ರಶ್ಮಿಕಾ ಮಂದಣ್ಣ ನಟನೆಯ ಕೇವಲ ಮೂರೇ 3 ಸಿನಿಮಾದ ಕಲೆಕ್ಷನ್ 3,500 ಕೋಟಿ ರೂಪಾಯಿ!

author-image
Bheemappa
Updated On
ರಶ್ಮಿಕಾ ಮಂದಣ್ಣ ನಟನೆಯ ಕೇವಲ ಮೂರೇ 3 ಸಿನಿಮಾದ ಕಲೆಕ್ಷನ್ 3,500 ಕೋಟಿ ರೂಪಾಯಿ!
Advertisment
  • ರಶ್ಮಿಕಾ ಮಂದಣ್ಣ ನಟನೆ ಮಾಡಿದರೆ ಸಿನಿಮಾ ಯಶಸ್ಸು ಗ್ಯಾರಂಟಿನಾ?
  • ಕುಬೇರ ಸಿನಿಮಾದಲ್ಲಿ ಧನುಷ್ ಜೊತೆ ರಶ್ಮಿಕಾ ಮಂದಣ್ಣ ಅಭಿನಯ
  • ನ್ಯಾಷನಲ್​ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯಿಸಿದ ಆ ಸಿನಿಮಾಗಳು?

ರಶ್ಮಿಕಾ ಮಂದಣ್ಣ ಸದ್ಯ ಭಾರತದ ಸಿನಿ ರಂಗದಲ್ಲಿ ಟಾಪ್​ ಹೀರೋಯಿನ್. ರಶ್ಮಿಕಾ ಕಾಲಿಟ್ಟ ಸಿನಿಮಾಗಳು ಎಲ್ಲ ಸೂಪರ್​ ಹಿಟ್​ ಆಗುತ್ತಿವೆ. ಸದ್ಯ ಇಡೀ ಸಿನಿಮಾ ಕ್ಷೇತ್ರವೇ ಇವರ ಕಾಲ್​ಶೀಟ್​ಗಾಗಿ ಕಾಯುತ್ತಿದೆ ಎನ್ನಬಹುದು. ಏಕೆಂದರೆ ಈ ವರೆಗೆ ನ್ಯಾಷನಲ್​ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಕೇವಲ 3 ಸಿನಿಮಾಗಳ ಗಳಿಕೆ 3 ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಎಂದು ಹೇಳಲಾಗುತ್ತಿದೆ.

ನ್ಯಾಷನಲ್​ ಕ್ರಶ್ ರಶ್ಮಿಕಾ ಮಂದಣ್ಣ ಕೈಗೆತ್ತಿಕೊಳ್ಳುವ ಎಲ್ಲ ಪ್ರಾಜೆಕ್ಟ್​ಗಳು ಚಿನ್ನವಾಗುತ್ತಿದ್ದು ಫೇಲ್ ಅನ್ನೋದೇ ನಟಿ ನೋಡುತ್ತಿಲ್ಲ. ತೆಲುಗು ಇಂಡಸ್ಟ್ರಿಗೆ ಯಾವಾಗ ರಶ್ಮಿಕಾ ಕಾಲಿಟ್ಟರೋ ಅಲ್ಲಿಂದ ಅವರು ಸೋಲು ಅನ್ನೋದೆ ನೋಡಿಲ್ಲ. ಪ್ರತಿ ಹೆಜ್ಜೆ ಕೂಡ ಪುಷ್ಪಗಳ ಮೆಟ್ಟಿಲುಗಳು ಆಗುತ್ತಿವೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಪುಷ್ಪ ಮೂವಿಯಲ್ಲಿ ಮಿಂಚಿದ್ದ ಬ್ಯೂಟಿ ರಶ್ಮಿಕಾ ಕೈಯಲ್ಲಿ ಈಗ ಸಾಲು ಸಾಲು ಸಿನಿಮಾಗಳಿವೆ.

publive-image

ಬಾಲಿವುಡ್​ನ ರಣಬೀರ್​ ಕಪೂರ್ ಜೊತೆ ರಶ್ಮಿಕಾ ಮಂದಣ್ಣ​ ಅಭಿನಯದ ಅನಿಮಲ್ ಸಿನಿಮಾ ವರ್ಲ್ಡ್​​ವೈಡ್​ ಒಟ್ಟು 900 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಇದಾದ ಮೇಲೆ ಪುಷ್ಪ- 2 ಸಿನಿಮಾ ಯಾರೂ ಊಹಿಸದ ರೀತಿಯಲ್ಲಿ ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡಿತ್ತು. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್​ಗೆ ಜೋಡಿ ಆಗಿದ್ದ ರಶ್ಮಿಕಾ ಮಂದಣ್ಣ, ಸಿನಿಮಾವು ವಿಶ್ವದ್ಯಾಂತ 1,800 ಕೋಟಿ ರೂಪಾಯಿಗಳನ್ನು ಕಲೆಕ್ಷನ್ ಮಾಡಿತ್ತು.

publive-image

ಇತ್ತೀಚೆಗೆ ಅಂದರೆ 2025ರಲ್ಲಿ ರಿಲೀಸ್ ಆಗಿರುವ ವಿಕ್ಕಿ ಕೌಶಲ್ ಜೊತೆ ರಶ್ಮಿಕಾ ಮಂದಣ್ಣ ಛಾವಾ ಸಿನಿಮಾ ಅದ್ಭುತ ಪ್ರದರ್ಶನ ಕಂಡು 807 ಕೋಟಿ ರೂಪಾಯಿಗಳನ್ನು ಗಳಿಸಿ ಬಹುದೊಡ್ಡ ಯಶಸ್ಸು ಕಂಡಿತ್ತು. ಇವಷ್ಟೇ ಅಲ್ಲ, ಇನ್ನು ಹಲವಾರು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಅಭಿನಯ ಮಾಡಿ ಯಶಸ್ಸು ಗಳಿಸಿದ್ದಾರೆ. ಈ ಎಲ್ಲದರ ಅಮೌಂಟ್​ ಸೇರಿದರೆ ಇನ್ನು ದೊಡ್ಡ ಮಟ್ಟದಲ್ಲಿ ಹಣ ಗಳಿಸಿದೆ ಎಂದು ಹೇಳಬಹುದು.

ಇದನ್ನೂ ಓದಿ:KL ರಾಹುಲ್ ಮೇಲೆ ದೊಡ್ಡ ಜವಾಬ್ದಾರಿ.. ಇದರಲ್ಲಿ ಯಶಸ್ಸು ಕಾಣ್ತಾರಾ ಕನ್ನಡಿಗ?

publive-image

ಅನಿಮಲ್, ಪುಷ್ಪ-2 ಹಾಗೂ ಛಾವಾ ಈ ಮೂರು ಸಿನಿಮಾಗಳ ಕಲೆಕ್ಷನ್​ ಒಟ್ಟು 3,507 ಕೋಟಿ ರೂಪಾಯಿಗಳು ಆಗುತ್ತದೆ. ಪ್ರಸ್ತುತ ಸಿನಿಮಾ ರಂಗದ ಉತ್ತುಂಗದಲ್ಲಿರುವ ನ್ಯಾಷನಲ್​ ಕ್ರಶ್ ರಶ್ಮಿಕಾ, ತಮಿಳು ನಟ ಧನುಷ್​ ಜೊತೆ ಕುಬೇರ ಸಿನಿಮಾದಲ್ಲಿ ಅಭಿನಯ ಮಾಡಿದ್ದು ಇದು ಕೂಡ ದೊಡ್ಡ ಮಟ್ಟದ ಯಶಸ್ಸು ಗಳಿಸುವ ನಿರೀಕ್ಷೆ ಇದೆ. ಕುಬೇರ ಇದೇ 20 ರಂದು ಬಿಡುಗಡೆ ಆಗಲಿದೆ. ಇನ್ನು ಥಾಮ ಎನ್ನುವ ಬಾಲಿವುಡ್​ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ. ಇವುಗಳಷ್ಟೇ ಅಲ್ಲದೇ ಇನ್ನು ಹಲವು ಸಿನಿಮಾಗಳು ರಶ್ಮಿಕಾ ನಟನೆಗಾಗಿ ಕಾಯುತ್ತಿವೆ ಎಂದು ಹೇಳಲಾಗುತ್ತಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment