newsfirstkannada.com

×

4 ಬಾರಿ ಮೂಡಿತ್ತು ಮೊಹಬ್ಬತ್; ಆದರೂ ಮದ್ವೆ ಆಗದೇ ಏಕಾಂಗಿಯಾಗಿಯೇ ಉಳಿದಿದ್ದೇಕೆ ರತನ್ ಟಾಟಾ?

Share :

Published October 10, 2024 at 7:55pm

Update October 10, 2024 at 7:59pm

    ರತನ್ ಟಾಟಾ ಬದುಕಿನ ತೋಟದಲ್ಲಿ ಅರಳಿತ್ತು ಪ್ರೇಮದ ಗುಲಾಬಿ

    ಭಾರತ-ಚೀನಾ ಯುದ್ಧ ಅವರ ಪ್ರೀತಿಯನ್ನು ಕೊಂದಿದ್ದು ಹೇಗೆ ಗೊತ್ತಾ?

    4 ಯುವತಿಯರನ್ನು ಪ್ರೀತಿಸಿದರೂ ಕಂಕಣ ಭಾಗ್ಯ ಕೂಡಿ ಬರಲಿಲ್ಲ ಏಕೆ ?

ಅವರು ಭಾರತೀಯ ಉದ್ಯಮದ ಗಾಂಧಿ. ಯುವ ಉದ್ಯಮಿಗಳಿಗೆ ಸ್ಫೂರ್ತಿದಾಯಕ ಕಲಾಂ. ಇಂಥದ್ದೊಂದು ಮಾತು ದುಬಾರಿ ಅನ್ನಿಸಬಹುದು. ಆದರೆ, ಸಾವಿರಾರು ಕೋಟಿ ಸಂಪತ್ತಿನ ಒಡೆಯ ಸರಳ ಸಂಸ್ಕಾರಕ್ಕೆ ಷರ್ಟು ಪ್ಯಾಂಟು ಹಾಕಿರೋ ಮಾದರಿ ಆಗಿದ್ರು. ರತನ್ ಟಾಟಾ ಅನ್ನೋ ಚೋಟು ಬಾಲ್ಯ ನೋವಿನಿಂದಲೇ ತುಂಬಿತ್ತು. ಯೌವನದಲ್ಲಂತೂ ಸಾಲು ಸಾಲು ಪ್ರೇಮ ವೈಫಲ್ಯ ಕಂಡಿದ್ರು. 86 ವರ್ಷದ ರತನ್ ಟಾಟಾ ಒಂಟಿಯಾಗಿಯೇ ಕಣ್ಮುಚ್ಚಿದ್ದಾರೆ. ಮದುವೆ ಆಗಬೇಕು ಅನ್ನೋ ಆಲೋಚನೆ ಎಷ್ಟೋ ಸಲ ಬಂದಿತ್ತು. ಆದರೆ, ರತನ್ ಪರಪಂಚದಲ್ಲಿದ್ದ ಅದೊಂದು ನೋವು ಏಕಾಂಗಿಯಾಗಿಯೇ ಉಳಿಯುವಂತೆ ಮಾಡಿತ್ತು. ಅಷ್ಟಕ್ಕೂ ಈ ರತನ್ ಪರಪಂಚದಲ್ಲಿ ಬಂದು ಹೋದವರು ಯಾರು ಗೊತ್ತಾ?

ವಯಸ್ಸು ಮುಖ್ಯವಲ್ಲ. ಮನಸ್ಸು ಮುಖ್ಯ. ಮದುವೆ ಖಂಡಿತ ಆಗ್ತೀನಿ. ಇಂಥದ್ದೊಂದು ಮಾತನ್ನು 63ನೇ ವಯಸ್ಸಿನಲ್ಲೂ ಒಂದು ಸಂದರ್ಶನದಲ್ಲಿ ಹೇಳಿದ್ದರು ಚಿರ ಯುವಕ ರತನ್. ಇವತ್ತು 86ನೇ ವಯಸ್ಸಿನಲ್ಲಿ ನಮ್ಮನ್ನಗಲಿದ್ದಾರೆ. ಚಿಟಿಕೆ ಹೊಡೆದಿದ್ದರೇ ಸಾಲುಗಟ್ಟಿ ಹುಡುಗಿಯರು ನಿಲ್ಲುತ್ತಿದ್ದರು. ಇಂದ್ರಲೋಕವನ್ನೇ ಭೂಲೋಕವನ್ನಾಗಿಸಿ ಮದುವೆ ಆಗಬಹುದಿತ್ತು. ವಿಶ್ವ ಸುಂದರಿ, ಭುವನ ಸುಂದರಿಯರನ್ನೇ ಕೈ ಹಿಡಿಯೋ ಸಾಮರ್ಥ್ಯವಿದ್ದ ಸುರಸುಂದರ ಕೊನೆಗೂ ಮದುವೆ ಆಗಲೇ ಇಲ್ಲ. ಫುಲ್ ಟೈಮ್ ಬ್ಯಾಚುಲರ್​ ಆಗಿಯೇ ಕಣ್ಮುಚ್ಚಿದ್ದಾರೆ ಟಾಟಾ, ರತನ್ ನಾವಲ್ ಟಾಟಾ.

ಸಾವಿರಾರು ಕೋಟಿ ರೂಪಾಯಿಯ ಒಡೆಯ. ಟಾಟಾ ಮಹಾಸಾಮ್ರಾಜ್ಯದ ಅನಭಿಷಕ್ತ ದೊರೆ.ಭಾರತದ ಅಗ್ರಗಣ್ಯ ಉದ್ಯಮಿ, ಮಹಾನ್ ಮಾನವತಾವಾದಿ ಎಂದೇ ರತನ್ ಟಾಟಾರನ್ನ ಕರೆಯಲಾಗುತ್ತೆ. ಆದರೆ, ರತನ್ ಟಾಟಾ ಬದುಕಿನ ಅಸಲಿ ಪ್ರಪಂಚವೇ ಬೇರೇ ಇತ್ತು. 86 ವರ್ಷಗಳೇ ಉರುಳಿದ್ರೂ ರತನ್ ಟಾಟಾ ಏಕಾಂಗಿಯಾಗಿಯೇ ಉಳಿಯೋದಕ್ಕೆ ಕಾರಣವೂ ಇದೆ. ಇವತ್ತು ವಿಶ್ವಕ್ಕೆ ವಿಶ್ವವೇ ರತನ್ ಟಾಟಾ ನಿಧನಕ್ಕೆ ಕಂಬನಿ ಮಿಡಿಯುತ್ತಿದೆ. ಆದರೇ, ಆ ಒಂದು ಎಕ್ಸ್​ ಖಾತೆಯ ಕಣ್ಣೀರಿನ ಬೀಳ್ಕೊಡುಗೆ ರತನ್ ಪರಪಂಚದ ಒಂದು ಪ್ರೇಮ ಪುಟದ ಅಕ್ಷರಗಳನ್ನು ತೆರೆದಿಟ್ಟಿದೆ.

ಇದನ್ನೂ ಓದಿ: VIDEO: ರತನ್ ಟಾಟಾಗೆ ಅಂತಿಮ ನಮನ ಸಲ್ಲಿಸಿದ ಪ್ರೀತಿಯ ‘ಗೋವಾ’.. ಮನ ಮಿಡಿಯೋ ದೃಶ್ಯ!

ಸಿಮಿ ಗರೆವಾಲ್ ಎಂಬ ಹೆಸರಾಂತ ನಟಿಯ ಒಂದು ಪೋಸ್ಟ್ ಈಗ ದೊಡ್ಡ ಸದ್ದನ್ನು ಮಾಡುತ್ತಿದೆ. ನೀವು ಇನ್ನಿಲ್ಲ ಎಂದು ಹೇಳುತ್ತಿದ್ದಾರೆ. ನೀವಿಲ್ಲ ಎನ್ನುವ ಸತ್ಯ ಅರಗಿಸಿಕೊಳ್ಳುವುದು ಕಷ್ಟ. ನನ್ನ ಪ್ರೀತಿಯ ಗೆಳೆಯನಿಗೆ ವಿದಾಯ‘ ಎಂದು ಎಕ್ಸ್ ಖಾತೆಯಲ್ಲಿ ಮಾಡಿರುವ ಪೋಸ್ಟ್ ಹಳೆಯ ನೆನಪಿನ ನವಿಲುಗರಿಯೊಂದು ವಿದಾಯದ ಸಮಯದಲ್ಲಿ ತೆರೆದುಕೊಂಡಿದೆ ಎಂದು ಎನಿಸುತ್ತಿದೆ.

ಭಾರತದ ಹೆಸರಾಂತ ನಟಿ, ನಿರೂಪಕಿ ಸಿಮಿ ಗರೆವಾಲ್ ಇಂಥದ್ದೊಂದು ಸಂದೇಶದ ಮೂಲಕ ಬಿಕ್ಕಳಿಕೆಯ ಶ್ರದ್ಧಾಂಜಲಿ ಸಮರ್ಪಿಸಿದ್ದಾರೆ. ಇದೇ ಭಾವುಕ ಸಂದೇಶವೇ ರತನ್ ಪರಪಂಚ ಎಂಥದ್ದು ಅನ್ನೋದನ್ನ ತೋರಿಸುತ್ತಿದೆ. 86 ವರ್ಷಗಳೇ ಉರುಳಿದ್ರೂ ರತನ್ ಟಾಟಾ ಬ್ಯಾಚುಲರ್​ ಆಗಿಯೇ ಉಳಿಯೋದಕ್ಕೆ ಕಾರಣ ಪ್ರೀತಿ.

ಬೇರೆ ಪ್ರೇಮಿಗಳಂತೆ ಟಾಟಾಗೂ ಲವ್​ ಫೇಲ್ಯೂರ್​!
ರತನ್ ಟಾಟಾ ರಿಯಲ್ ಪ್ರೇಮಿ. ಕಾಟಾಚಾರಕ್ಕೆ ಪ್ರೀತಿಸಿ ಕೈಕೊಡೋ ಕಾಂಜಿ ಪೀಂಜಿ ಪ್ರೇಮಿಯಲ್ಲ. ಯಾರೋ ಪೊರ್ಕಿಗಳಿಗೆ ಬೀಳೋ ಹುಡುಗಿಯರು, ಎಷ್ಟೇ ಸವಾಲು ಬಂದ್ರೂ ಎದುರಿಸಿ ಮದುವೆ ಆಗೋ ಯುವತಿಯರು ಅಕ್ಷರಶಃ ಅಚ್ಚರಿಪಡುವಂಥಾ ಘಟನೆಗಳು ರತನ್ ಟಾಟಾ ಬದುಕಿನಲ್ಲಿ ನಡೆದಿವೆ. ಒಂದಲ್ಲ, ಎರಡಲ್ಲ, ನಾಲ್ಕು ಸಲ ಪ್ರೀತಿಯಲ್ಲಿ ಬಿದ್ದಿದ್ರು ರತನ್ ಟಾಟಾ. ಪ್ರತೀ ಸಲವೂ ಭಗ್ನಪ್ರೇಮಿಯಂತೆಯೇ ನೋವು ಅನುಭವಿಸಬೇಕಾಯ್ತು. ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಖುದ್ದು ರತನ್ ಟಾಟಾ ಹಂಚಿಕೊಂಡಿದ್ದರು.

ರತನ್ ಟಾಟಾ ನಾಲ್ಕು ಸಲ ತೀವ್ರವಾಗಿ ಪ್ರೀತಿಸಿದ್ರು. ಇನ್ನೇನು ಮದುವೆ ಆಗಬೇಕು ಅನ್ನೋ ಹಂತಕ್ಕೂ ಹೋಗಿದ್ರು. ಆದರೇ, ಅದೊಂದು ಯುದ್ಧ ರತನ್ ಟಾಟಾ ಪಾಲಿಗೆ ವಿಲನ್ ಆಗಿತ್ತು. ಆ ವಿಚಾರದ ಬಗ್ಗೆ ಖುದ್ದು ಟಾಟಾ ಹೇಳಿಕೊಂಡಿದ್ದರು.

ಇದನ್ನೂ ಓದಿ: ಶ್ವಾನಪ್ರೇಮಿ ರತನ್​ ಟಾಟಾ! ಅಂದು ಕಿಂಗ್​ ಚಾಲ್ಸ್​ ನೀಡುವ ‘ಜೀವಮಾನದ ಸಾಧನೆ’ ಪ್ರಶಸ್ತಿಯನ್ನೇ ಕೈಬಿಟ್ಟಿದ್ರು

1962ರ ಭಾರತ ಚೀನಾ ಯುದ್ಧ ಟಾಟಾ ಪ್ರೀತಿಗೆ ವಿಲನ್ ಆಗಿತ್ತು!
ರತನ್ ಟಾಟಾ ಹಾಗೂ ಅಮೆರಿಕಾದ ಆ ಹುಡುಗಿಯ ಪ್ರೀತಿಗೆ 1962ರ ಇಂಡೋ ಚೀನಾ ವಾರ್​ ವಿಲನ್ ಆಗಿತ್ತು. ಈ ವಿಚಾರವನ್ನೂ ಸಹ ಟಾಟಾ ಹೇಳಿಕೊಂಡಿದ್ದಾರೆ. ಇದೇ ಸಂದರ್ಭವೇ ಟಾಟಾ ಬದುಕಿನ ಎಲ್ಲವೂ ಆಗಿದ್ದ ಅಜ್ಜಿ ನವಾಜ್ ಬಾಯಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇಂಥಾ ತುರ್ತು ಸಂದರ್ಭದಲ್ಲಿ ಅಜ್ಜಿ ಜೊತೆ ರತನ್ ಇರಲೇಬೇಕಾದ ಅನಿವಾರ್ಯತೆಯೂ ಇತ್ತು. ಹಾಗಾಗಿಯೇ ರತನ್ ಟಾಟಾ ಭಾರತಕ್ಕೆ ಬರಬೇಕಾಯ್ತು. ಇದೇ ವೇಳೆಯೇ ರತನ್ ಟಾಟಾರ ಪ್ರೇಯಸಿ ಸಹ ಭಾರತಕ್ಕೆ ಬರುವ ಬಯಕೆ ಹೊಂದಿದ್ದಳು.

ಆದರೇ, ಚೀನಾ ಜೊತೆಗೆ ಭಾರತದ ಯುದ್ಧ ನಡೆಯುತ್ತಿದ್ದುದ್ದರಿಂದ ಆಕೆಯ ಪೋಷಕರು, ಅವಳನ್ನ ಭಾರತಕ್ಕೆ ಕಳುಹಿಸಲು ಒಪ್ಪಲಿಲ್ಲ. ಪರಿಣಾಮ ಇಬ್ಬರ ಪ್ರೀತಿ ಮುರಿದು ಬಿತ್ತು. ಭಾರತಕ್ಕೆ ವಾಪಸ್ ಬಂದ ಮೇಲೂ ತನ್ನ ಗೆಳತಿ ತನಗಾಗಿ ಭಾರತಕ್ಕೆ ಬರ್ತಾಳೆ ಅಂತಾ ರತನ್​ ಟಾಟಾ ಕಾದು ಕುಳಿತಿದ್ದರಂತೆ. ಆದ್ರೆ, ಆಕೆ ಬರಲಿಲ್ಲ. ಬೇರೆ ಒಬ್ಬರನ್ನು ಮದುವೆ ಆದ ವಿಚಾರ ತಿಳಿದು ಅಕ್ಷರಶಃ ಬಿಕ್ಕಳಿಸಿ ಬಿಕ್ಕಳಿಸಿ ಅತ್ತುಬಿಟ್ಟಿದ್ದರು.

ಇದನ್ನೂ ಓದಿ: ಆಡು ಮುಟ್ಟದ ಸೊಪ್ಪಿಲ್ಲ ಟಾಟಾ ಗ್ರೂಪ್ ಹೂಡಿಕೆ ಮಾಡದ ಕ್ಷೇತ್ರವಿಲ್ಲ; ಯಾವೆಲ್ಲಾ ಕ್ಷೇತ್ರಗಳಲ್ಲಿ ಟಾಟಾ ಹೂಡಿಕೆ ಮಾಡಿದೆ ಗೊತ್ತಾ?

ಪ್ರೇಮ ವೈಫಲ್ಯಕ್ಕೆ ರತನ್ ದುಶ್ಚಟಕ್ಕೆ ಬಲಿ ಆಗಲಿಲ್ಲ, ಭಗ್ನ ಪ್ರೇಮಿಯಂತೆ ಕೊರಗಲಿಲ್ಲ!

ಮೌನವೇನೇ, ಧ್ಯಾನವೇ ಪ್ರೇಮ ಅನ್ನೋ ಮಾತಿದೆ. ಹಾಗೆಯೇ ರತನ್ ಟಾಟಾ ಉತ್ಕಟತೆಯಿಂದ ಪ್ರೀತಿಸಿದ್ರು. ಪ್ರೀತಿಸಿದವಳು ಕೈಕೊಟ್ಟಳು ಅಂತ ಭಗ್ಮ ಪ್ರೇಮಿ ಆಗಲಿಲ್ಲ. ದುಶ್ಚಟಕ್ಕೂ ಬಲಿಯಾಗಲಿಲ್ಲ. ಟಾಟಾ ಸಾಮ್ರಾಜ್ಯದಲ್ಲಿ ಸಾಮಾನ್ಯ ಉದ್ಯೋಗಿಯಂತೆ ಹಗಲಿರುಳು ದುಡಿಯೋದಕ್ಕೆ ಮುಂದಾದರು. ಆ ಕೆಲಸದ ಮಧ್ಯೆಯೇ ಕೈ ಕೊಟ್ಟ ಪ್ರೇಯಸಿಯನ್ನು ನೆನೆದು ಎಷ್ಟೋ ಸಲ ಒಳಗೊಳಗೆ ಬಿಕ್ಕಳಿಸಿದ್ದಾರೆಯೇ ವಿನಃ, ಯಾರೊಂದಿಗೂ ಹೆಚ್ಚು ಹಂಚಿಕೊಳ್ಳಲಿಲ್ಲ. ಆಕೆ ಬಂದೇ ಬರುತ್ತಾಳೆ ಅಂತ ಕಾದು ಕುಳಿತಿದ್ದ ರತನ್, ಬದುಕು ನಿನಗಾಗಿ, ಬವಣೆ ನಿನಗಾಗಿ, ನನ ಪ್ರೀತಿಯೇ ಸುಳ್ಳಾದರೇ ಜಗವೆಲ್ಲಾ ಸುಳ್ಳು ಅಲ್ಲವೇ? ಅನ್ನೋ ರೀತಿಯಲ್ಲೇ ಒಂಟಿಯಾಗಲಾರಂಭಿಸಿದ್ರು.

ಬಾಲಿವುಡ್​ ಬೆಡಗಿಯೊಂದಿಗೂ ರತನ್ ಪ್ರೀತಿ ಅರಳಿತ್ತು, ಆದರೆ, 
ಇವತ್ತು ಕಣ್ಣೀರಿನ ವಿದಾಯ ಗೆಳೆಯ ಅಂತಾ ಭಾವುಕ ಸಂದೇಶ ಹಾಕಿಕೊಂಡಿರೋ ನಟಿ ಮತ್ತು ನಿರೂಪಕಿ ಕೂಡ ಒಂದು ಕಾಲದ ರತನ್ ಟಾಟಾರ ಪ್ರೇಯಸಿ ಆಗಿದ್ರು. ಹೌದು, ಸಿಮಿ ಗೆರವಾಲ್ ಜೊತೆಯೂ ರನ್ ಟಾಟಾರ ಪ್ರೀತಿ ಮೊಳಕೆಯೊಡೆದು ಗಿಡವಾಗಿತ್ತು. 2011ರ ಸಂದರ್ಶನವೊಂದರಲ್ಲಿ ಸಿಮಿ ಗರೆವಾಲ್ ರತನ್ ಟಾಟಾ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ್ದರು. ಅವರು ತಮ್ಮ ಬಾಂಧವ್ಯವನ್ನು ವಿವರಿಸುತ್ತಾ, ‘ರತನ್ ಮತ್ತು ನನ್ನದು ಬಹಳ ಹಿಂದಿನ ಸಂಬಂಧ. ರತನ್ ತುಂಬಾನೇ ಸಂಭಾವಿತ ವ್ಯಕ್ತಿ ಜೊತೆಗೆ ಫನ್ನಿ ಅಂತಾ ಹಾಡಿ ಹೊಗಳಿದ್ದರು. ಅಷ್ಟೇ ಅಲ್ಲ, ರತನ್​ ಬದುಕಿನ ಸಾಕಷ್ಟು ಸ್ವಾರಸ್ಯಗಳನ್ನ ಬಿಚ್ಚಿಟ್ಟಿದ್ದರು.

ಇದನ್ನೂ ಓದಿ: ಪಾಕಿಸ್ತಾನದ GDPಗಿಂತ ಟಾಟಾ ಗ್ರೂಪ್​ನ ಮೌಲ್ಯವೇ ಹೆಚ್ಚು.. ಎಷ್ಟು ಲಕ್ಷ ಕೋಟಿ ಇದೆ ಗೊತ್ತಾ?

ಅವ್ರಿಗೆ ಹಣ ಎಲ್ಲವೂ ಆಗಿರಲಿಲ್ಲ. ಅವರು ವಿದೇಶದಲ್ಲಿರುವಷ್ಟು ನಿರಾಳರಾಗಿ ಭಾರತದಲ್ಲಿ ಇರಲಿಲ್ಲ ’ಅಂತಾ ಹೇಳಿಕೊಂಡಿದ್ದರು. ಇನ್ನು, ಟಾಟಾ ಅವರ ಜೊತೆ ಡೇಟಿಂಗ್​ನಲ್ಲಿದ್ದರೂ, ಈ ಪ್ರೀತಿ ಮದುವೆಯ ಹಂತಕ್ಕೆ ಹೋಗಲಿಲ್ಲ. ಹೀಗಾಗಿ ಸಿಮಿ ನಂತರ ಬೇರೊಬ್ಬರನ್ನು ಮದುವೆಯಾದರು. ಆದಾಗ್ಯೂ, ಅವರು ತುಂಬಾ ವರ್ಷಗಳ ಕಾಲ ಟಾಟಾಗೆ ನಿಕಟ ಸ್ನೇಹಿತರಾಗಿದ್ದರು. ಹೀಗೆ ಹಲವು ಸಲ ಪ್ರೀತಿಸಿದ ಹುಡುಗಿಯೇ ಕೈಕೊಟ್ಟಾಗ ಇಂತಿ ನಿನ್ನ ಪ್ರೀತಿಯ ನಾನ್ಯಾರು ಅಂತ ಬಿಕ್ಕಳಿಸುತ್ತಲೇ ಸುಮ್ಮನಾಗಿದ್ರು ರತನ್ ಟಾಟಾ. ಹಾಗಾಗಿಯೇ ಈ 86ನೇ ವಯಸ್ಸಿನಲ್ಲೂ ಬ್ಯಾಚುಲರ್​ ಆಗಿಯೇ ಕೊನೆಯುಸಿರೆಳೆದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

4 ಬಾರಿ ಮೂಡಿತ್ತು ಮೊಹಬ್ಬತ್; ಆದರೂ ಮದ್ವೆ ಆಗದೇ ಏಕಾಂಗಿಯಾಗಿಯೇ ಉಳಿದಿದ್ದೇಕೆ ರತನ್ ಟಾಟಾ?

https://newsfirstlive.com/wp-content/uploads/2024/10/RATAN-TATA-LOVE-STORY-3.jpg

Load More