/newsfirstlive-kannada/media/post_attachments/wp-content/uploads/2024/10/Ratan-Tata-Dog-Goa-1.jpg)
ಖ್ಯಾತ ಉದ್ಯಮಿ, ಸಹೃದಯಿ, ಸರಳ ಸ್ವಭಾವದ ರತನ್ ಟಾಟಾ ಅವರು ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ 86 ವರ್ಷದ ರತನ್ ಟಾಟಾ ಅವರು ನಿನ್ನೆ ನಿಧನರಾಗಿದ್ದರು. ಮುಂಬೈನಲ್ಲಿ ರತನ್ ಟಾಟಾ ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಗಿದೆ.
ಇದನ್ನೂ ಓದಿ: ಶ್ವಾನಪ್ರೇಮಿ ರತನ್ ಟಾಟಾ! ಅಂದು ಕಿಂಗ್ ಚಾಲ್ಸ್ ನೀಡುವ ‘ಜೀವಮಾನದ ಸಾಧನೆ’ ಪ್ರಶಸ್ತಿಯನ್ನೇ ಕೈಬಿಟ್ಟಿದ್ರು
ರತನ್ ಟಾಟಾ ಅವರ ಪಾರ್ಥಿವ ಶರೀರಕ್ಕೆ ದೇಶದ ನಾನಾ ಗಣ್ಯರು, ಟಾಟಾ ಸಂಸ್ಥೆಯಲ್ಲೇ ಆಶ್ರಯ ಪಡೆದ ಸಾವಿರಾರು ಉದ್ಯೋಗಿಗಳು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ರತನ್ ಟಾಟಾ ಅವರ ಅಗಲಿಕೆಗೆ ಇಡೀ ದೇಶವೇ ಸಂತಾಪ ಸೂಚಿಸಿದ್ರೆ, ಅವರೇ ಸಾಕಿದ ಪ್ರೀತಿಯ ಶ್ವಾನವೊಂದು ಕಂಬನಿ ಮಿಡಿದಿದೆ.
ರತನ್ ಟಾಟಾ ಅವರ ಪ್ರೀತಿಯ ಗೋವಾ ಹೆಸರಿನ ಶ್ವಾನವನ್ನು ಅಂತಿಮ ದರ್ಶನಕ್ಕೆ ಕರೆದುಕೊಂಡು ಬರಲಾಗಿತ್ತು. ರತನ್ ಟಾಟಾ ಅವರ ಬಳಿ ಎಂದಿನಂತೆ ಓಡೋಡಿ ಹೋಗುವಂತೆ ಗೋವಾ ಹೋಗಿದೆ. ಆದರೆ ತನ್ನ ಯಜಮಾನ ಚಿರನಿದ್ರೆಗೆ ಜಾರಿರುವುದನ್ನ ನೋಡಿ ಹಾಗೇ ಒಂದು ಕ್ಷಣವಾಗಿ ಭಾವುಕವಾಗಿ ನಿಂತಿದೆ. ಈ ವಿಡಿಯೋ ಮನಕಲುಕುವಂತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.
ಇದನ್ನೂ ಓದಿ: ಆಡು ಮುಟ್ಟದ ಸೊಪ್ಪಿಲ್ಲ ಟಾಟಾ ಗ್ರೂಪ್ ಹೂಡಿಕೆ ಮಾಡದ ಕ್ಷೇತ್ರವಿಲ್ಲ; ಯಾವೆಲ್ಲಾ ಕ್ಷೇತ್ರಗಳಲ್ಲಿ ಟಾಟಾ ಹೂಡಿಕೆ ಮಾಡಿದೆ ಗೊತ್ತಾ?
ರತನ್ ಟಾಟಾ ಅವರಿಗೆ ನಾಯಿಗಳು ಅಂದ್ರೆ ಬಹಳ ಪ್ರೀತಿ. ಬಹಳಷ್ಟು ಶ್ವಾನಗಳನ್ನು ರತನ್ ಟಾಟಾ ಅವರು ಸಾಕಿದ್ದಾರೆ. ಅವುಗಳಲ್ಲಿ ಈ ಗೋವಾ ಕೂಡ ಒಂದು. ಬೀದಿ ನಾಯಿ ಆಗಿದ್ದ ಗೋವಾ ರತನ್ ಟಾಟಾ ಅವರಿಗೆ ಸಿಕ್ಕಿರೋದು ಕೂಡ ಒಂದು ಇಂಟ್ರೆಸ್ಟಿಂಗ್ ಸ್ಟೋರಿ.
ಟಾಟಾ ಕಣ್ಣಿಗೆ ಗೋವಾ ಬಿದ್ದಿದ್ದು ಹೇಗೆ?
ರತನ್ ಟಾಟಾ ಅವರು ಡಾಗ್ ಲವ್ವರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಮುದ್ದಾದ ನಾಯಿಗಳ ಮೇಲೆ ಅತಿಯಾದ ಪ್ರೀತಿಯನ್ನು ರತನ್ ಟಾಟಾ ಬೆಳೆಸಿಕೊಂಡಿದ್ದರು. ಸಾಕು ಪ್ರಾಣಿಗಳ ರಕ್ಷಣೆ ಮತ್ತು ಪೋಷಣೆಗೆ ಸಾಕಷ್ಟು ಶ್ರಮ ಕೂಡ ವಹಿಸಿದ್ದರು.
ಒಂದು ಬಾರಿ ರತನ್ ಟಾಟಾ ಅವರು ಗೋವಾಕ್ಕೆ ಪಿಕ್‌ನಿಕ್‌ಗೆ ತೆರಳಿದ್ದರು. ಅದು ಮಳೆಗಾಲದ ಸಮಯ. ಮಳೆಯಲ್ಲಿ ಬೀದಿ ನಾಯಿಯೊಂದು ಕಾರಿನ ಶೆಲ್ಟರ್‌ನಲ್ಲಿ ಅವಿತು ಕುಳಿತಿತ್ತು. ಅಷ್ಟೇ ಅಲ್ಲದೇ ಆ ನಾಯಿ ರತನ್ ಟಾಟಾ ಅವರನ್ನೇ ಹಿಂಬಾಲಿಸಿಕೊಂಡು ಬಂದಿತ್ತು. ಆಗ ಅದನ್ನ ಮುಂಬೈಗೆ ತೆಗೆದುಕೊಂಡು ಬರಲು ರತನ್ ಟಾಟಾ ನಿರ್ಧರಿಸಿದರು. ಗೋವಾದಲ್ಲಿ ಸಿಕ್ಕಿದ್ದರಿಂದ ಈ ನಾಯಿಗೆ ಗೋವಾ ಎಂದೇ ಹೆಸರಿಟ್ಟಿದ್ದರು.
Ratan Tata’s love for dogs was legendary. His pet (Goa) meeting him for the last time ? #Ratan#RatanTatapic.twitter.com/paX54zihwu
— Prashant Nair (@_prashantnair)
Ratan Tata’s love for dogs was legendary. His pet (Goa) meeting him for the last time 💔 #Ratan#RatanTatapic.twitter.com/paX54zihwu
— Prashant Nair (@_prashantnair) October 10, 2024
">October 10, 2024
ಗೋವಾದಿಂದ ತಂದ ನಾಯಿಯನ್ನು ರತನ್ ಟಾಟಾ ಅವರು ಬಾಂಬೆ ಹೌಸ್‌ನಲ್ಲಿ ಇರಲು ಅವಕಾಶ ಮಾಡಿಕೊಟ್ಟರು. ಈ ಬಾಂಬೆ ಹೌಸ್ ಟಾಟಾ ಗ್ರೂಪ್‌ನ ಹೆಡ್ ಆಫೀಸ್. ಈ ಬಂಗಲೆಯಲ್ಲಿ ಗೋವಾಗೆ ಪ್ರೀತಿಯ ಸ್ವಾಗತ ಸಿಕ್ಕಿತ್ತು. ಕಳೆದ 11 ವರ್ಷದಿಂದ ಗೋವಾ ನಾಯಿ ರತನ್ ಟಾಟಾ ಅವರ ಜೊತೆಗಿತ್ತು. ರತನ್ ಟಾಟಾ ಈ ಗೋವಾ ಅನ್ನು ಬಹಳಷ್ಟು ಪ್ರೀತಿಸುತ್ತಿದ್ದರು ಎಂದು ಗೋವಾ ಶ್ವಾನದ ಪಾಲಕ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ