/newsfirstlive-kannada/media/post_attachments/wp-content/uploads/2024/10/Ratan-Tata.jpg)
ಮಹಾನ್ ಉದ್ಯಮಿ ದಿವಗಂತ ರತನ್ ಟಾಟಾ ಲಕ್ಷ ಕೋಟಿಗಳ ಸಾಮ್ರಾಜ್ಯದ ಅಧಿಪತಿ ಆಗಿದ್ರು. ಮಹಾನ್ ಮಾನವತಾವಾದಿ, ಸಹಜ ಸಮಾಜ ಸೇವಕರಾಗಿ ಹೆಸರು ಗಳಿಸಿದ್ರು. ಟಾಟಾ ಉದ್ಯಮದ ಅಸಲಿ ಉತ್ತರಾಧಿಕಾರಿ ಆಗಿ ದಾಖಲೆ ಬರೆದಿದ್ರು. ಕಾರ್ಪೋರೇಟ್ ಜಗತ್ತಿನಲ್ಲಿ ಗಟ್ಟಿ ಹೆಸರು ಗಿಟ್ಟಿಸಿದ್ರು.
2023ರ ಅಕ್ಟೋಬರ್ 9ರಂದು ರತನ್ ಟಾಟಾ ಅವರು ಅನಾರೋಗ್ಯದಿಂದಾಗಿ ಕೊನೆಯುಸಿರೆಳೆದಿದ್ರು. ಕಣ್ಮುಚ್ಚುವ ಮುನ್ನ ರತನ್ ಟಾಟಾ ತಮ್ಮ ಪಾಲಿನ ₹10 ಸಾವಿರ ಕೋಟಿ ಆಸ್ತಿಯನ್ನು ಹಂಚಿ ವಿಲ್ ಬರೆದಿದ್ರು. ಆ ವಿಲ್ ಬಗ್ಗೆ ಬಹುಪಾಲು ಮಂದಿಗೆ ಕುತೂಹಲವೂ ಇತ್ತು. ಆದ್ರೀಗ ರತನ್ ಟಾಟಾ ಅನ್ನೋ ಕಲಿಯುಗದ ಕರ್ಣನ ವಿಲ್ನಲ್ಲಿ ಯಾರಿಗೆಲ್ಲಾ ಎಷ್ಟು ಹಂಚಿದ್ದಾರೆ ಅನ್ನೋ ಕ್ಲಾರಿಟಿ ಸಿಕ್ಕಿದೆ.
ರತನ್ ಟಾಟಾ ಕುಟುಂಬದ ಸದಸ್ಯ ಹಾಗೂ ಸ್ನೇಹಿತರಿಗೆ ಸಿಂಹಪಾಲು
ತಮ್ಮ ಮಲ ಸೋದರಿಯರಾದ ಶಿರೀನ್ ಜೆಜೀಭೋಯ್, ದಿಯಾನಾ ಜೆಜೀಭೋಯ್ ಹೆಸರಿನ ಮೇಲೆ ₹800 ಕೋಟಿ ಆಸ್ತಿ ಬರೆದಿಟ್ಟಿದ್ದಾರೆ. ಇದರಲ್ಲಿ ಫಿಕ್ಸಡ್ ಡಿಪಾಜಿಟ್, ಷೇರುಗಳೊಂದಿಗೆ ಬೆಲೆಬಾಳುವ ವಾಚುಗಳು, ಪೇಟಿಂಗ್ಸ್ನಂತಹ ವಸ್ತುಗಳಿವೆ. ಇನ್ನು, ತಮ್ಮೊಂದಿಗೆ ಸುದೀರ್ಘ ಸ್ನೇಹಿತರಾಗಿದ್ದ, ಟಾಟಾ ಕಂಪನಿಯ ಉದ್ಯೋಗಿಯೂ ಆಗಿದ್ದ ಮೋಹಿನಿ ಮೋಹನ್ ದತ್ತಾಗೆ ಕೂಡ ₹800 ಕೋಟಿ ಆಸ್ತಿ ಬರೆದಿಟ್ಟಿದ್ದಾರೆ. ರತನ್ ಟಾಟಾ ಅವರಿಗೆ ಸೇರಿದ ಬಂಗಲೆಯೊಂದಿಗೆ ಷೇರುಗಳನ್ನೂ ಒಳಗೊಂಡಂತೆ ಬೆಳ್ಳಿ, ಬಂಗಾರದ ವಸ್ತುಗಳನ್ನ ತಮ್ಮ ಸೋದರ ಜಿಮ್ಮಿ ನಾವಲ್ ಟಾಟಾಗೆ ಹಂಚಿದ್ದಾರೆ. ಅಲಿಬಾಗ್ನ ಬಂಗಲೆ, ಮೂರು ಪಿಸ್ತೂಲ್ಗಳನ್ನ ತಮ್ಮ ಪ್ರಿಯ ಮಿತ್ರ ಮಹಿಲ್ ಮಿಸ್ತ್ರಿ ಹೆಸರಿಗೆ ಬರೆದಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಚಿನ್ನಾಭರಣ ಪ್ರಿಯರಿಗೆ ಬಿಗ್ ಶಾಕ್.. ಮತ್ತೆ ₹2000 ಏರಿಕೆ; ಬಂಗಾರದ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆ!
ಶ್ವಾನ ಪ್ರಿಯ ರತನ್ ಟಾಟಾ ಮೂಕ ಜೀವಿಗಳಿಗೂ ಹಂಚಿದ್ದಾರೆ
ರತನ್ ಟಾಟಾಗೆ ಮೂಕ ಪ್ರಾಣಿಗಳ ಮೇಲೆ ಅತೀವ ಪ್ರೀತಿ ಇತ್ತು. ಇದೇ ಕಾರಣಕ್ಕೇ ಬೀದಿ ನಾಯಿಗಳ ಸಂರಕ್ಷಣೆಗಾಗಿಯೇ ವಿಶೇಷ ಆಸ್ಪತ್ರೆ ಕಟ್ಟಿಸಿದ್ರು. ಹಾಗಾಗಿಯೇ ತಮ್ಮ ವಿಲ್ ಪೇಪರ್ನಲ್ಲಿ ಶ್ವಾನಗಳ ಪಾಲು ಮರೆತಿಲ್ಲ. ಶ್ವಾನಗಳ ಸಂರಕ್ಷಣೆಗಾಗಿ ₹12 ಲಕ್ಷಗಳ ಫಂಡ್ ಮೀಸಲಿಟ್ಟಿದ್ದಾರೆ. ತ್ರೈಮಾಸಿಕವಾಗಿ ₹30 ಸಾವಿರದಂತೆ ಖರ್ಚು ಮಾಡಬೇಕೆಂದು ವಿಲ್ ಬರೆದಿದ್ದಾರೆ ಎನ್ನಲಾಗುತ್ತಿದೆ.
ಯುವ ಮಿತ್ರ ಶಂತನು ನಾಯ್ಡುಗೂ ತಮ್ಮ ಪಾಲು
ರತನ್ ಟಾಟಾರಿಗೆ ಇಳಿ ವಯಸ್ಸಿನಲ್ಲಿ ಸ್ನೇಹಿತರಾಗಿದ್ದ ಶಂತನು ನಾಯ್ಡುಗೂ ವಿಲ್ನಲ್ಲಿ ಪಾಲಿದೆ. ಶಂತನೂ ಓದಲು ನೀಡಿದ್ದ ಸಾಲವನ್ನು ಮನ್ನಾ ಮಾಡಿದ್ದಾರೆ. ಈ ವಿಲ್ ಪತ್ರವನ್ನ ರತನ್ ಟಾಟಾ 2022 ಫೆಬ್ರವರಿ 23ರಂದು ಬರೆಸಿದ್ದರು ಎನ್ನಲಾಗುತ್ತಿದೆ. ಇದನ್ನ ಪರಿಶೀಲಿಸಿ ಆಸ್ತಿಗಳನ್ನು ಹಂಚಬೇಕು ಅಂತ ಇದೀಗ ಬಾಂಬೆ ಹೈಕೋರ್ಟ್ನಲ್ಲಿ ಪಿಟಿಷನ್ ದಾಖಲಾಗಿದೆ. ಈ ಪ್ರಕ್ರಿಯೆ ಪೂರ್ತಿ ಆಗೋ ಹೊತ್ತಿಗೆ ಇನ್ನೂ 6 ತಿಂಗಳು ಉರುಳಬಹುದು ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ