ಡಾರ್ಲಿಂಗ್​ ಪ್ರಭಾಸ್ ಸಿನಿಮಾದಿಂದ ದೀಪಿಕಾ ಪಡುಕೋಣೆ ಔಟ್​.. ಅಸಲಿ ಸತ್ಯ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ..!

author-image
Veena Gangani
Updated On
ಡಾರ್ಲಿಂಗ್​ ಪ್ರಭಾಸ್ ಸಿನಿಮಾದಿಂದ ದೀಪಿಕಾ ಪಡುಕೋಣೆ ಔಟ್​.. ಅಸಲಿ ಸತ್ಯ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ..!
Advertisment
  • ದಕ್ಷಿಣ ಭಾರತ ಸಿನಿಮಾದಲ್ಲಿ ನಟಿಸುವುರದ ಬಗ್ಗೆ ರಶ್ಮಿಕಾ ಮಂದಣ್ಣ ಏನಂದ್ರು?
  • ಸಂದೀಪ್ ರೆಡ್ಡಿ ವಂಗಾ ಸ್ಪಿರಿಟ್ ಸಿನಿಮಾದಿಂದ ಸ್ಟಾರ್​ ನಟಿ ಆಚೆ ಬಂದಿದ್ದೇಕೆ?
  • ಸಂದೀಪ್ ವಂಗಾ ಜೊತೆಗೆ ಅನಿಮಲ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟನೆ

ಸಂದೀಪ್ ರೆಡ್ಡಿ ವಂಗಾ ಹಾಗೂ ಡಾರ್ಲಿಂಗ್​ ಪ್ರಭಾಸ್​ ಕಾಂಬೊದಲ್ಲಿ ನಿರ್ಮಾಣವಾಗುತ್ತಿರೋ ಬಹು ನಿರೀಕ್ಷಿತ ಸ್ಪಿರಿಟ್​ನಿಂದ ನಟಿ ದೀಪಿಕಾ ಪಡುಕೋಣೆ ಆಚೆ ಬಂದ ಬೆನ್ನಲ್ಲೇ ನಟಿ ರಶ್ಮಿಕಾ ಮಂದಣ್ಣ ಹೇಳಿಕೆ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ. ಬಾಲಿವುಡ್​ಗೆ ಹೋಲಿಸಿದರೆ ದಕ್ಷಿಣ ಭಾರತ ಸಿನಿಮಾದಲ್ಲಿ ಕೆಲಸ ಮಾಡೋದು ಸುಲಭ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ದಲ್ಲಿ ನಟನೆಗಾಗಿ ರಣಬೀರ್ ಕಪೂರ್​, ಸಾಯಿ ಪಲ್ಲವಿಗೆ ಕೋಟಿ ಕೋಟಿ ದುಡ್ಡು..!

publive-image

ನಟರ ಕೆಲಸದ ಸಮಯ ಮತ್ತು ಸಿನಿಮಾ ಶೂಟಿಂಗ್​ನ ಬೇಡಿಕೆಯ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ಸಂದೀಪ್ ವಂಗಾ ಅವರೊಂದಿಗೆ ಅನಿಮಲ್ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಕೆಲಸ ಮಾಡಿದ್ದರು. ಈಗ ಅಲ್ಲಿನ ಕೆಲಸದ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

publive-image

ಬಹಳಷ್ಟು ಜನರು ಅದರ ಬಗ್ಗೆ ಅಭಿಪ್ರಾಯಗಳನ್ನು ಹೊಂದಿದ್ದಾರೆಂದು ತಿಳಿದಿದೆ. ಅದು ಸರಿಯಾಗಿದೆ. ಆದರೆ ನೀವು ಹೋಗಿ ನಿಮ್ಮ ನಿರ್ದೇಶಕರಿಗೆ, ಸರಿ, ಇದು ನಾನು ಕೆಲಸ ಮಾಡಲು ಬಯಸುವ ಸಮಯ. ನಾವು ಇದನ್ನು ಮಾಡಬಹುದೇ? ಎಂದು ಹೇಳಿದ್ದು ನ್ಯಾಯಯುತವಾಗಿದೆ. ಇದು ಅವರ ವೈಯಕ್ತಿಕ ಚರ್ಚೆ. ಆದರೆ ಈ ವಿಷಯಗಳ ಬಗ್ಗೆ ಸ್ವಲ್ಪ ಮಾತಾಡಬೇಕು ಎಂದರೆ ನೀವು ಮನೆಗೆ ಹೋಗದೆ, ಸ್ವಲ್ಪ ನಿದ್ರೆ ಮಾಡದೆ 2-3 ದಿನ ಕೆಲಸ ಮಾಡುವಂತಹ ಕೆಟ್ಟ ಸನ್ನಿವೇಶಗಳು ನಡೆಯುತ್ತಿವೆ ಎಂದು ಹೇಳಿಕೊಂಡಿದ್ದಾರೆ.

publive-image

ಹೀಗೆ ಮಾತನ್ನು ಮುಂದುವರೆಸಿದ ಅವರು, ನಾನು ಹಲವಾರು ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತೇನೆ. ಉದಾಹರಣೆಗೆ, ತೆಲುಗು, ಕನ್ನಡ, ತಮಿಳಿನಲ್ಲಿ ನಾವು ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಕೆಲಸ ಮಾಡುತ್ತೇವೆ, ಅದು ನಮ್ಮ ಕಚೇರಿ ಸಮಯದಂತೆ. ಆದ್ರೆ ಶೂಟಿಂಗ್​ ನಂತರ, ನಾವು ಕುಟುಂಬದೊಂದಿಗೆ ಸಮಯ ಕಳೆಯುತ್ತೇವೆ. ನಾವು ಮಲಗುತ್ತೇವೆ ಮತ್ತು ಮರುದಿನ ನಾವು ಶೂಟಿಂಗ್​ಗೆ ಮರಳುತ್ತೇವೆ. ಆದ್ರೆ ಹಿಂದಿಯಲ್ಲಿ ಹಾಗಲ್ಲ, ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಶಿಫ್ಟ್ ಎಂದು ನಾನು ಅರಿತುಕೊಂಡಿದ್ದೇನೆ. ಇದು 12 ಗಂಟೆ ಕೆಲಸದ ಸಮಯ, ಆದ್ದರಿಂದ ಈಗ ಒಬ್ಬ ನಟನಾಗಿ, ನಾನು ಈ ಎರಡೂ ಕೆಲಸದ ಸಮಯಗಳಿಗೆ ಮುಕ್ತನಾಗಿದ್ದೇನೆ ಏಕೆಂದರೆ ಇದು ನನ್ನ ಸಂಸ್ಥೆಗೆ ಅಗತ್ಯವಾಗಿರುತ್ತದೆ ಎಂದಿದ್ದಾರೆ.

publive-image

ಇನ್ನೂ, ಈ ಹಿಂದೆ ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಅವರು ಇತ್ತೀಚೆಗೆ 8 ಗಂಟೆಯ ಕೆಲಸದ ಶಿಫ್ಟ್ ವಿಚಾರವಾಗಿ ಸುದ್ದಿಯಲ್ಲಿದ್ದರು. ದೀಪಿಕಾ ಪಡುಕೋಣೆ ಅವರು ಸಂದೀಪ್ ರೆಡ್ಡಿ ಅವರ ಸಿನಿಮಾದಲ್ಲಿ ನಟಿಸಬೇಕಾಗಿತ್ತು. ಆದರೆ ಅಲ್ಲಿ ಕೆಲಸದ ಸಮಯದ ಗೊಂದಲದಿಂದಾಗಿ ನಟಿ ಸಿನಿಮಾದಿಂದ ಹೊರಗೆ ಬಂದಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ಚರ್ಚೆಯ ವಿಚಾರವಾಗಿತ್ತು. ನಟಿ ದೀಪಿಕಾ ಪಡುಕೋಣೆ ಅಮ್ಮನಾದ ಬಳಿಕ ತಮ್ಮ ಕೆಲಸದ ಸಂಬಂಧ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಆದರೆ ಅದು ಸಂದೀಪ್ ರೆಡ್ಡಿ ವಂಗಾ ಟೀಮ್​​ಗೆ ಸೆಟ್​ ಆಗದ ಕಾರಣ ಅವರು ಚಿತ್ರದಿಂದ ಹೊರ ನಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment