newsfirstkannada.com

×

Ratan Tata: ಸಿನಿಮಾದತ್ತ ಚಿತ್ತ ಹರಿಸಿದ್ದ ರತನ್​ ಟಾಟಾ! ಬಿಗ್​ ಬಜೆಟ್​ ಸಿನಿಮಾ ಮಾಡಿ ಕೋಟಿ ಕೋಟಿ ಲಾಸ್​​

Share :

Published October 10, 2024 at 12:36pm

Update October 10, 2024 at 12:43pm

    ಅಮಿತಾಬ್​ ಬಚ್ಚನ್​ ಸಿನಿಮಾಗೆ ರತನ್​ ಟಾಟಾ ಬಂಡವಾಳ

    ಕೋಟಿ ಕೋಟಿ ಬಂಡವಾಳ.. ಅಂದಿನ ಕಾಲಕ್ಕೆ ದೊಡ್ಡ ಲಾಸ್

    ಸಿನಿಮಾದಲ್ಲಿ ಬಿಪಾಶಾ ಬಸು ಮಾತ್ರವಲ್ಲ ಈ ತಾರೆಯರೂ ಇದ್ರು

ಭಾರತದ ಹಿರಿಯ ಕೈಗಾರಿಕೋದ್ಯಮಿ ರತನ್​ ಟಾಟಾ ನಿಧನರಾಗಿದ್ದಾರೆ. 86ನೇ ವಯಸ್ಸಿನಲ್ಲಿ ಮುಂಬೈನ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ತನ್ನ ಜೀವನದಲ್ಲಿ ಸಾಕಷ್ಟು ಸಾಧನೆ ಮೆರೆದ ದೇಶದ ಅಪ್ರತಿಮ ಐಕಾನ್​​ ಸಿನಿಮಾ ರಂಗಕ್ಕೂ ಕಾಲಿಟ್ಟಿದ್ದರು ಎಂಬುದನ್ನು ನೆನಪಿಸಿಕೊಳ್ಳಬೇಕಿದೆ.

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ‌ನಾಯಕನಾಗಿದ್ದ ಸಿನಿಮಾಗೆ ರತನ್​ ಟಾಟಾ ನಿರ್ಮಾಪಕರಾಗಿದ್ದರು. ‘Atebaar’ ಸಿನಿಮಾಗೆ ಬಂಡವಾಳ ಹೂಡಿದ್ದರು. ಆ ಮೂಲಕ ಸಿನಿಮಾ ರಂಗದಲ್ಲೂ ತಮ್ಮ ಕಾರ್ಯವನ್ನು ಮೆರೆದಿದ್ದರು.

ಇದನ್ನೂ ಓದಿ: Ratan Tata: 2 BHKಯಲ್ಲಿ ವಾಸ, ಮೊಬೈಲ್​ ಬಳಸಲ್ಲ.. ರತನ್​​ ಟಾಟಾರವರ ಕಿರಿಯ ಸಹೋದರನ ಬಗ್ಗೆ ಗೊತ್ತಾ?

ಅಂದಹಾಗೆಯೇ ‘Atebaar’ ಸಿನಿಮಾ 2004ರಲ್ಲಿ ತೆರೆಕಂಡಿತ್ತು. 9.50 ಕೋಟಿ ಬಂಡವಾಳ ಹಾಕಿ ಈ ಸಿನಿಮಾವನ್ನು ಮಾಡಿದ್ದರು. ಆದರೆ ಈ ಸಿನಿಮಾ ನಿರೀಕ್ಷೆಯಷ್ಟು ಗಳಿಕೆ ಮಾಡಿರಲಿಲ್ಲ. ಇದಾದ ಬಳಿಕ ರತನ್​ ಟಾಟಾ ಯಾವ ಚಿತ್ರವನ್ನೂ ನಿರ್ಮಾಣ ಮಾಡಿಲ್ಲ.

‘Atebaar’ ಸಿನಿಮಾಗೆ 9.50 ಕೋಟಿ ಬಂಡವಾಳ ಹಾಕಿದರು ಈ ಸಿನಿಮಾ ಭಾರತದಲ್ಲಿ ಗಳಿಸಿದ್ದು ಕೇವಲ 4.25 ಕೋಟಿ ರೂಪಾಯಿ. ಆದರೆ ವಿಶ್ವಾದ್ಯಂತ ಒಟ್ಟು 7.90 ಕೋಟಿ ಗಳಿಸಿದೆ ಎನ್ನಲಾಗಿದೆ. ಹಾಗಾಗಿ, ಹಾಕಿದ ಬಂಡವಾಳವೂ ರತನ್ ಟಾಟಾಗೆ ಬಂದಿರಲಿಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ: Ratan Tata: ಅಂತಿಮ ದರ್ಶನಕ್ಕೆ ವ್ಯವಸ್ಥೆ.. ಅಂತ್ಯಕ್ರಿಯೆ ನಡೆಸೋದ್ಯಾರು? ಎಲ್ಲಿ ನಡೆಯುತ್ತೆ? ಇಲ್ಲಿದೆ ಮಾಹಿತಿ

ವಿಕ್ರಮ್ ಭಟ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿತ್ತು. ಅಮಿತಾಬ್ ಬಚ್ಚನ್,‌ ಜಾನ್ ಅಬ್ರಾಹಂ, ಬಿಪಾಶಾ ಬಸು ನಟಿಸಿದ್ದರು. ಅಂದಿನ ಕಾಲಕ್ಕೆ ಸಿನಿಮಾಗೆ ಹಾಕಿದ ಬಂಡವಾಳವು ನಷ್ಟದ ದಾರಿ ಹಿಡಿದಿರುವುದು ರತನ್ ಟಾಟಾಗೆ ದೊಡ್ಡ ಹೊಡೆತ ನೀಡಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ratan Tata: ಸಿನಿಮಾದತ್ತ ಚಿತ್ತ ಹರಿಸಿದ್ದ ರತನ್​ ಟಾಟಾ! ಬಿಗ್​ ಬಜೆಟ್​ ಸಿನಿಮಾ ಮಾಡಿ ಕೋಟಿ ಕೋಟಿ ಲಾಸ್​​

https://newsfirstlive.com/wp-content/uploads/2024/10/Ratan-Tata-17.jpg

Load More