/newsfirstlive-kannada/media/post_attachments/wp-content/uploads/2025/03/bhuvneshwar_kumar.jpg)
ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಗೆಲುವು ಪಡೆದಿತ್ತು. ಆದರೆ ಈ ತಂಡದಲ್ಲಿ ಅನುಭವಿ ಬೌಲರ್ ಆಗಿದ್ದ ಭುವನೇಶ್ವರ್ ಕುಮಾರ್ ಅವರನ್ನು ಹೊರಗಿಡಲಾಗಿತ್ತು. ಕೈಬೆರಳಿಗೆ ಸಣ್ಣ ಗಾಯ ಮಾಡಿಕೊಂಡಿದ್ದರಿಂದ ಭುವನೇಶ್ವರ್ ಸದ್ಯ ಚೇತರಿಸಿಕೊಂಡಿದ್ದು ಸಿಎಸ್ಕೆ ವಿರುದ್ಧ ಇಂದು ಅಖಾಡಕ್ಕೆ ಧುಮಕಲಿದ್ದಾರೆ ಎನ್ನಲಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯಕ್ಕೂ ಮುನ್ನ ಆರ್ಸಿಬಿ ತಂಡದ ಬಲ ಹೆಚ್ಚಿದೆ. ಇಂಜುರಿಗೆ ತುತ್ತಾಗಿ ಮೊದಲ ಪಂದ್ಯದಿಂದ ಹೊರಗಿದ್ದ ವೇಗಿ ಭುವನೇಶ್ವರ್ ಕುಮಾರ್ ಫಿಟ್ ಆಗಿದ್ದಾರೆ. ಚೆಪಾಕ್ನ ನೆಟ್ಸ್ನಲ್ಲಿ ಭುವನೇಶ್ವರ್ ಕುಮಾರ್ ಅಭ್ಯಾಸ ನಡೆಸಿದ್ದಾರೆ. ಫಿಟ್ ಆಗಿರೋ ಭುವನೇಶ್ವರ್ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯೋ ಸಾಧ್ಯತೆಯಿದ್ದು, ಯುವ ಆಟಗಾರ ರಸಿಕ್ ದಾರ್ ಸ್ಥಾನಕ್ಕೆ ರಿಪ್ಲೇಸ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಕೊಡಗಿನಲ್ಲಿ ಭೀಕರ ಕೃತ್ಯ.. 6 ವರ್ಷದ ಮಗು ಸೇರಿ ನಾಲ್ವರ ಜೀವ ತೆಗೆದ ಕಿರಾತಕ
ಭುವನೇಶ್ವರ್ ಕುಮಾರ್ ಅವರು ಫಿಟ್ನೆಸ್ ಬಗ್ಗೆ ಆರ್ಸಿಬಿ ಫ್ರಾಂಚೈಸಿ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ. ಭುವಿ ಧೈರ್ಯಶಾಲಿಯಾಗಿ ತಂಡಕ್ಕೆ ಕಂಬ್ಯಾಕ್ ಮಾಡಲಿದ್ದಾರೆ. ಈ ಟ್ವೀಟ್ ಬೆನ್ನಲ್ಲೇ, ಭುವನೇಶ್ವರ್ ಇಂದು ನಡೆಯಲಿರುವ ಸಿಎಸ್ಕೆ ವಿರುದ್ಧದ ರಣಾಂಗಣಕ್ಕೆ ಧುಮಕಲಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಭುವನೇಶ್ವರ್ ತಂಡಕ್ಕೆ ಕಂಬ್ಯಾಕ್ ಮಾಡಿದ್ರೆ ಆದರೆ, ಆರ್ಸಿಬಿ ಬೌಲಿಂಗ್ ಪಡೆ ಫುಲ್ ಸ್ಟ್ರಾಂಗ್ ಆಗಲಿದೆ.
ಮೊದಲ ಪಂದ್ಯದಲ್ಲಿ ಆರ್ಸಿಬಿ ಭುವಿ ಅವರನ್ನು ಹೊರಗಿಟ್ಟು, ಜೋಶ್ ಹೇಜಲ್ವುಡ್, ಯಶ್ ದಯಾಳ್ ಹಾಗೂ ರಸಿಕ್ ದಾರ್ ಹಾಗೂ ಸುಯೇಶ್ ಶರ್ಮಾ ಅವರೊಂದಿಗೆ ದಾಳಿ ನಡೆಸಲಾಗಿದಿತ್ತು. ಹೇಜಲ್ವುಡ್ ಆರ್ಸಿಬಿ ಪರ 2 ವಿಕೆಟ್ ಕಿತ್ತರೆ, ಯಶ್ ದಯಾಳ್ 1 ವಿಕೆಟ್ ಕಬಳಿಸಿದ್ದರು. ಕೃನಾಲ್ ಪಾಂಡ್ಯ 3 ವಿಕೆಟ್ ಕಿತ್ತು ತಂಡದ ಗೆಲುವಿಗೆ ಕಾರಣ ಆಗಿದ್ದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ