Advertisment

ತೀವ್ರ ಲೋ ಬಿಪಿಯಿಂದ ಬಳಲುತ್ತಿದ್ದ ರತನ್ ಟಾಟಾ; BP ಇರೋರು ಈ ತಪ್ಪು ಮಾಡಬಾರದು!

author-image
Ganesh
Updated On
ತೀವ್ರ ಲೋ ಬಿಪಿಯಿಂದ ಬಳಲುತ್ತಿದ್ದ ರತನ್ ಟಾಟಾ; BP ಇರೋರು ಈ ತಪ್ಪು ಮಾಡಬಾರದು!
Advertisment
  • ಮುಂಬೈ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ರತನ್ ಟಾಟಾ ನಿಧನ
  • ರತನ್ ಟಾಟಾ ಆರೋಗ್ಯದಲ್ಲಿ ಏನೆಲ್ಲ ಸಮಸ್ಯೆಗಳು ಆಗಿತ್ತು?
  • ಲೋ-ಬಿಪಿ ಇರೋರು ಯಾವ ರೀತಿಯ ಆಹಾರ ಸೇವಿಸಬೇಕು?

ರತನ್ ಟಾಟಾ ಎಂಬ ಹೆಸರು ಪದಗಳಿಗಿಂತಲೂ ಮೀರಿದ್ದು. ಅವರ ವ್ಯಕ್ತಿತ್ವಕ್ಕೆ ಅಷ್ಟು ಘನತೆ, ಗೌರವ ಇದೆ. ದೇಶದ ಪ್ರತಿಯೊಬ್ಬ ನಾಗರಿಕರು ಪ್ರಾಮಾಣಿಕವಾಗಿ ಗೌರವಿಸುವ ಜನರಲ್ಲಿ ಒಬ್ಬರಾಗಿದ್ದರು. ತುಂಬಾ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ರತನ್ ಟಾಟಾ, ನಿನ್ನೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Advertisment

ರತನ್ ಟಾಟಾಗೆ ಏನಾಗಿತ್ತು..?
ರತನ್ ಟಾಟಾ ಲೋ ಬಿಪಿಯಿಂದ ಬಳಲುತ್ತಿದ್ದರು. ಇದರಿಂದ ಅವರ ಆರೋಗ್ಯ ಹದಗೆಡಲಾರಂಭಿಸಿತು. ಹೃದ್ರೋಗ ತಜ್ಞ ಡಾ.ಶಾರುಖ್ ಆಸ್ಪಿ ಗೋಲ್ವಾಲಾ ನೇತೃತ್ವದ ತಂಡ ರತನ್ ಟಾಟಾಗೆ ಚಿಕಿತ್ಸೆ ನೀಡುತ್ತಿತ್ತು. ವೈದ್ಯರು ಎಷ್ಟೇ ಪ್ರಯತ್ನಿಸಿದರೂ ರತನ್ ಟಾಟಾ ಆರೋಗ್ಯ ಸುಧಾರಿಸಲಿಲ್ಲ. ಮಾಹಿತಿಗಳ ಪ್ರಕಾರ ರತನ್ ಟಾಟಾ.. ಕಡಿಮೆ ರಕ್ತದೊತ್ತಡದಿಂದ ಉಂಟಾಗುವ ಹೈ-ಪೊಟೆನ್ಷನ್‌ನಿಂದ (hypotension) ಬಳಲುತ್ತಿದ್ದರು. ಇದರಿಂದಾಗಿ ಅವರ ದೇಹದ ಹಲವು ಭಾಗಗಳು ಕ್ರಮೇಣ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ್ದವು. ನಿರ್ಜಲೀಕರಣದ ಸಮಸ್ಯೆಯಿಂದ ಬಳಲುತ್ತಿದ್ದರು. ಇದು ವಯಸ್ಸಾದವರಿಗೆ ಗಂಭೀರ ಸಮಸ್ಯೆಯನ್ನುಂಟು ಮಾಡುತ್ತದೆ.

ಇದನ್ನೂ ಓದಿ:ರತನ್ ಟಾಟಾಗೆ ಕಾಡಿದ ಕಾಯಿಲೆ ಯಾವುದು? ಕ್ರಮೇಣ ಕೆಲವು ಅಂಗಗಳು ಕೆಲಸ ಮಾಡೋದನ್ನೇ ನಿಲ್ಲಿಸಿದ್ವು..

ಲೋ ಬಿಪಿ ಎಷ್ಟು ಅಪಾಯಕಾರಿ?
ದೇಹದ ರಕ್ತದೊತ್ತಡವು 90/60 ಕ್ಕಿಂತ ಕಡಿಮೆಯಿದ್ದರೆ ಅದನ್ನು ಲೋಪಿ ಎಂದು ಹೇಳಲಾಗುತ್ತದೆ. ಲೋ ಬಿಪಿ ಮತ್ತು ಹೈ ಬಿಪಿ ಎರಡೂ ಕೂಡ ಅಪಾಯಕಾರಿ. ಲೋ ಬಿಪಿಯಿಂದ ವಯಸ್ಸಾದವರಿಗೆ ಹೃದಯ, ಮೆದುಳು ಮತ್ತು ಇತರ ಅಂಗಗಳಿಗೆ ರಕ್ತದ ಹರಿವಿನ ಪ್ರಮಾಣ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಬಿಪಿ ಹಠಾತ್ ಕಡಿಮೆಯಾಗುವುದರಿಂದ ಮೆದುಳಿಗೆ ರಕ್ತ ಮತ್ತು ಆಮ್ಲಜನಕದ ಪೂರೈಕೆ ಸರಿಯಾಗಿ ಆಗಲ್ಲ. ಅಂತಹ ಪರಿಸ್ಥಿತಿಯಲ್ಲಿ ತಲೆ ತಿರುಗುವಿಕೆ, ಮೂರ್ಛೆ ಮುಂತಾದ ಸಮಸ್ಯೆಗಳು ಉಂಟಾಗುತ್ತದೆ.

Advertisment

ಕಡಿಮೆ ರಕ್ತದೊತ್ತಡಕ್ಕೆ ಚಿಕಿತ್ಸೆ ಏನು?

  • ಲೋ ಬಿಪಿ ಸಮಸ್ಯೆ ಇರುವವರು ವೈದ್ಯರನ್ನು ಸಂಪರ್ಕಿಸಬೇಕು. ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.
  • ಅಧಿಕವಾಗಿರುವ ಉಪ್ಪು ಆಹಾರ ಸೇವಿಸಿ
  • ಸಾಕಷ್ಟು ದ್ರವ ಪದಾರ್ಥಗಳನ್ನು ಕುಡಿಯಬೇಕು
  • ಮದ್ಯ ಮತ್ತು ಸಿಗರೇಟ್​ನಿಂದ ದೂರ ಇರಬೇಕು
  • ವೈರಲ್ ರೋಗಗಳ ವೇಳೆ ಹೆಚ್ಚು ದ್ರವ ಪದಾರ್ಥದ ಆಹಾರ ತೆಗೆದುಕೊಳ್ಳಬೇಕು
  • ನಿಯಮಿತವಾಗಿ ವ್ಯಾಯಾಮ ಮಾಡಬೇಕು
  • ಕುಳಿತುಕೊಂಡಾಗ, ಮಲಗಿದ ನಂತರ ಎದ್ದೇಳುವಾಗ ಹುಷಾರಾಗಿರಬೇಕು
  • ನೇರವಾಗಿ ನಿಲ್ಲುವ ಮೊದಲು ಕಾಲುಗಳಿಗೆ ಸ್ವಲ್ಪ ವ್ಯಾಯಾಮ ಮಾಡಿ
  • ಹಾಸಿಗೆಯಿಂದ ಏಳುವ ಮೊದಲು ಆಸರೆ ಪಡೆದರೆ ಒಳ್ಳೆಯದು
  • ಭಾರವಾದ ವಸ್ತುಗಳನ್ನು ಎತ್ತುವುದನ್ನು ತಪ್ಪಿಸಿಕೊಳ್ಳಬೇಕು
  • ಶೌಚಾಲಯ ಮಾಡುವಾಗ ಆಯಾಸವನ್ನು ತಪ್ಪಿಸಿಕೊಳ್ಳಿ
  • ದೀರ್ಘಕಾಲ ನಿಲ್ಲುವುದನ್ನು ತಪ್ಪಿಸಿಕೊಳ್ಳಿ
  • ಬಿಸಿನೀರಿನೊಂದಿಗೆ ದೀರ್ಘಕಾಲ ಸಂಪರ್ಕದಲ್ಲಿರಬೇಡಿ
  • ಕಾರ್ಬೋಹೈಡ್ರೇಟ್ ಸೇವನೆಯನ್ನು ಕಡಿಮೆ ಮಾಡಿ
  • ತಿಂದ ನಂತರ ವಿಶ್ರಾಂತಿ ಪಡೆಯಲು ಮರೆಯದಿರಿ

ಇದನ್ನೂ ಓದಿ:ಉಪ್ಪು, ಕಾರು ತಯಾರಿಕೆಯಿಂದ ಸಾಫ್ಟ್‌ವೇರ್‌ವರೆಗೆ.. ದಿಗ್ಗಜ ರತನ್ ಟಾಟಾರ ಅಸಾಧಾರಣ ಪಯಣ ಹೇಗಿತ್ತು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment