/newsfirstlive-kannada/media/post_attachments/wp-content/uploads/2024/10/Ratan-Tata-16.jpg)
ರತನ್​ ಟಾಟಾ ಇಲ್ಲ ಎಂಬ ಸಂಗತಿ ದೇಶದ ಜನರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಟಾಟಾ ಸಂಸ್ಥೆಯನ್ನು ಬೆಳೆಸಿ, ಅದೆಷ್ಟೋ ಜನರಿಗೆ ಉದ್ಯೋಗವಕಾಶ ನೀಡಿ, ದೇಶ ಹೆಸರನ್ನು ಉನ್ನತಮಟ್ಟಕ್ಕೇರಿಸಿದ ಈ ವ್ಯಕ್ತಿಯ ಸಾವು ನಂಬಲು ಸಾಧ್ಯವಿಲ್ಲ. ಸದಾ ಅಭಿವೃದ್ಧಿ ಕಡೆಗೆ ಚಿಂತಿಸುತ್ತಿದ್ದ ರತನ್​ ಟಾಟಾ ತನ್ನ ಹಿರಿ ವಯಸ್ಸಿನಲ್ಲೂ ಅಷ್ಟೇ ಭಿನ್ನವಾಗಿ ಕೆಲಸ ಮಾಡುತ್ತಿದ್ದರು. ಆದರೆ ನಿನ್ನೆ ವಿಧಿಯ ಕ್ರೂರ ಲೀಲೆಗೆ ಓಗೊಟ್ಟು ಬದುಕು ಮುಗಿಸಿದ್ದಾರೆ.
ಇದೇ ಸೋಮವಾರದಂದು ರತನ್​ ಟಾಟಾ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಮುಂಬೈ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ರತನ್​ ಟಾಟಾ ಆಸ್ಪತ್ರೆ ಸೇರಿದ ಸಂಗತಿ ಕೇಳಿ ಬಂದಂತೆ ದೇಶವೇ ಗಾಬರಿಯಾಗಿತ್ತು.
ಅನಾರೋಗ್ಯದ ವಿಚಾರ ತಿಳಿದು ಗಾಬರಿಗೆ ಬಿದ್ದದ್ದ ಅಭಿಮಾನಿಗಳಿಗೆ ರತನ್​ ಟಾಟಾ ಟ್ವೀಟ್​​ ಮಾಡಿದ್ದರು. ‘‘ನನ್ನ ಬಗ್ಗೆ ಯೋಚಿಸಿದ್ದಕ್ಕಾಗಿ ಧನ್ಯವಾದಗಳು’’ ಎಂದು ಬರೆದಿದ್ದರು. ಇದುವೇ ಅವರ ಕೊನೆಯ ಸಂದೇಶವಾಗಿದೆ.
ರತನ್​ ಟಾಟಾ ಕೊನೆಯ ಟ್ವೀಟ್​ನಲ್ಲಿ ಏನಿತ್ತು?
‘‘ನನ್ನ ಆರೋಗ್ಯದ ಬಗ್ಗೆ ಹರಡುತ್ತಿರುವ ವದಂತಿಗಳ ಬಗ್ಗೆ ನನಗೆ ತಿಳಿದಿದೆ. ಇದು ಆಧಾರರಹಿತವಾಗಿದೆ ಎಂದು ಎಲ್ಲಿರಿಗೂ ಭರವಸೆ ನೀಡಲು ಬಯಸುತ್ತೇನೆ. ನನ್ನ ವಯಸ್ಸು ಮತ್ತು ಸಂಬಂಧಿತ ವೈದ್ಯಕೀಯ ಪರಿಸ್ಥಿತಿಗೆ ಅನುಗುಣವಾಗಿ ನಾನು ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಿದ್ದೇನೆ. ನಾನು ಉತ್ಸಾಹದಲ್ಲಿದ್ದೇನೆ. ನಾನು ಸಾರ್ವಜನಿಕ ಮತ್ತು ಮಾಧ್ಯಮಗಳು ತಪ್ಪು ಮಾಹಿತಿ ಹರಡದಂತೆ ವಿನಂತಿಸುತ್ತೇನೆ’’ ಎಂದು ಬರೆದುಕೊಂಡಿದ್ದರು.
Thank you for thinking of me ? pic.twitter.com/MICi6zVH99
— Ratan N. Tata (@RNTata2000) October 7, 2024
ಆದರೆ ಬುಧವಾರ ರಾತ್ರಿ ರತನ್​ ನೇವಲ್​ ಟಾಟಾ ಕೊನೆಯುಸಿರೆಳೆದಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ನೆರವೇರಲಿದೆ. ಇಂದು ದಕ್ಷಿಣ ಮುಂಬೈನ ನಾರಿಮನ್ ಪಾಯಿಂಟ್‌ನಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ (NCPA) ತೆಗೆದುಕೊಂಡು ಹೋಗಲಾಗುತ್ತದೆ.
ಬೆಳಿಗ್ಗೆ 10.30 ರಿಂದ ಸಂಜೆ 3.30 ರವರೆಗೆ ರತನ್​ ಟಾಟಾ ಅವರ ಅಂತಿಮ ದರ್ಶನ ಪಡೆಯಲು ಜನರಿಗೆ ವ್ಯವಸ್ಥೆ ಮಾಡಲಾಗಿದೆ. 3.30ರ ಬಳಿಕ ಅವರ ಪಾರ್ಥಿವ ಶರೀರವನ್ನು ಅಂತಿಮ ವಿಧಿವಿಧಾನಗಳಿಗಾಗಿ ವರ್ಲಿ ಚಿತಾಗಾರಕ್ಕೆ ಕೊಂಡೊಯ್ಯಲಾಗುತ್ತದೆ. ಗೃಹ ಸಚಿವ ಅಮಿತ್ ಶಾರವರು ರತನ್ ಟಾಟಾ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us