newsfirstkannada.com

ಟಾಟಾ ಮೋಟಾರ್ಸ್​ಗೆ ಬೆದರಿಕೆ ಹಾಕಿದ್ದ ಗ್ಯಾಂಗ್​ಸ್ಟರ್​.. ಹಳೆಯ ವಿಡಿಯೋದಲ್ಲಿ ರತನ್​ ಟಾಟಾ ಹೇಳಿದ್ದೇನು?

Share :

22-08-2023

    1980 ರಲ್ಲಿ ಟಾಟಾದ ಅಧ್ಯಕ್ಷರಾಗಿದ್ದ ರತನ್​ ಟಾಟಾ..!

    ಭಾರೀ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟಿದ್ದ ಗ್ಯಾಂಗ್​ಸ್ಟರ್

    ಅಧ್ಯಕ್ಷರಾದ 15 ದಿನದಲ್ಲೇ ಅದೊಂದು ಬೆದರಿಕೆ ಕರೆ

ಪ್ರಸಿದ್ಧ ಟಾಟಾ ಮೋಟಾರ್ಸ್​ ಕಂಪನಿಯನ್ನು ಟಾರ್ಗೆಟ್ ಮಾಡಿ ಗ್ಯಾಂಗ್​ಸ್ಟರ್​ ಹಣಕ್ಕಾಗಿ ಬೇಡಿಕೆ ಇಟ್ಟಿದ್ದನು ಎಂದು ಭಾರತದ ಖ್ಯಾತ ಉದ್ಯಮಿ ಹಾಗೂ ಟಾಟಾ ಸನ್ಸ್‌ ಕಂಪನಿಯ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು ಈ ಹಿಂದೆ ಹೇಳಿದ್ದ ವಿಡಿಯೋ ಮತ್ತೆ ವೈರಲ್ ಆಗಿದೆ.

ಸದ್ಯ ವೀಡಿಯೋವನ್ನು ಕೊಲಂಬಿಯಾ ಬ್ಯುಸಿನೆಸ್ ಸ್ಕೂಲ್​ ಎನ್ನುವ ಯೂಟ್ಯೂಬ್​ ಚಾನೆಲ್​ನಲ್ಲಿ ಶೇರ್​ ಮಾಡಲಾಗಿದೆ. ಭಾರತದ ಹಿರಿಯ ಉದ್ಯಮಿ ರತನ್​ ಟಾಟಾ ಅವರು, 1980 ರಲ್ಲಿ ಟಾಟಾ ಕಂಪನಿಯ ಅಧ್ಯಕ್ಷರಾಗಿದ್ದ ವೇಳೆ ಗ್ಯಾಂಗ್​ಸ್ಟರ್​ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಲು ಯತ್ನಿಸಿದ್ದನು ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ರತನ್ ಟಾಟಾ

ನಾನು ಟಾಟಾ ಕಂಪನಿಯ ಅಧ್ಯಕ್ಷನಾಗಿ 15 ದಿನಗಳು ಕಳೆದಿದ್ದವು. ಆಗ ಹೊರಗಿನಿಂದ ಗ್ಯಾಂಗ್​ಸ್ಟರ್, ಅಪಾರ ಪ್ರಮಾಣದ ಹಣಕ್ಕೆ ಬೇಡಿಕೆ ಹಾಗೂ ಕಂಪನಿಯ ನಿಯಂತ್ರಣ ತೆಗೆದುಕೊಳ್ಳಲು ಮುಂದಾಗಿ 200 ಜನರಿಂದ ಹಿಂಸಾತ್ಮಕ ಘಟನೆ ಸೃಷ್ಟಿ ಮಾಡುವ ಯೋಚನೆಯಲ್ಲಿದ್ದನು. ಇದರಿಂದ ಸುಮಾರು 4000 ಕಂಪನಿಯ ಉದ್ಯೋಗಿಗಳು ಕೆಲಸದ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದರು. ಆಗ ಕಂಪನಿಯ ಮ್ಯಾನೇಜ್​ಮೆಂಟ್ ಉದ್ಯೋಗಿಗಳನ್ನು ಲಘುವಾಗಿ ಪರಿಗಣಿಸಿತ್ತು. ಇದು ನಮ್ಮ ದೊಡ್ಡ ಮಿಸ್ಟೇಕ್ ಆಗಿತ್ತು ಎಂದು ಹೇಳಿದ್ದಾರೆ.

ವಿಡಿಯೋದಲ್ಲಿ ರತನ್​ ಟಾಟಾ ಗ್ಯಾಂಗ್​ಸ್ಟರ್​ ಬೆದರಿಕೆಗೆ ಮಣಿಯುವ ಮೊದಲು ಅವರನ್ನು ಹೇಗೆ ಎದುರಿಸಬೇಕು ಎಂದು ನಿರ್ಧಾರ ಮಾಡಿಕೊಂಡೆ. ಪೊಲೀಸರು ಅವರ ಪರವಾಗಿಯೇ ಇದ್ದರು. ಹೀಗಾಗಿ ಗ್ಯಾಂಗ್​ಸ್ಟರ್​ ಹೇಳಿದಂತೆ ಕೇಳಬೇಕು. ಅವರಿಗೆ ಬೇಕಾದದ್ದನ್ನು ಕೊಡಬೇಕು ಎಂದು ಜನರು ಹೇಳಿದ್ದರು. ಆದರೆ ನಾವು ಇದು ಯಾವುದನ್ನು ಮಾಡಲಿಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಕಂಪನಿಯಲ್ಲಿ ಪ್ರಾಬಲ್ಯ ಸಾಧಿಸಲು, ದಾಳಿಕೋರರು ಮುಷ್ಕರಕ್ಕೆ ಕರೆ ನೀಡಿದರು. ಇದರಿಂದಾಗಿ ಟಾಟಾ ಮೋಟಾರ್ಸ್​ನಲ್ಲಿ​ ಕೆಲಸಗಾರರು ತಮ್ಮ ಸುರಕ್ಷತೆಯ ಕಾರಣದಿಂದ ಕೆಲಸ ನಿಲ್ಲಿಸಿದರು. ನಾವು ಏನಾದ್ರೂ ಒಮ್ಮೆ ಅವರು ಕೇಳಿದ್ದನ್ನು ಕೊಟ್ಟರೇ ಅದು ಮುಂದುವರೆಯುವ ಸಾಧ್ಯತೆ ಇದೆ. ಅವನ ಹೇಳಿದಂತೆ ಮುಂದೆ ಕೇಳಬೇಕಾಗುತ್ತದೆ. ಹೀಗಾಗಿ ಮುಷ್ಕರ ನಡೆಯುತ್ತಿದ್ದರು ಅವರನ್ನು ನಿರಂತರವಾಗಿ ಎದುರಿಸಿದೆ ಎಂದರು. ನಂತರ ಕೊನೆಯದಾಗಿ ಗ್ಯಾಂಗ್​ಸ್ಟರ್​ ಹಿಡಿಯುವಲ್ಲಿ ರತನ್ ಟಾಟಾ ಅವರು ಶ್ರಮ ಪ್ರಮುಖ ಪಾತ್ರ ವಹಿಸಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಾಟಾ ಮೋಟಾರ್ಸ್​ಗೆ ಬೆದರಿಕೆ ಹಾಕಿದ್ದ ಗ್ಯಾಂಗ್​ಸ್ಟರ್​.. ಹಳೆಯ ವಿಡಿಯೋದಲ್ಲಿ ರತನ್​ ಟಾಟಾ ಹೇಳಿದ್ದೇನು?

https://newsfirstlive.com/wp-content/uploads/2023/08/ratan_TATA_1.jpg

Load More