/newsfirstlive-kannada/media/post_attachments/wp-content/uploads/2024/11/Rasikh-Dar.jpg)
ಇಂದು ನಡೆದ 2025ರ ಇಂಡಿಯನ್ ಪ್ರೀಮಿಯರ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆನ್‌ಕ್ಯಾಪ್ಡ್ ಯುವ ವೇಗದ ಬೌಲರ್ ರಸಿಖ್ ದಾರ್ ಮೇಲೆ ಕೋಟಿ ಕೋಟಿ ಸುರಿದಿದೆ.
ರಾಸಿಖ್ ದಾರ್ ಅವರಿಗೆ ಆರ್‌ಸಿಬಿ ಫ್ರಾಂಚೈಸಿ ಬರೋಬ್ಬರಿ 6 ಕೋಟಿ ನೀಡಿ ಬಿಡ್ ಮಾಡಿದೆ. ರಸಿಖ್ ದಾರ್ ಉತ್ತಮ ವೇಗದ ಬೌಲರ್ ಆಗಿದ್ದು, ಈ ಹಿಂದೆ ಐಪಿಎಲ್‌ನಲ್ಲಿ ಆಡಿದ ಅನುಭವ ಇದೆ.
ಈಗಾಗಲೇ ಆರ್‌ಸಿಬಿ ಆಸ್ಟ್ರೇಲಿಯಾ ವೇಗದ ಬೌಲರ್ ಜೋಶ್ ಹೆಜಲ್ವುಡ್ ಅವರನ್ನು 12.50 ಕೋಟಿಗೆ ಖರೀದಿ ಮಾಡಿತ್ತು. ಈ ಬೆನ್ನಲ್ಲೇ ಬೌಲಿಂಗ್ ವಿಭಾಗಕ್ಕೆ ಮತ್ತೋರ್ವ ಆಟಗಾರ ರಸಿಖ್ ದಾರ್ ಅವರನ್ನು ಸೇರಿಸಿಕೊಂಡಿದೆ.
ಯಾರು ಈ ರಸಿಖ್ ದರ್?
ಜಮ್ಮು ಕಾಶ್ಮೀರದ ಯುವ ವೇಗಿ ರಸಿಖ್ ದರ್. ಇವರು ಐಪಿಎಲ್‌ನಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ರಸಿಖ್ ತಾವು ಆಡಿದ 11 ಪಂದ್ಯಗಳಲ್ಲಿ ಕೇವಲ 9 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: ಹರಾಜಿನಲ್ಲಿ ಕನ್ನಡಿಗರಿಗೆ ಬಂಪರ್; ಕೋಟಿ ಕೋಟಿ ಬಾಚಿಕೊಂಡ ಕರ್ನಾಟಕ ಆಟಗಾರರು ಇವ್ರು!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್