newsfirstkannada.com

×

ಗುಡ್​ಬೈ, ಮೈ ಡಿಯರ್​ ಲೈಟ್​ ಹೌಸ್​! ರತನ್​ ಟಾಟಾಗೆ ಕಣ್ಣೀರಿನ ವಿದಾಯ ಹೇಳಿದ ಶಾಂತನು ನಾಯ್ದು.. ಯಾರೀತ?

Share :

Published October 10, 2024 at 1:35pm

Update October 10, 2024 at 1:36pm

    ಈ ಪ್ರೀತಿಗೆ ತೆರಬೇಕಾದ ಬೆಲೆ ದುಃಖ ಎಂದ ಶಾಂತನು ನಾಯ್ಡು

    ಶಾಂತನು ನಾಯ್ಡು ಮತ್ತು ರತನ್​ ಟಾಟಾ ಪರಿಚಯ ಹೇಗಾಯ್ತು?

    31 ವರ್ಷದ ವ್ಯಕ್ತಿ ರತನ್​ ಟಾಟಾರವರ ಜನರನ್​ ಮ್ಯಾನೇಜರ್​ ಹೇಗಾದರು?

ಟಾಟಾ ಗ್ರೂಪ್​ನ ಮಾಜಿ ಅಧ್ಯಕ್ಷ ರತನ್​ ಟಾಟಾ ನಿಧನರಾಗಿದ್ದಾರೆ. ಇವರ ಸಾವಿನ ಸುದ್ದಿಯಿಂದ ನೊಂದಿರುವ ಅವರ ಜನರಲ್​ ಮ್ಯಾನೇಜರ್​ ಶಾಂತನು ನಾಯ್ಡು ಕೊನೆಯ ಸಾಲುಗಳನ್ನು ಬರೆದಿದ್ದಾರೆ. ‘ಗುಡ್​ಬೈ, ಮೈ ಡಿಯರ್​ ಲೈಟ್​​​ಹೌಸ್​’ ಎಂದು 86 ವರ್ಷದ ರತನ್​ ಟಾಟಾಗೆ ಕಣ್ಣೀರಿನ ವಿದಾಯ ಅರ್ಪಿಸಿದ್ದಾರೆ.

ಶಾಂತನು ನಾಯ್ಡು ಅವರು ರತನ್​ ಟಾಟಾ ಭಾರೀ ಆತ್ಮೀಯರಾಗಿದ್ದರು, ತನ್ನ ಸ್ನೇಹಿತನನ್ನು ಕಳೆದುಕೊಂಡಿರುವ ಶಾಂತನು ಲಿಂಕ್ಡ್​ ಇನ್​ನಲ್ಲಿ ರತನ್​​ ಟಾಟಾ ಬಗ್ಗೆ ಬರೆದುಕೊಂಡಿದ್ದಾರೆ. ‘ಈ ಸ್ನೇಹವು ನನ್ನೊಂದಿಗೆ ಬಿಟ್ಟ ಶೂನ್ಯವನ್ನು ತುಂಬಲು ನಾನು ಉಳಿದ ಜೀವವನ್ನು ನಾನು ಕಳೆಯುತ್ತೇನೆ. ಈ ಪ್ರೀತಿಗೆ ತೆರಬೇಕಾದ ಬೆಲೆ ದುಃಖವಾಗಿದೆ. ಗುಡ್​​ಬೈ, ನನ್ನ ಪ್ರೀತಿಯ ಲೈಟ್​​ಹೌಸ್​’ ಎಂದು ಬರೆದುಕೊಂಡಿದ್ದಾರೆ.

ಶಾಂತನು ನಾಯ್ಡು ಯಾರು?

ಶಾಂತನು ನಾಯ್ಡು ಸಾಮಾಜಿಕ ಕಾರ್ಯಕರ್ತ, ಪ್ರಾಣಿ ಪ್ರೇಮಿ, ಲೇಖಕ ಹಾಗೂ ಯುವ ಉದ್ಯಮಿಯಾಗಿದ್ದಾರೆ. ಮಹಾರಾಷ್ಟ್ರ ಪುಣೆ ಮೂಲದ ಶಾಂತನು 1993ರಲ್ಲಿ ಜನಿಸಿದ್ದು, ಸಾಮಾಜಿಕ ಸೇವೆಯನ್ನು ಮಾಡುವ ಉದ್ದೇಶದಿಂದ ಮೋಟೋಪೌಸ್​ ಎಂಬ ಸಂಸ್ಥೆಯನ್ನು ತೆರೆಯುತ್ತಾರೆ. ಅದರ ಮೂಲಕ ಬೀದಿ ನಾಯಿಗೆ ಸಹಾಯ ಮಾಡುತ್ತಾರೆ. ಈ ವಿಚಾರ ತಿಳಿದು ರತನ್​ ಟಾಟಾ ಶಾಂತನು ನಾಯ್ಡು ಅವರನ್ನು ಮುಂಬೈಗೆ ಕರೆಸುತ್ತಾರೆ. ಬಳಿಕ ತನ್ನ ಟಾಟಾ ತನ್ನ ಜನರನ್​ ಮ್ಯಾನೇಜರ್ ಆಗಿ ಶಾಂತನು ನಾಯ್ಡುವನ್ನು ನೇಮಕ ಮಾಡುತ್ತಾರೆ.

ಶಾಂತನು ನಾಯ್ಡು ಕುಟುಂಬ ಆಂಧ್ರ ಮೂಲದವರು. ಆದರೆ ಶಾಂತನು ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್​​ ಇಂಜಿನಿಯರಿಂಗ್​ ಪದವಿ ಪಡೆಯುತ್ತಾರೆ. 2016ರಲ್ಲಿ ಕಾರ್ನೆಲ್​​ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪೂರ್ಣಗೊಳಿಸುತ್ತಾರೆ.

ಶಾಂತನು ನಾಯ್ಡು ಸ್ಥಾಪಿಸಿದ ಎನ್​ಜಿಒಗೆ ರತನ್​ ಟಾಟಾ ಬಂಡವಾಳ ಹೂಡಿದ್ದಾರೆ. ಇದಲ್ಲದೆ ಅನೇಕ ಸ್ಟಾರ್ಟ್​ಅಪ್​ಗೆ ರತನ್​ ಟಾಟಾ ಬಂಡವಾಳ ಹೂಡಿದ್ದಾರೆ. ಸಾಮಾಜಿಕ ಕಾರ್ಯದ ಮೂಲಕ 31 ವರ್ಷದ ಶಾಂತನು ಗುರುತಿಸಿರುವುದು ಒಂದೆಡೆಯಾದರೆ, ಆತನ ಸಂಬಳದ ವಿಚಾರವಾಗಿಗೂ ಗುರುತಿಸಿಕೊಂಡಿದ್ದಾರೆ. ಅಚ್ಚರಿ ಸಂಗತಿ ಎಂದರೆ ವಾರ್ಷಿಕವಾಗಿ ಇವರ ಆದಾಯ 5 ರಿಂದ 6 ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗುಡ್​ಬೈ, ಮೈ ಡಿಯರ್​ ಲೈಟ್​ ಹೌಸ್​! ರತನ್​ ಟಾಟಾಗೆ ಕಣ್ಣೀರಿನ ವಿದಾಯ ಹೇಳಿದ ಶಾಂತನು ನಾಯ್ದು.. ಯಾರೀತ?

https://newsfirstlive.com/wp-content/uploads/2024/10/Shantanu-Naidu.jpg

Load More