/newsfirstlive-kannada/media/post_attachments/wp-content/uploads/2024/05/RASHMIKA-MANDANNA-2-1.jpg)
ನಿಮಗೆಲ್ಲ ಗೊತ್ತಿರೋ ಹಾಗೆ ಕೊಡಗಿನ ಹುಡುಗಿ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿ ಇರ್ತಾರೆ. ಪ್ರತಿ ದಿನ ಒಂದಲ್ಲ ಒಂದು ಪೋಸ್ಟ್ ಹಾಕ್ತಾನೆ ಇರ್ತಾರೆ. ಈಗ ರಶ್ಮಿಕಾ ಮಂದಣ್ಣ ಹಾಕಿರೋ ಈ ಒಂದು ಪೋಸ್ಟ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
ರಶ್ಮಿಕಾ ಡೈಲಿ ರೋಟಿನ್ ಅಪ್ಡೇಟ್ ಮಾಡೋ ಸ್ಟೋರಿ ಒಂದನ್ನ ಹಾಕಿದ್ರು.. ಮೇ 2 ದಿನ ಹೇಗ್ ಶುರುವಾಯ್ತು? ಶೂಟಿಂಗ್ ಹೇಗ್ ನಡೀತು? ಅಂತೆಲ್ಲ ತಮ್ಮ ಸ್ಟೋರಿಯಲ್ಲಿ ಬರೆದಿದ್ರು. ಈ ಟೈಮ್‌ನಲ್ಲಿ ಅವತ್ತಿನ ಶೂಟಿಂಗ್ ಕ್ಯಾನ್ಸಲ್ ಆದ ಬಗ್ಗೆಯೂ ಬರೆದಿದ್ರು. ಆದ್ರೆ ಈ ಪೋಸ್ಟ್ನಲ್ಲಿ ರಶ್ಮಿಕಾ ಹೇಳಿದ್ದ ಅದೊಂದು ಮಾತು ಈಗ ಅಭಿಮಾನಿಗಳ ಕಿವಿ ನೆಟ್ಟಗೆ ಮಾಡಿದೆ.
ಯಾಕಂದ್ರೆ ಜೀವನದಲ್ಲಿ ಗೆಳೆಯ ಗೆಳತಿಯರನ್ನ ಆಯ್ಕೆ ಮಾಡೋವಾಗ ತುಂಬಾ ಹುಷಾರಾಗಿರಿ ಅಂತ ರಶ್ಮಿಕಾ ಬರೆದಿದ್ದಾರೆ. ಸಣ್ಣ ಹುಡುಗ ಹುಡುಗಿಯರೇ ಫ್ರೆಂಡ್ಸ್ ಮಾಡಿಕೊಳ್ಳುವಾಗ ತುಂಬಾ ಹುಷಾರಿಗಿರಿ. ಯಾರು ಕೆಟ್ಟವರಾಗಿರಲ್ಲ. ಹಾಗಂತ ಅವರು ನಿಮಗೆ ಒಳ್ಳೆವರು ಆಗಿರಲ್ಲ.
ಇದನ್ನೂ ಓದಿ: ಕನ್ನಡ.. ಕನ್ನಡ.. ಕನ್ನಡಿಗರ ಆಕ್ರೋಶದ ಬಳಿಕ ಸ್ಪಷ್ಟನೆ ಕೊಟ್ಟ ಗಾಯಕ ಸೋನು ನಿಗಮ್; ಹೇಳಿದ್ದೇನು?
ಇವತ್ತಿನ ನಿಮ್ಮ ಫ್ರೆಂಡ್ಸ್ ನಾಳೆ ನಿಮ್ಮವರಾಗಿರಲ್ಲ. ಹಾಗಾಗಿ ಯಾರನ್ನ ಆಯ್ಕೆ ಮಾಡಿಕೊಳ್ಳಬೇಕು ಅನ್ನೋದು ತುಂಬಾ ಮುಖ್ಯ. ನಿಮ್ಮ ತಂದೆ ತಾಯಿಯನ್ನ ಗೌರವಿಸಿ. ಜಗತ್ತಿನಲ್ಲಿ ಯಾರು ಪ್ರೀತಿ ಮಾಡದಷ್ಟು ಅವರು ನಿಮ್ಮನ್ನು ಪ್ರೀತಿ ಮಾಡ್ತಾರೆ. ಅವರ ಮಾತು ಕೇಳಿ ಮತ್ತು ಅವರನ್ನ ನಂಬಿ. ಅಪ್ಪ, ಅಮ್ಮನ ಟೇಕನ್ ಫಾರ್ ಗ್ರಾಂಟೈಡ್ ತಗೋಬೇಡಿ ಅಂತ ಸಲಹೆ ನೀಡಿದ್ದಾರೆ.
ರಶ್ಮಿಕಾ ಮಂದಣ್ಣ ಹಾಕಿರೋ ಈ ಪೋಸ್ಟ್‌ಗೆ ಫ್ಯಾನ್ಸ್ ತಲೆಗೆ ಹುಳ ಬಿಟ್ಕೊಂಡಿದ್ದಾರೆ.. ಅಯ್ಯೋ ನಮ್ಮ ಹೀರೋಯಿನ್‌ಗೆ ಏನಾಯ್ತಪ್ಪ ಅಂತ ಯೋಚ್ನೆ ಮಾಡ್ತಿದ್ದಾರೆ. ಅದೇನೆ ಇರಲಿ ರಶ್ಮಿಕಾ ಒಳ್ಳೆ ಸಜೇಷನ್ ಕೊಟ್ಟಿದ್ದಾರೆ ಅನ್ನೋದು ಕೆಲವರ ಅಭಿಪ್ರಾಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ