/newsfirstlive-kannada/media/post_attachments/wp-content/uploads/2024/10/RATAN_TATA.jpg)
ಮುಂಬೈ: ವೃದ್ಧಾಪ್ಯ ಕಾಯಿಲೆಗಳಿಂದ ಬಳುತ್ತಿದ್ದ ಭಾರತದ ಖ್ಯಾತ ಉದ್ಯಮಿ ರತನ್ ಟಾಟಾ ಅವರು ಇಹಲೋಕ ತ್ಯಜಿಸಿದ್ದಾರೆ. 86 ವರ್ಷದ ರತನ್ ಟಾಟಾ ಅವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ರತನ್ ಟಾಟಾ ಅವರು ಯಾವಗಲೂ ಓದಿನಲ್ಲಿ ಮುಂದಿದ್ದರು. ಹೀಗಾಗಿಯೇ ಅಮೆರಿಕದಲ್ಲಿ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಮುಂದೊಂದು ದಿನ ಆ ಸಂಸ್ಥೆಗೆ ಯಾರು ಕೊಡದಷ್ಟು ಕೊಡುಗೆ ನೀಡಿದ್ದಾರೆ.
ರತನ್ ಟಾಟಾ ಅವರು ಅಂದಿನ ಬಾಂಬೆ ಅಂದರೆ ಇಂದಿನ ಮುಂಬೈಯಲ್ಲಿ ಪಾರ್ಸಿ ಜೊರಾಸ್ಟ್ರಿಯನ್ ಕುಟುಂಬದಲ್ಲಿ 1937 ಡಿಸೆಂಬರ್ 28ರಂದು ಜನಿಸಿದರು. ಇವರ ತಂದೆ ನಾವಲ್ ಟಾಟಾ, ತಾಯಿ ಸೂನಿ ಟಾಟಾ. ರತನ್ ಟಾಟಾ 10 ವರ್ಷದ ಬಾಲಕನಾಗಿದ್ದಾಗಲೇ ಪೋಷಕರು ಡಿವೋರ್ಸ್ ಪಡೆದು ಬೇರೆ ಬೇರೆಯಾದರು. ಬಳಿಕ ಪಾರ್ಸಿ ಅನಾಥಾಲಯಕ್ಕೆ ಸೇರಿ ರತನ್ ಟಾಟಾ ಶಿಕ್ಷಣ ಮುಂದುವರೆಸಿದ್ದರು.
ಮುಂಬೈನಿಂದ ಅಮೆರಿಕದವರೆಗೆ ಶಿಕ್ಷಣ
8ನೇ ತರಗತಿವರೆಗೆ ಮುಂಬೈನ ಚಾಂಪಿಯನ್ ಸ್ಕೂಲ್​, ಕ್ಯಾಥೆಡ್ರಲ್ ಹಾಗೂ ಜಾನ್ ಕಾನನ್ ಶಾಲೆಯಲ್ಲಿ ರತನ್ ಟಾಟಾ ಓದಿದರು. ಇಲ್ಲಿನ ಓದಿನ ಬಳಿಕ ಶಿಮ್ಲಾದ ಬಿಷಪ್ ಕಾಟನ್ ಸ್ಕೂಲಿನಲ್ಲಿ ವ್ಯಾಸಂಗ ಮಾಡಿದರು. ಭಾರತದಲ್ಲಿ ಓದು ಮುಗಿದ ಮೇಲೆ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದರು. ಅವರು ನ್ಯೂಯಾರ್ಕ್ ನಗರದ ರಿವರ್‌ಡೇಲ್ ಕಂಟ್ರಿ ಸ್ಕೂಲ್​ನಲ್ಲಿ ವ್ಯಾಸಂಗ ಮಾಡಿ 1955ರಲ್ಲಿ ಪದವಿ ಪಡೆದುಕೊಂಡರು.
ಇದನ್ನೂ ಓದಿ:ರತನ್ ಟಾಟಾಗೆ ಸಂತಾಪ ಸೂಚಿಸಿದ ಕ್ರಿಕೆಟರ್ಸ್​.. ಸೂರ್ಯಕುಮಾರ್, ಶಮಿ, ಸೇಹ್ವಾಗ್ ಹೇಳಿದ್ದು ಏನು?
/newsfirstlive-kannada/media/post_attachments/wp-content/uploads/2023/12/Education.jpg)
ಹೈಸ್ಕೂಲ್‌ನಿಂದ ಪದವಿ ಪಡೆದ ನಂತರ ರತನ್ ಟಾಟಾ ಅವರು ನ್ಯೂಯಾರ್ಕ್​ನ ಕಾರ್ನೆಲ್ ವಿಶ್ವವಿದ್ಯಾನಿಲಯಕ್ಕೆ ಸೇರಿಕೊಂಡು 1959ರಲ್ಲಿ ಆರ್ಟಿಕಲ್ಚರ್​​ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇಲ್ಲಿರುವಾಗಲೇ ಆಲ್ಫಾ ಸಿಗ್ಮಾ ಫೈ ಫ್ರೆಟರ್ನಿಟಿಯ ಸದಸ್ಯರಾದರು. ಈ ಸಂಸ್ಥೆಯಲ್ಲಿ ಓದಿದ ಸವಿನೆನಪಿಗಾಗಿ ಕಾರ್ನೆಲ್ ಸಂಸ್ಥೆಗೆ 50 ಮಿಲಿಯನ್ ಡಾಲರನ್ನು 2008ರಲ್ಲಿ ರತನ್ ಟಾಟಾ ಅವರು ಉಡುಗೊರೆಯಾಗಿ ನೀಡಿದರು. ಇದು ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿ ಅತಿದೊಡ್ಡ ಕೊಡುಗೆ ಆಗಿದೆ.
ಇದನ್ನೂ ಓದಿ: ಜಾಲಿ ಮೂಡ್​ನಲ್ಲಿ ರೋಹಿತ್-ರಿತಿಕಾ.. ಅಬ್ದು ರೋಜಿಕ್ ಜೊತೆ ಫೋಸ್ ಕೊಟ್ಟಿದ್ದು ಎಲ್ಲಿ?
1970 ರ ದಶಕದಲ್ಲಿ ಟಾಟಾ ಗ್ರೂಪ್​ಗೆ ರತನ್ ಟಾಟಾ ಅವರು ಮ್ಯಾನೇಜರ್ ಆಗಿ ಆಯ್ಕೆ ಆದರು. ತಮ್ಮ ಸಂಸ್ಥೆಯ ಅಂಗಸಂಸ್ಥೆಯಿಂದ ರೇಡಿಯೋ ಹಾಗೂ ಎಲೆಕ್ಟ್ರಾನಿಕ್ಸ್ (NELCO) ಅನ್ನು ಉತ್ಪಾದಿಸಿ ಆರಂಭಿಕ ಯಶಸ್ಸು ಕಂಡರು. ಆರ್ಥಿಕ ಮಂದಗತಿಯಲ್ಲಿದ್ದ ಕಂಪನಿಗೆ ಇದು ಬೂಸ್ಟ್​ ನೀಡಿದಂತೆ ಆಯಿತು. ಅಂದಿನಿಂದ ಟಾಟಾ ತಮ್ಮ ಬ್ಯುಸಿನೆಸ್​ನಲ್ಲಿ ಸಕ್ಸಸ್ ಅನ್ನು ನೋಡುತ್ತಲೇ ಬಂದರು. ಎಲ್ಲದಕ್ಕಿಂತ ಹೆಚ್ಚಾಗಿ ವ್ಯಾಪಾರದಲ್ಲಿ ಹಣ, ಲಾಭವನ್ನು ನೋಡುವುದಕ್ಕಿಂತ ನಂಬಿಕೆ, ಸ್ವಾವಲಂಬಿ ಹಾಗೂ ಸಾಮಾಜಿಕತೆಗೆ ಹೆಚ್ಚಿನ ಹೊತ್ತು ಕೊಟ್ಟರು. ಹೀಗಾಗಿಯೇ ಈಗಲೂ ಟಾಟಾ ವಸ್ತುಗಳಿಗೆ ಬೆಲೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us