ರತನ್ ಟಾಟಾ 86ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ
ರತನ್ ಟಾಟಾ ನಿಧನಕ್ಕೆ ದೇಶದ ಗಣ್ಯರಿಂದ ಕಂಬನಿ
ರತನ್ ಟಾಟಾರ ಕನಸಿನ ಪ್ಲಾನ್ ಏನಾಗಿತ್ತು..?
ರತನ್ ಟಾಟಾ ತಮ್ಮ 86 ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದ್ದಾರೆ. ಅವರ ನಿಧನದ ಸುದ್ದಿ ತಿಳಿದು ಇಡೀ ದೇಶ ಶೋಕಸಾಗರದಲ್ಲಿ ಮುಳುಗಿದೆ. ಕೋಟ್ಯಾಧಿಪತಿ ಆಗಿದ್ದರೂ ರತನ್ ಟಾಟಾ ದೇಶದ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಜನರ ಬಗ್ಗೆ ಯೋಚನೆ ಮಾಡ್ತಿದ್ದರು.
ಎಂಥ ಐಡಿಯಾ..?
ಅದರಂತೆ ಅವರು ಹಿಂದೊಮ್ಮೆ ಮಧ್ಯಮ ವರ್ಗದ ಜನರಿಗೆ ವಿಶ್ವದ ಅತ್ಯಂತ ಅಗ್ಗದ ಕಾರು ನೀಡಬೇಕು ಅನ್ನೋ ಕನಸು ಕಂಡಿದ್ದರು. ಆದರೆ ಅದು ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿ ಆಗಲಿಲ್ಲ. ಅದು ಬೇರೆ ಮಾತು. ಟಾಟಾ ನ್ಯಾನೋ ಕಾರಿನ ಚಿಂತನೆ ಮತ್ತು ಅದರ ಸೃಷ್ಟಿಯ ಕಥೆಯು ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಅನೇಕ ಕಾರು ಕಂಪನಿಗಳು ತಮ್ಮ ಕಾರುಗಳಿಂದ ಹಣ ಗಳಿಸುವ ಬಗ್ಗೆ ಯೋಚಿಸಿದರೆ, ಟಾಟಾ ಮಾತ್ರ ಮಧ್ಯಮ ವರ್ಗದ ಅಸಹಾಯಕತೆಗೆ ಹೆಗಲಾಗಲು ನಿರ್ಧರಿಸಿದ್ದರು. ಪ್ರತಿಯೊಬ್ಬ ವ್ಯಕ್ತಿಯು ಕಾರು ಹೊಂದಬೇಕೆಂದು ಕನಸು ಕಾಣುತ್ತಾರೆ. ಕಾರಿಗೆ ಹೆಚ್ಚು ಬಜೆಟ್ ಇರೋದ್ರಿಂದ ಸಾಮಾನ್ಯ ಜನರ ಕೈಗೆಟುಕಲ್ಲ. ರತನ್ ಟಾಟಾ ಈ ಸಮಸ್ಯೆಗೆ ಪರಿಹಾರ ಕೊಟ್ಟಿದ್ದಾರೆ. ಅದುವೇ ನ್ಯಾನೋ ಕಾರು!
ಇದನ್ನೂ ಓದಿ:ಉಪ್ಪು, ಕಾರು ತಯಾರಿಕೆಯಿಂದ ಸಾಫ್ಟ್‌ವೇರ್‌ವರೆಗೆ.. ದಿಗ್ಗಜ ರತನ್ ಟಾಟಾರ ಅಸಾಧಾರಣ ಪಯಣ ಹೇಗಿತ್ತು..?
ಸಂದರ್ಶನ ಒಂದರಲ್ಲಿ ಅವರೇ ಹೇಳಿರುವಂತೆ.. ಕೆಲವು ಕುಟುಂಬಗಳು ಸ್ಕೂಟರ್ನಲ್ಲಿ ಹೋಗುವುದನ್ನು ನೋಡಿದ್ದೇನೆ. ಹೆಂಡತಿ, ಇಬ್ಬರು ಮಕ್ಕಳು ತುಂಬಾ ಕಷ್ಟಪಟ್ಟು ಸ್ಕೂಟರ್ನಲ್ಲಿ ಹೋಗ್ತಿದ್ದರು. ಸ್ಕೂಟರ್ ಮೇಲೆ ಕೂರುವುದು ಕಷ್ಟದ ಕೆಲಸ. ಅದರಲ್ಲೂ ಮಕ್ಕಳು ದೊಡ್ಡವರಾದರೆ ಪ್ರಯಾಣ ಇನ್ನಷ್ಟು ಕಷ್ಟ. ಇಂಥ ದೃಶ್ಯವನ್ನು ನೋಡಿದ ಮೇಲೆಯೇ ನನಗೆ ನ್ಯಾನೋ ಕಾರಿನ ಕಲ್ಪನೆ ಬಂದಿದ್ದು. ಸ್ಕೂಟರ್ನಲ್ಲಿ ಓಡಾಡುವ ಕುಟುಂಬದ ಸ್ಥಿತಿ ನೋಡಿ ನನಗೆ ಬೇಸರವಾಯಿತು. ಅವರಿ ಒಂದು ಚಿಕ್ಕದಾದ ಕಾರಿದ್ದರೆ ಹೇಗೆ ಎಂಬ ಪ್ರಶ್ನೆ ಮೂಡಿತು. ಆಸನಗಳ ಮೇಲೆ ಆರಾಮಾಗಿ ಕೂತು ಕಾರಿನಲ್ಲಿ ಹೋಗುತ್ತಿದ್ದರು. ಆಗ ಅವರು ಧೂಳು, ಮಳೆಯ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ ಅಂದ್ಕೊಂಡೆ ಎಂದಿದ್ದರು.
ಇದನ್ನೂ ಓದಿ:ರತನ್ ಟಾಟಾ ಬ್ರಹ್ಮಚಾರಿ.. TATA ಸನ್ಸ್ ಸಾಮ್ರಾಜ್ಯದ ಮುಂದಿನ ಉತ್ತರಾಧಿಕಾರಿ ಯಾರು..?
ಕಾರುಗಳ ಲೋಕದಲ್ಲಿ ಒಂದು ಅದ್ಭುತ ಆವಿಷ್ಕಾರ ನ್ಯಾನೋ ಕಾರು. ಪ್ರತಿ ಮನೆಗೆ ಒಂದು ಲಕ್ಷ ರೂಪಾಯಿಗೆ ಕಾರು ನೀಡುವುದಾಗಿ ಭರವಸೆ ನೀಡಿದ್ದರು. ಈ ನಿರ್ಧಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಬೈಕಿನ ಬೆಲೆಗೆ ಕಾರು ಸಿಗುತ್ತದೆ ಎಂದರೆ ಎಷ್ಟು ಸಾಹಸ? ಅದೇ ಟಾಟಾ ಪರಿಚಯಿಸಿದ ‘ಟಾಟಾ ನ್ಯಾನೋ’ ಕಾರು! ಪ್ರತಿ ಮನೆಗೆ ಕಾರನ್ನು ಒದಗಿಸುವ ಅದ್ಭುತ ಕನಸನ್ನು ನನಸಾಗಿಸಲು ಟಾಟಾ ಗ್ರೂಪ್ ಭಾರೀ ನಷ್ಟ ಅನುಭವಿಸಿತು. ಆದರೆ ಭರವಸೆ ನೀಡಿದಂತೆ ರತನ್ ಟಾಟಾ ನ್ಯಾನೋ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದರು. ಟಾಟಾ ನ್ಯಾನೋ ಕಾರಿನ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. 2008ರಲ್ಲಿ ಒಂದು ಲಕ್ಷ ರೂಪಾಯಿಗೆ ಕಾರು ಲಭ್ಯವಾಗುವಂತೆ ಮಾಡಿರೋದು ಭಾರೀ ಸಂಚಲನ ಸೃಷ್ಟಿಸಿತ್ತು. ಇದು ವಿಶ್ವದ ಅತ್ಯಂತ ಅಗ್ಗದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಯ್ತು. ನ್ಯಾನೋ ರತನ್ ಟಾಟಾ ಅವರ ಕನಸಿನ ಕಾರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ