Ratan Tata: ಬಾಲ್ಯ, ಬದುಕು, ಸಾಧನೆ, ಪ್ರೀತಿ.. ಮರೆಯಾದ ಮಾಣಿಕ್ಯನ ಫೋಟೋಗಳು ಇಲ್ಲಿವೆ

author-image
AS Harshith
Updated On
Ratan Tata: ಬಾಲ್ಯ, ಬದುಕು, ಸಾಧನೆ, ಪ್ರೀತಿ.. ಮರೆಯಾದ ಮಾಣಿಕ್ಯನ ಫೋಟೋಗಳು ಇಲ್ಲಿವೆ
Advertisment
  • 1998 ರಲ್ಲಿ ಟಾಟಾ ಇಂಡಿಕಾ ಕಾರನ್ನು ಭಾರತಕ್ಕೆ ಪರಿಚಯಿಸಿದರು
  • ಮಧ್ಯಮ ವರ್ಗಕ್ಕೆಂದೇ ಟಾಟಾ ನ್ಯಾನೋ ಪರಿಚಯಿಸಿದ ಪುಣ್ಯಾತ್ಮ
  • ಇವರ ಸಾಧನೆಗೆ ಪದ್ಮಭೂಷಣ, ಪದ್ಮ ವಿಭೂಷಣವನ್ನು ಭಾರತ ಸರ್ಕಾರ ನೀಡಿದೆ

[caption id="attachment_90877" align="alignnone" width="800"]publive-image 1937 ಡಿಸೆಂಬರ್​ 28 ರಂದು ಮುಂಬೈನಲ್ಲಿ ನೇವಲ್ ಟಾಟಾ ಮತ್ತು ಶ್ರೀಮತಿ ಸೂನಿ ಟಾಟಾರವರ ಪುತ್ರನಾಗಿ ರತನ್ ನಾವೆಲ್ ಟಾಟಾ ಜನಿಸಿದ್ರು. ವಿಪರ್ಯಾಸ ಅಂದ್ರೆ, ಚಿಕ್ಕ ವಯಸ್ಸಲ್ಲೇ ರತನ್ ಟಾಟಾ ಪೋಷಕರು ದೂರವಾದ್ರು. ತನ್ನ ಅಜ್ಜಿ ರತಂಜಿ ಟಾಟಾ ಜೊತೆಯೇ ರತನ್ ಟಾಟಾ ಬಾಲ್ಯ ಕಳೆಯುಂವತಾಯ್ತು.

[/caption]

[caption id="attachment_90878" align="alignnone" width="800"]publive-image ಮುಂಬೈನಲ್ಲೇ ಕಾಲೇಜು ಶಿಕ್ಷಣ ಪಡೆದಿದ್ದ ರತನ್ ಟಾಟಾ ಅಮೆರಿಕಾದ ಕಾರ್ನೆಲ್ ಯೂನಿವರ್ಸಿಟಿಯ ಕಾಲೇಜ್ ಆಫ್ ಆರ್ಕಿಟೆಕ್ಚರ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1961ರಲ್ಲಿ ತಮ್ಮ ಮುತ್ತಜ್ಜ ಸ್ಥಾಪಿಸಿದ್ದ ಟಾಟಾ ಗ್ರೂಪ್‌ನಲ್ಲಿ ವೃತ್ತಿ ಜೀವನ ಆರಂಭಿಸಿದ್ರು.[/caption]

[caption id="attachment_90905" align="alignnone" width="800"]publive-image ಮೊದಮೊದಲು ಟಾಟಾ ಸಂಸ್ಥೆಗೆ ಸೇರಿದಾಗ ಟಾಟಾ ಸ್ಟೀಲ್​ನ ಅಂಗಡಿಯಲ್ಲಿ ಕೆಲಸ ಮಾಡ್ತಿದ್ರು. 1962ರಲ್ಲಿ ಸಹಾಯಕರಾಗಿ ನೇಮಕವಾದ ರತನ್ ಟಾಟಾರಿಗೆ 1971ರಲ್ಲಿ ನಿರ್ದೇಶಕರ ಬಿರುದನ್ನ ನೀಡಲಾಗುತ್ತೆ.[/caption]

[caption id="attachment_90904" align="alignnone" width="800"]publive-image ಬರೋಬ್ಬರಿ 21ವರ್ಷಗಳ ಟಾಟಾ ಗ್ರೂಪ್​ನ ಮುನ್ನಡೆಸಿದ್ದ ರತನ್ ಟಾಟಾ, ಸಂಸ್ಥೆಯ 40 ಪಟ್ಟು ಲಾಭವನ್ನ 50 ಮಟ್ಟಕ್ಕೆ ಏರಿಕೆ ಮಾಡಿದ್ರು.[/caption]

[caption id="attachment_90879" align="alignnone" width="800"]publive-image ರತನ್ ಟಾಟಾ ಅಧಿಕಾರವಧಿಯ ಕೊನೆಯಲ್ಲಿ ಟಾಟಾ ಟೀ ಟೆಟ್ಲಿ ಹಾಗೂ ಟಾಟಾ ಮೋಟಾರ್ ಜಾಗ್ವಾರ್, ಲ್ಯಾಂಡ್ ರೋವರ್​ ಹಾಗೂ ಟಾಟಾ ಸ್ಟೀಲ್ ಕೋರಸ್​ ಹೀಗೆ ಹತ್ತು ಹಲವು ಸಂಸ್ಥೆಗಳನ್ನ ಸ್ವಾಧೀನ ಪಡೆಸಿಕೊಂಡಿದ್ರು.[/caption]

[caption id="attachment_90906" align="alignnone" width="800"]publive-image ಮುಖ್ಯವಾಗಿ ಇಡೀ ವಿಶ್ವದಲ್ಲೇ ಮಧ್ಯಮ ವರ್ಗಕ್ಕೆ ಅತೀ ಕಡಿಮೆ ದರಕ್ಕೆ ಟಾಟಾ ನ್ಯಾನೋ ಕಾರನ್ನ ಮಾರುಕಟ್ಟೆಗೆ ಪರಿಚಯಿಸಿದ ಕೀರ್ತಿ ಟಾಟಾರವರದ್ದು.[/caption]

[caption id="attachment_90907" align="alignnone" width="800"]publive-image 1998 ರಲ್ಲಿ ಟಾಟಾ ಮೋಟಾರ್ಸ್ ಕಂಪನಿ ಕಡೆಯಿಂದ ಟಾಟಾ ಇಂಡಿಕಾ ಕಾರನ್ನು ರತನ್​ ಟಾಟಾ ಬಿಡುಗಡೆ ಮಾಡಿದರು. ಡೀಸೆಲ್ ಎಂಜಿನ್ ಹೊಂದಿರುವ ಮೊದಲ ಭಾರತೀಯ ಹ್ಯಾಚ್‌ಬ್ಯಾಕ್ ಇದಾಗಿತ್ತು. 2004 ರ ಅಂತ್ಯದಿಂದ ಯುರೋಪಿಯನ್ ಮತ್ತು ಆಫ್ರಿಕನ್ ದೇಶಗಳಿಗೆ ರಫ್ತು ಮಾಡಲಾಯಿತು. 2018 ಏಪ್ರಿಲ್ ತಿಂಗಳಿನಲ್ಲಿ ಈ ಕಾರಿನ ಉತ್ಪಾದನೆ ನಿಲ್ಲಿಸಲಾಯಿತು.[/caption]

[caption id="attachment_90880" align="alignnone" width="800"]publive-image ರತನ್​ ಟಾಟಾ ಉಸಿರು ನಿಲ್ಲಿಸುವವರೆಯೂ ಬ್ರಹ್ಮಚಾರಿಯಾಗಿಯೇ ಇದ್ದರು. ಆದರೆ ಯವ್ವನದಲ್ಲಿ ಒಬ್ಬಾಕೆಯನ್ನು ಪ್ರೀತಿಸುವ ಬಗ್ಗೆ ಹೇಳಿಕೊಂಡಿದ್ದರು. ಆದರೆ ಇಂಡಿಯಾ-ಚೀನಾ ಯುಧ್ಧದ ಕಾರಣ ಇಬ್ಬರ ಪ್ರೀತಿ ದೂರವಾಯ್ತು.[/caption]

[caption id="attachment_90896" align="alignnone" width="800"]publive-image ರತನ್​ ಟಾಟಾ ಭಾರತದಲ್ಲಿ ಸಿಮಿ ಗೆರೆವಾಲ್​ ಎಂಬವರ ಜೊತೆ ಡೇಟಿಂಗ್​ ನಡೆಸುತ್ತಿದ್ದರು. ಈ ಬಗ್ಗೆ ಸಿಮಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಮದುವೆಯಾಗಲು ಹಲವು ಬಾರಿ ಬಯಸಿದ್ದರು ಅದು ಸಾಧ್ಯವಾಗಿಲ್ಲ ಎಂದು ಹೇಳಿದ್ದರು. ಆದರೀಗ ಪ್ರೀತಿ ಗೆಳೆಯನ ಸಾವಿಗೆ ಭಾವುಕ ವಿದಾಯ ವ್ಯಕ್ತಪಡಿಸಿದ್ದಾರೆ.[/caption]

[caption id="attachment_90908" align="alignnone" width="800"]publive-image ರತನ್ ಟಾಟಾರ ಉದ್ಯಮ ಸಾಧನೆ, ಸೇವಾ ಕಾರ್ಯಕ್ಕೆ ಮೆಚ್ಚಿ ಕೇಂದ್ರ ಸರ್ಕಾರವು ಪದ್ಮಭೂಷಣ, ಪದ್ಮ ವಿಭೂಷಣ ನೀಡಿ ಗೌರವಿಸಿದೆ.[/caption]

Advertisment