Advertisment

F-16 ಹಾರಿಸಿದ ಮೊದಲ ಭಾರತೀಯ; ಬೆಂಗಳೂರು ಏರ್‌ ಶೋನಲ್ಲಿ ರತನ್ ಟಾಟಾ ಬರೆದ ದಾಖಲೆಗಳು ಏನು?

author-image
admin
Updated On
F-16 ಹಾರಿಸಿದ ಮೊದಲ ಭಾರತೀಯ; ಬೆಂಗಳೂರು ಏರ್‌ ಶೋನಲ್ಲಿ ರತನ್ ಟಾಟಾ ಬರೆದ ದಾಖಲೆಗಳು ಏನು?
Advertisment
  • ಅತ್ಯಂತ ವೇಗದ ಯುದ್ಧ ವಿಮಾನ (F-16) ಫೈಟರ್ ಜೆಟ್‌ನಲ್ಲಿ ಟಾಟಾ
  • ಫೈಟರ್ ಜೆಟ್, ಹೆಲಿಕಾಪ್ಟರ್ ಚಲಾಯಿಸುವ ಲೈಸೆನ್ಸ್ ಕೂಡ ಇತ್ತು
  • ವಿಶ್ವದ ಅತ್ಯಂತ ಆಧುನಿಕ ಫೈಟರ್ ಜೆಟ್‌ ಚಲಾಯಿಸಿದ್ದ ರತನ್ ಟಾಟಾ

ಗ್ಲೋಬಲ್ ಐಕಾನ್, ಖ್ಯಾತ ಉದ್ಯಮಿ ರತನ್ ಟಾಟಾ ಅವರು ಇಹಲೋಕ ತ್ಯಜಿಸಿದ್ದಾರೆ. ಭಾರತ ಕಂಡ ಧೀಮಂತ ವ್ಯಕ್ತಿಗೆ ದೇಶದ ನಾನಾ ಗಣ್ಯರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ರತನ್ ಟಾಟಾ ಅವರ ಸಾಧನೆ ಹಾಗೂ ಬದುಕಿನ ಹಾದಿಯನ್ನು ಮುಕ್ತವಾಗಿ ಕೊಂಡಾಡುತ್ತಿದ್ದಾರೆ. ರತನ್ ಟಾಟಾ ಅವರ ರೋಚಕ ಜೀವನ ಚರಿತ್ರೆಯೇ ಅದಕ್ಕೆ ನಿದರ್ಶನವಾಗಿದೆ.

Advertisment

ಇದನ್ನೂ ಓದಿ: ರತನ್ ಟಾಟಾಗೆ ಕಾಡಿದ ಕಾಯಿಲೆ ಯಾವುದು? ಕ್ರಮೇಣ ಕೆಲವು ಅಂಗಗಳು ಕೆಲಸ ಮಾಡೋದನ್ನೇ ನಿಲ್ಲಿಸಿದ್ವು.. 

publive-image

ಖ್ಯಾತ ಉದ್ಯಮಿ ರತನ್ ಟಾಟಾ ಅವರು ಕೇವಲ ಬ್ಯುಸಿನೆಸ್‌ನಲ್ಲಿ ಮಾತ್ರವಲ್ಲ. ಹಲವಾರು ಕ್ಷೇತ್ರದಲ್ಲಿ ಯಾರು ಮಾಡದ ಸಾಧನೆಯನ್ನು ಮಾಡಿದ್ದಾರೆ. ರತನ್ ಟಾಟಾ ಅವರು ಎಷ್ಟು ಕ್ರಿಯಾಶೀಲರು, ಉತ್ಸಾಹಿಗಳು ಆಗಿದ್ದರು ಅಂದ್ರೆ 67ನೇ ವಯಸ್ಸಿನಲ್ಲಿ ಅತ್ಯಂತ ವೇಗದ ಯುದ್ಧ ವಿಮಾನ (F-16) ಫೈಟರ್ ಜೆಟ್‌ನಲ್ಲಿ ಪ್ರಯಾಣ ಮಾಡಿದ್ದರು.

publive-image

2007ರ ಫೆಬ್ರವರಿಯಲ್ಲಿ ಬೆಂಗಳೂರಲ್ಲಿ ಏರ್ ಶೋ ಆಯೋಜಿಸಲಾಗಿತ್ತು. ಈ ವೇಳೆ ರತನ್ ಟಾಟಾ ಅವರು ಎಫ್‌-16 ಫೈಟರ್ ಜೆಟ್ ಅನ್ನು ಚಲಾಯಿಸಿದ್ದರು. ಜಗತ್ತಿನ ಕೆಲವೇ ದೇಶಗಳ ಬಳಿ ಇರುವ ಅತ್ಯಾಧುನಿಕ ಯುದ್ಧ ವಿಮಾನವೇ ಈ ಎಫ್‌-16 ಫೈಟರ್ ಜೆಟ್. ಅತ್ಯಾಧುನಿಕ, ಅತ್ಯಂತ ವೇಗದ ಯುದ್ಧ ವಿಮಾನವನ್ನು ಚಲಾಯಿಸುವ ಮೂಲಕ ರತನ್ ಟಾಟಾ ಅವರು ಗಮನ ಸೆಳೆದಿದ್ದರು.

Advertisment

ಇದನ್ನೂ ಓದಿ: ಪಾರ್ಸಿ ಶವ ಸಂಸ್ಕಾರ ಪದ್ಧತಿ ವಿಭಿನ್ನ.. ಮೃತದೇಹವನ್ನು ರಣಹದ್ದುಗಳಿಗೆ ಆಹಾರವಾಗಿ ನೀಡುತ್ತಾರಾ? 

publive-image

F-16 ಹಾರಿಸಿದ ಮೊದಲ ಭಾರತೀಯ ಪ್ರಜೆ ಅನ್ನೋ ಖ್ಯಾತಿಗೆ ರತನ್ ಟಾಟಾ ಅವರು ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲ ರತನ್ ಟಾಟಾ ಅವರು ಫೈಟರ್ ಜೆಟ್, ಹೆಲಿಕಾಪ್ಟರ್ ಚಲಾಯಿಸುವ ಲೈಸೆನ್ಸ್ ಕೂಡ ಹೊಂದಿದ್ದರು.
67ರ ವಯಸ್ಸಿನಲ್ಲಿ ಫೈಟರ್ ಜೆಟ್ ಚಲಾಯಿಸಿದ ಬಳಿಕ ರತನ್ ಟಾಟಾ ಅವರು ಎಫ್‌-18 ಸೂಪರ್ ಹಾರ್ನೆಟ್ ಕೂಡ ಚಲಾಯಿಸಿದ್ದರು. ವಿಶ್ವದ ಅತ್ಯಂತ ಅಡ್ವಾನ್ಸಡ್ ಫೈಟರ್ ಜೆಟ್‌ಗಳಲ್ಲಿ ಇದು ಕೂಡ ಒಂದು.
ರತನ್ ಟಾಟಾ ಅವರು ಏವಿಯೇಷನ್ ಕ್ಷೇತ್ರದ ಬಗ್ಗೆ ಆಸಕ್ತಿ ಹಾಗೂ ಸಾಕಷ್ಟು ಕ್ರೇಜ್ ಹೊಂದಿದ್ದರು. ಹೀಗಾಗಿಯೇ ಏರ್ ಇಂಡಿಯಾವನ್ನು ಕೇಂದ್ರ ಸರ್ಕಾರದಿಂದ ಮತ್ತೆ ಟಾಟಾ ಕಂಪನಿ ಮರು ಖರೀದಿಸಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment