/newsfirstlive-kannada/media/post_attachments/wp-content/uploads/2024/10/RATANA-TATA-3.jpg)
ರತನ್ ಟಾಟಾ ಅವರ ನಿರ್ಗಮನವು ಭಾರತೀಯ ಕಾರ್ಪೊರೇಟ್ ಜಗತ್ತಿನಲ್ಲಿ ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ. ಜೊತೆಗೆ ಭೌತಿಕವಾಗಿ ಇಲ್ಲದಿದ್ದರೂ, ಅವರ ಸಾಧನೆಗಳು ಶಾಶ್ವತವಾಗಿ ಉಳಿಯುತ್ತವೆ.
ರತನ್, ಟಾಟಾ ಗ್ರೂಪ್‌ನ ಅತ್ಯಂತ ಯಶಸ್ವಿ ಅಧ್ಯಕ್ಷರಲ್ಲಿ ಒಬ್ಬರಾಗಿದ್ದರು. ವಿಶ್ವದ ಅತ್ಯಂತ ಮೌಲ್ಯಯುತ ಸಮೂಹ ಕಂಪನಿಗಳಲ್ಲಿ ಟಾಟಾ ಗ್ರೂಪ್ ಕೂಡ ಒಂದು. ಇದರ ಬೆಳವಣಿಗೆ ಎಷ್ಟರಮಟ್ಟಿಗೆ ತಲುಪಿದೆ ಅಂದರೆ ಕೆಲವು ದೇಶಗಳ ಜಿಡಿಪಿಯು ಕೂಡ ಟಾಟಾ ಗ್ರೂಪ್‌ನ ಮಾರುಕಟ್ಟೆ ಮೌಲ್ಯವನ್ನು ಪೂರೈಸಲು ಸಾಧ್ಯವಿಲ್ಲ!
ಇದನ್ನೂ ಓದಿ:ತೀವ್ರ ಲೋ ಬಿಪಿಯಿಂದ ಬಳಲುತ್ತಿದ್ದ ರತನ್ ಟಾಟಾ; BP ಇರೋರು ಈ ತಪ್ಪು ಮಾಡಬಾರದು!
ವಿಶೇಷ ಅಂದರೆ ಟಾಟಾ ಗ್ರೂಪ್‌ನ ನಿವ್ವಳ ಮೌಲ್ಯವು ಪಾಕಿಸ್ತಾನದ GDPಗಿಂತ ಹೆಚ್ಚಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ಪಾಕಿಸ್ತಾನದ ಜಿಡಿಪಿ 347 ಶತಕೋಟಿ ಡಾಲರ್‌ಗೆ ತಲುಪುವ ನಿರೀಕ್ಷೆಯಿದೆ. ಇದು ಸುಮಾರು 34 ಲಕ್ಷ ಕೋಟಿ ರೂಪಾಯಿಗಳಿಗೆ ಸಮನಾಗಿರುತ್ತದೆ. ಜುಲೈ 2024 ರ ವೇಳೆಗೆ ಟಾಟಾ ಸಮೂಹದ ಮಾರುಕಟ್ಟೆ ಕ್ಯಾಪ್ 400 ಬಿಲಿಯನ್ ಡಾಲರ್ ದಾಟಲಿದೆ. ಅಂದರೆ 40 ಲಕ್ಷ ಕೋಟಿಯ ಸಮೀಪದಲ್ಲಿದೆ. ಅಂದರೆ ಪಾಕಿಸ್ತಾನ ಆರ್ಥಿಕತೆಗಿಂತ ಟಾಟಾ ಗ್ರೂಪ್​​​ನ ಮೌಲ್ಯ ದೊಡ್ಡದಿದೆ.
1868 ರಿಂದ ಪ್ರಾರಂಭ
ಟಾಟಾ ಗ್ರೂಪ್ ಬಹಳ ಹಳೆಯ ವ್ಯಾಪಾರ ಸಂಸ್ಥೆ. 1868ರಲ್ಲಿ ವ್ಯಾಪಾರ ಕಂಪನಿಯಾಗಿ ಪ್ರಾರಂಭಿಸಲಾಯಿತು. ಟಾಟಾ ಗ್ರೂಪ್ ಸುಮಾರು 100 ಕಂಪನಿಗಳನ್ನು ಒಳಗೊಂಡಿದೆ. ಟಾಟಾ ಗ್ರೂಪ್ ಎಷ್ಟು ದೊಡ್ಡದಾಗಿದೆ ಅಂದರೆ ಇದರ ವ್ಯಾಪಾರವು 6 ಖಂಡಗಳಲ್ಲಿ 100ಕ್ಕೂ ಹೆಚ್ಚು ದೇಶಗಳಲ್ಲಿ ಹರಡಿದೆ. ಟಾಟಾ ಗ್ರೂಪ್ ಉತ್ಪನ್ನಗಳು ಪ್ರಪಂಚದ 150 ದೇಶಗಳಲ್ಲಿ ಅಸ್ತಿತ್ವದಲ್ಲಿವೆ.
ಇದನ್ನೂ ಓದಿ:ರತನ್ ಟಾಟಾಗೆ ಕಾಡಿದ ಕಾಯಿಲೆ ಯಾವುದು? ಕ್ರಮೇಣ ಕೆಲವು ಅಂಗಗಳು ಕೆಲಸ ಮಾಡೋದನ್ನೇ ನಿಲ್ಲಿಸಿದ್ವು..
10 ಲಕ್ಷಕ್ಕೂ ಹೆಚ್ಚು ಮಂದಿಗೆ ಉದ್ಯೋಗ
ಟಾಟಾ ಗ್ರೂಪ್ ಹೆಚ್ಚಿನ ಸಂಖ್ಯೆಯ ಜನರಿಗೆ ಉದ್ಯೋಗ ನೀಡುತ್ತಿದೆ. 2023ರ ಆರ್ಥಿಕ ವರ್ಷದ ಅಂಕಿ-ಅಂಶಗಳ ಪ್ರಕಾರ ವಿಶ್ವದಾದ್ಯಂತ ಟಾಟಾ ಗ್ರೂಪ್ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸಂಖ್ಯೆ 10,28,000. ಟಿಸಿಎಸ್ ಒಂದರಲ್ಲೇ ಸುಮಾರು 6,15,000 ಮಂದಿ ಕೆಲಸ ಮಾಡ್ತಿದ್ದಾರೆ. ಉದ್ಯೋಗಿಗಳ ವಿಷಯದಲ್ಲಿ TCS ವಿಶ್ವದ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us