ. ಚಿತ್ರವು 14 ಫೆಬ್ರವರಿ 2025 ರಂದು ಬಿಡುಗಡೆಯಾಗಲಿದೆ.

Advertisment


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment