/newsfirstlive-kannada/media/post_attachments/wp-content/uploads/2024/10/Ratan-Tata-14.jpg)
ಕೈಗಾರಿಕೋದ್ಯಮಿ ರತನ್ ಟಾಟಾ ನಿಧನರಾಗಿದ್ದಾರೆ. 86ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಗೆ ತುತ್ತಾಗಿ ಉಸಿರು ನಿಲ್ಲಿಸಿದ್ದಾರೆ. ಸೋಮವಾರದಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾದ ಅವರು ಬುಧವಾರ ರಾತ್ರಿಯಂದು ಕೊನೆಯುಸಿರೆಳೆದಿದ್ದಾರೆ.
ದೇಶದ ಅಪ್ರತಿಮ ಐಕಾನ್ ರತನ್ ಟಾಟಾಗೆ ಮಹಾರಾಷ್ಟ್ರ ಸರ್ಕಾರವು ಅಂತಿಮ ವಿಧಿವಿಧಾನವನ್ನು ಸಲ್ಲಿಸಲಿದೆ. ಅವರ ಕುಟುಂಬ ಜೊತೆಯಾಗಿ ನಿಂತು ಕೊನೆಯ ಕಾರ್ಯವನ್ನು ಮಾಡಲಿದೆ. ಪಾರ್ಥಿವ ಶರೀರವನ್ನು ಇಂದು ದಕ್ಷಿಣ ಮುಂಬೈನ ನಾರಿಮನ್ ಪಾಯಿಂಟ್‌ನಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ (NCPA) ತೆಗೆದುಕೊಂಡು ಹೋಗಲಾಗುತ್ತದೆ.
ಇದನ್ನೂ ಓದಿ: Ratan Tata: ಬಾಲ್ಯ, ಬದುಕು, ಸಾಧನೆ, ಪ್ರೀತಿ.. ಮರೆಯಾದ ಮಾಣಿಕ್ಯನ ಫೋಟೋಗಳು ಇಲ್ಲಿವೆ
ಅಂತಿಮ ದರ್ಶನಕ್ಕೆ ವ್ಯವಸ್ಥೆ
ಇಂದು ಬೆಳಿಗ್ಗೆ 10.30 ರಿಂದ ಸಂಜೆ 3.30 ರವರೆಗೆ ರತನ್ ಟಾಟಾ ಅವರ ಅಂತಿಮ ದರ್ಶನ ಪಡೆಯಲು ಜನರಿಗೆ ವ್ಯವಸ್ಥೆ ಮಾಡಲಾಗಿದೆ. 3.30ರ ಬಳಿಕ ಅವರ ಪಾರ್ಥಿವ ಶರೀರವನ್ನು ಅಂತಿಮ ವಿಧಿವಿಧಾನಗಳಿಗಾಗಿ ವರ್ಲಿ ಚಿತಾಗಾರಕ್ಕೆ ಕೊಂಡೊಯ್ಯಲಾಗುತ್ತದೆ. ಗೃಹ ಸಚಿವ ಅಮಿತ್ ಶಾರವರು ರತನ್ ಟಾಟಾ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಪ್ರೀತಿಯ ಗೆಳೆಯನಿಗೆ ಮಾಜಿ ಗೆಳತಿಯಿಂದ ಭಾವುಕ ವಿದಾಯ.. ನಿನ್ನ ನಷ್ಟ ಸಹಿಸಿಕೊಳ್ಳುವುದು ಕಷ್ಟವೆಂದ ಸಿಮಿ ಗೆರೆವಾಲ್
ಎಲ್ಲಾ ಸರ್ಕಾರಿ ಕಾರ್ಯಕ್ರಮ ರದ್ದು
ಮಹಾರಾಷ್ಟ್ರದಲ್ಲಿ ಗುರುವಾರದಂದು ನಡೆಯಬೇಕಾಗಿದ್ದ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆಯವರು, ‘ನೈತಿಕತೆ ಮತ್ತು ಉದ್ಯಮಶೀಲತೆಯ ವಿಶಿಷ್ಟ ಮಿಶ್ರಣ’ ಎಂದು ಕರೆಯುವ ಮೂಲಕ ಬೇಸರ ವ್ಯಕ್ತ ಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಸಹ ಸಂತಾಪ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ