/newsfirstlive-kannada/media/post_attachments/wp-content/uploads/2024/04/Rashmika-mandanna-1.jpg)
ಇತ್ತೀಚೆಗೆ ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಜಪಾನ್​ ಹೋಗಿದ್ದರು. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದರು. ನನ್ನ ಬಾಲ್ಯದ ಕನಸು ನನಗಾಗಿದೆ ಎಂದು ಹೇಳಿಕೊಂಡಿದ್ದರು. ಆದರೀಗ ನಟಿ ಜಪಾನ್​ಗೆ ಭೇಟಿ ನೀಡಿರುವ ದೃಶ್ಯವನ್ನ ಯೂಟ್ಯೂಬ್​ ಮೂಲಕ ಹಂಚಿಕೊಂಡಿದ್ದಾರೆ.
ಕೊಡಗಿನ ಕುವರಿ ತಮ್ಮ ಯೂಟ್ಯೂಬ್​ ಖಾತೆಯಲ್ಲಿ ಜಪಾನ್​ಗೆ ಭೇಟಿ ನೀಡಿದ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅದರಲ್ಲಿ ಸ್ನೇಹಿತರ ಜೊತೆಗೆ ಸಂವಾದ, ಎಂಜಾಯ್​ ಮಾಡುವ ದೃಶ್ಯವನ್ನು ಶೇರ್​ ಮಾಡಿದ್ದಾರೆ.
ಅಂದಹಾಗೆಯೇ ನಟಿ ಜಪಾನ್​ಗೆ ಅನಿಮಿ ಅವಾರ್ಡ್​ಗಾಗಿ ಜಪಾನ್​ಗೆ ಭೇಟಿ ನೀಡಿದ್ದರು. ಈ ವೇಳೆ ನಟಿ ಕ್ರಿಸ್ಟಲ್​ ಬಾಡಿಕಾನ್​ ಡ್ರೆಸ್​ ಧರಿಸಿ ಪೋಸು ನೀಡಿದ್ದರು. ಸಿಂಪಲ್​ ಮೇಕಪ್​ ಜೊತೆಗೆ ಸಿಂಪಲ್​ ಹೇರ್​​ ಸ್ಟೈಲ್​ನಲ್ಲಿ ಕಾಣಿಸಿಕೊಂಡಿದ್ದರು.
ಇನ್ನು ರಶ್ಮಿಕಾ ಮಂದಣ್ಣ ವಿಡಿಯೋ ಹರಿಬಿಟ್ಟು 18 ಗಂಟೆಗಳಲ್ಲಿ 71 ಸಾವಿರ ವೀಕ್ಷಕರು ವೀಕ್ಷಣೆ ಮಾಡಿದ್ದಾರೆ. ಅನೇಕರು ಕಾಮೆಂಟ್​ ಕೂಡ ಬರೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us