Advertisment

ಉಪ್ಪು, ಕಾರು ತಯಾರಿಕೆಯಿಂದ ಸಾಫ್ಟ್‌ವೇರ್‌ವರೆಗೆ.. ದಿಗ್ಗಜ ರತನ್ ಟಾಟಾರ ಅಸಾಧಾರಣ ಪಯಣ ಹೇಗಿತ್ತು..?

author-image
Ganesh
Updated On
ಉಪ್ಪು, ಕಾರು ತಯಾರಿಕೆಯಿಂದ ಸಾಫ್ಟ್‌ವೇರ್‌ವರೆಗೆ.. ದಿಗ್ಗಜ ರತನ್ ಟಾಟಾರ ಅಸಾಧಾರಣ ಪಯಣ ಹೇಗಿತ್ತು..?
Advertisment
  • ವ್ಯಾಪಾರದ ಅಭಿವೃದ್ಧಿಯಲ್ಲಿ ಪ್ರೀತಿಯನ್ನು ತೋರಿಸಿದರು
  • ಪ್ರತಿಯೊಬ್ಬ ನಾಗರಿಕರು ಗೌರವಿಸುವ ಜನರಲ್ಲಿ ಒಬ್ಬರು
  • ರತನ್ ಟಾಟಾರ ರೋಚಕ ಬದುಕು ಹೇಗಿತ್ತು ಗೊತ್ತಾ?

ರತನ್ ಟಾಟಾ ಎಂಬ ಹೆಸರಿನ ವ್ಯಕ್ತಿತ್ವ ಪದಗಳನ್ನು ಮೀರಿದ್ದು. ಅವರ ವ್ಯಕ್ತಿತ್ವಕ್ಕೆ ಅಷ್ಟು ಘನತೆ, ಗೌರವ ಇದೆ. ದೇಶದ ಪ್ರತಿಯೊಬ್ಬ ನಾಗರಿಕರು ಪ್ರಾಮಾಣಿಕವಾಗಿ ಗೌರವಿಸುವ ಜನರಲ್ಲಿ ಒಬ್ಬರು. ತುಂಬಾ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ರತನ್ ಟಾಟಾ, ನಿನ್ನೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Advertisment

ರತನ್ ಟಾಟಾ ಅವರು.. ಮಾರ್ಚ್ 1991ರಿಂದ ಡಿಸೆಂಬರ್ 2012ರವರೆಗೆ ಟಾಟಾ ಸನ್ಸ್ ಅಧ್ಯಕ್ಷರಾಗಿ ಟಾಟಾ ಗ್ರೂಪನ್ನು ಮುನ್ನಡೆಸಿದರು. ವಿದೇಶದಲ್ಲಿ ವ್ಯಾಸಂಗ ಮುಗಿಸಿದ ರತನ್, ಟಾಟಾ ಗ್ರೂಪ್ ಕಂಪನಿಯ ಟಾಟಾ ಇಂಡಸ್ಟ್ರೀಸ್​ನಲ್ಲಿ ಸಹಾಯಕರಾಗಿ ಸೇರಿಕೊಂಡರು. ನಂತರ ಜಮ್ಶೆಡ್​ಪುರದ ಟಾಟಾ ಪ್ಲಾಂಟ್​ನಲ್ಲಿ ಕೆಲವು ತಿಂಗಳು ತರಬೇತಿ ಪಡೆದರು. ತರಬೇತಿ ಮುಗಿಸಿದ ನಂತರ ಕರ್ತವ್ಯಕ್ಕೆ ಹಾಜರಾದರು. ಮುಂದೊಂದು ದಿನ ವ್ಯಾಪಾರದಲ್ಲಿ ಅಸಮಾನ್ಯ ಸಾಹಸಗಳನ್ನು ಮೆರೆದು ದೊಡ್ಡ ಹೆಸರು ಮಾಡಿದರು.

ಇದನ್ನೂ ಓದಿ:ರತನ್ ಟಾಟಾ ಬ್ರಹ್ಮಚಾರಿ.. TATA ಸನ್ಸ್​ ಸಾಮ್ರಾಜ್ಯದ ಮುಂದಿನ ಉತ್ತರಾಧಿಕಾರಿ ಯಾರು..?

publive-image

ಉಪ್ಪಿನಿಂದ ವಿಮಾನಕ್ಕೆ ಪ್ರಯಾಣ
ರತನ್ ಟಾಟಾ ತಮ್ಮ ವ್ಯಾಪಾರ ಸಾಮ್ರಾಜ್ಯವನ್ನು ಅಡುಗೆಮನೆಯಲ್ಲಿ ಬಳಸುವ ಉಪ್ಪಿನಿಂದ ಆಕಾಶದಲ್ಲಿ ಹಾರುವ ವಿಮಾನಗಳವರೆಗೆ ವಿಸ್ತರಿಸಿದ್ದಾರೆ. ವ್ಯಾಪಾರ ಕ್ಷೇತ್ರದಲ್ಲಿ ಹೊಸ ದಾಖಲೆಗಳನ್ನು ಮಾಡುವ ಮೂಲಕ ಟಾಟಾ ಸಮೂಹವನ್ನು ಎತ್ತರಕ್ಕೆ ಕೊಂಡೊಯ್ದ ಕೀರ್ತಿ ಅವರದ್ದಾಗಿದೆ.

Advertisment

ಟಾಟಾ ಅಯೋಡಿನ್ ಉಪ್ಪು..!
ದೇಶದಲ್ಲಿ ಮೊದಲ ಬಾರಿಗೆ ಅಯೋಡಿಕರಿಸಿದ ಉಪ್ಪಿನ ಪ್ಯಾಕೆಟ್‌ಗಳನ್ನು ಮಾರಲು ಪ್ರಾರಂಭಿಸಿದ್ದೇ ಟಾಟಾ ಗ್ರೂಪ್. 1983ರಲ್ಲಿ ಉತ್ಪಾದನೆ ಆರಂಭಿಸಿದ ಈ ಉಪ್ಪನ್ನು ಇಂದು ಮನೆ ಮನೆಗಳಲ್ಲಿ ಬಳಸಲಾಗುತ್ತಿದೆ. ಟಾಟಾ ಕಂಪನಿಯು 1998ರಲ್ಲಿ ಭಾರತದ ಮೊದಲ ಸ್ವದೇಶಿ SUV ಟಾಟಾ ಸಫಾರಿ ಬಿಡುಗಡೆ ಮಾಡಿತು. 2013ರಲ್ಲಿ ಮೊದಲ ಹೈಡ್ರೋಜನ್ ಬಸ್ ಪ್ರಾರಂಭಿಸಿತು. 2018 ರಲ್ಲಿ ಟಾಟಾ ನೆಕ್ಸನ್ 5 ಸ್ಟಾರ್ ಮಾರುಕಟ್ಟೆಗೆ ಬಂತು. 2021ರಲ್ಲಿ ದೇಶದ ಮೊದಲ ಸ್ಲಿಮ್ ಮೆಕ್ಯಾನಿಕಲ್ ವಾಚ್ ತಯಾರಿಸಿತು.

ಇದನ್ನೂ ಓದಿ:Ratan Tata: 1962ರಲ್ಲಿ ಯುದ್ಧ ನಡೆಯದಿದ್ದರೆ ರತನ್ ಟಾಟಾ ಮದುವೆಯಾಗಿರುತ್ತಿದ್ದರು..

ನ್ಯಾನೋ ಕಾರು
ಪ್ರತಿಯೊಬ್ಬ ವ್ಯಕ್ತಿಯು ಕಾರು ಹೊಂದಬೇಕೆಂದು ಕನಸು ಕಾಣುತ್ತಾನೆ. ಕಾರಿಗೆ ಹೆಚ್ಚು ಬಜೆಟ್ ಇರೋದ್ರಿಂದ ಸಾಮಾನ್ಯ ಜನರ ಕೈಗೆ ಎಟುಕಲ್ಲ. ರತನ್ ಟಾಟಾ ಈ ಸಮಸ್ಯೆಗೆ ಪರಿಹಾರ ಕೊಟ್ಟಿದ್ದಾರೆ. ಅದುವೇ ನ್ಯಾನೋ ಕಾರು! ಇದು ಕಾರುಗಳ ಲೋಕದಲ್ಲಿ ಒಂದು ಅದ್ಭುತ ಆವಿಷ್ಕಾರ. ಪ್ರತಿ ಮನೆಗೆ ಒಂದು ಲಕ್ಷ ರೂಪಾಯಿಗೆ ಕಾರು ನೀಡುವುದಾಗಿ ಭರವಸೆ ನೀಡಿದ್ದರು. ಈ ನಿರ್ಧಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಬೈಕಿನ ಬೆಲೆಗೆ ಕಾರು ಸಿಗುತ್ತದೆ ಎಂದರೆ ಎಷ್ಟು ಸಾಹಸ? ಅದೇ ಟಾಟಾ ಪರಿಚಯಿಸಿದ ‘ಟಾಟಾ ನ್ಯಾನೋ’ ಕಾರು!

Advertisment

publive-image

ಪ್ರತಿ ಮನೆಗೆ ಕಾರನ್ನು ಒದಗಿಸುವ ಅದ್ಭುತ ಕನಸನ್ನು ನನಸಾಗಿಸಲು ಟಾಟಾ ಗ್ರೂಪ್​​ ಭಾರೀ ನಷ್ಟ ಅನುಭವಿಸಿತು. ಆದರೆ ಭರವಸೆ ನೀಡಿದಂತೆ ರತನ್ ಟಾಟಾ ನ್ಯಾನೋ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಟಾಟಾ ನ್ಯಾನೋ ಕಾರಿನ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. 2008ರಲ್ಲಿ ಒಂದು ಲಕ್ಷ ರೂಪಾಯಿಗೆ ಕಾರು ಲಭ್ಯವಾಗುವಂತೆ ಮಾಡಿರೋದು ಭಾರೀ ಸಂಚಲನ ಸೃಷ್ಟಿಸಿತ್ತು. ಇದು ವಿಶ್ವದ ಅತ್ಯಂತ ಅಗ್ಗದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಯ್ತು. ನ್ಯಾನೋ ರತನ್ ಟಾಟಾ ಅವರ ಕನಸಿನ ಕಾರು.

ಜಾಗತಿಕ ಕಂಪನಿಯಾಗಿ ಬದಲಾವಣೆ..
1868ರಲ್ಲಿ ಸಣ್ಣ ಜವಳಿ ಮತ್ತು ವ್ಯಾಪಾರ ಕಂಪನಿಯಾಗಿ ಪ್ರಾರಂಭವಾದ ಟಾಟಾ ಗ್ರೂಪ್.. ಉಪ್ಪು, ಉಕ್ಕು ಮತ್ತು ಕಾರು ತಯಾರಿಕೆಯಲ್ಲಿ ವಿಸ್ತರಿಸಿಕೊಂಡಿತು. ಮಾತ್ರವಲ್ಲ ಟಾಟಾ ಸಾಫ್ಟ್‌ವೇರ್, ಪವರ್ ಪ್ಲಾಂಟ್‌ಗಳು ಮತ್ತು ಏರ್‌ಲೈನ್‌ಗಳಲ್ಲಿ ವಿಶ್ವದ ಅಗ್ರಗಣ್ಯರಾದರು. ಈ ಅವಧಿಯಲ್ಲಿಯೇ ಟಾಟಾ ಗ್ರೂಪ್ ರತನ್ ಟಾಟಾ ನೇತೃತ್ವದಲ್ಲಿ ಅನೇಕ ಇತಿಹಾಸಗಳನ್ನು ಸೃಷ್ಟಿಸಿತು. ಈ ಟಾಟಾ ಸಮೂಹದ ಆದಾಯ ಮತ್ತು ಲಾಭಗಳು ಹೊಸ ಎತ್ತರಕ್ಕೆ ಕೊಂಡೊಯ್ದವು.

ಇದನ್ನೂ ಓದಿ:ರತನ್ ಟಾಟಾಗೆ ಅಂದು ಆಗಿತ್ತು ದೊಡ್ಡ ಅವಮಾನ.. 9 ವರ್ಷಗಳ ನಂತರ ರೋಚಕವಾಗಿ ಸೇಡು ತೀರಿಸಿಕೊಂಡಿದ್ದರು..

Advertisment

publive-image

ರತನ್ ಟಾಟಾ ಭಾರತೀಯ ವ್ಯಾಪಾರದ ಜಗತ್ತಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ದೇಶದ ಪ್ರತಿಯೊಬ್ಬ ನಾಗರಿಕರು ಪ್ರಾಮಾಣಿಕವಾಗಿ ಗೌರವಿಸುವ ಜನರಲ್ಲಿ ಒಬ್ಬರು. ಕೋಟ್ಯಾಧಿಪತಿಗಳ ಸಾಲಿಗೆ ಸೇರಿದರೂ ತಮ್ಮ ಸರಳತೆಯಿಂದಲೇ ಎಲ್ಲರ ಪ್ರೀತಿಗೆ ಪಾತ್ರರಾದರು. ಬಿಲಿಯನೇರ್ ಆಗಿದ್ದರೂ ರತನ್ ಟಾಟಾ ಜೀವನದುದ್ದಕ್ಕೂ ಬ್ರಹ್ಮಚಾರಿಯಾಗಿ ಉಳಿದರು. ವ್ಯಾಪಾರದ ಅಭಿವೃದ್ಧಿಯಲ್ಲಿ ತಮ್ಮ ಪ್ರೀತಿಯನ್ನು ತೋರಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment