/newsfirstlive-kannada/media/post_attachments/wp-content/uploads/2024/10/Ratan-Tata-15.jpg)
ದೇಶದ ಅಪ್ರತಿಮ ಐಕಾನ್ ರತನ್ ಟಾಟಾ ನಿಧನರಾಗಿದ್ದಾರೆ. 86ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಗೆ ತುತ್ತಾಗಿ ಉಸಿರು ನಿಲ್ಲಿಸಿದ್ದಾರೆ. ಟಾಟಾ ಕಂಪನಿಯನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ದ ಈ ವ್ಯಕ್ತಿ ಸಾವು ಮಾತ್ರ ದೇಶಕ್ಕೆ ನಷ್ಟವನ್ನು ತಂದೊಡ್ಡಿದೆ.
ರತನ್ ಟಾಟಾರವರಿಗೆ ಜಿಮ್ಮಿ ನೇವಲ್ ಎಂಬ ಕಿರಿಯ ಸಹೋದರ ಇರುವ ಸಂಗತಿ ಬಹುತೇಕರಿಗೆ ತಿಳಿದಿಲ್ಲ. ಜಿಮ್ಮಿ ಕೊಂಚ ನಾಚಿಕೆ ಸ್ವಭಾವದವರಾಗಿದ್ದು, ಸಾರ್ವಜನಿಕವಾಗಿ ಗುರುತಿಸಲು ಸಂಕೋಚ ಪಡುತ್ತಾರೆ. ಆದರೆ ರತನ್ ಟಾಟಾ ಜೊತೆಗೆ ಆಳವಾದ ಸಂಪರ್ಕ ಹೊಂದಿದ್ದಾರೆ.
ಇದನ್ನೂ ಓದಿ: Ratan Tata: ಅಂತಿಮ ದರ್ಶನಕ್ಕೆ ವ್ಯವಸ್ಥೆ.. ಅಂತ್ಯಕ್ರಿಯೆ ನಡೆಸೋದ್ಯಾರು? ಎಲ್ಲಿ ನಡೆಯುತ್ತೆ? ಇಲ್ಲಿದೆ ಮಾಹಿತಿ
ರತನ್ ಟಾಟಾ ಕುಟುಂಬದ ವ್ಯವಹಾರಗಳನ್ನು ಮುನ್ನಡೆಸಿದರೆ, ಕಿರಿಯ ಸಹೋದರನಾದ ಜಿಮ್ಮಿ ನೇವಲ್ ಅದರಿಂದ ಹೊರತಾಗಿದ್ದರು. ಸಾರ್ವಜನಿಕರ ಕಣ್ಣಿಗೆ ಬೀಳದಂತೆ ಜಿಮ್ಮಿ ಮುಂಬೈನ ಕೊಲಾಬಾದಲ್ಲಿ 2BHK ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದಾರೆ.
ಇದನ್ನೂ ಓದಿ: Ratan Tata: ಯವ್ವನದಲ್ಲಿ ಪ್ರೀತಿಗೆ ಬಿದ್ದಿದ್ದ ರತನ್ ಟಾಟಾ ಮದ್ವೆ ಯಾಕಾಗಿಲ್ಲ! ಇಲ್ಲಿದೆ ಅವರ ಲವ್ ಸ್ಟೋರಿ
ಅಚ್ಚರಿಯ ಸಂಗತಿ ಎಂದರೆ ಜಿಮ್ಮಿ ಸಣ್ಣ ಫ್ಲಾಟ್ನಲ್ಲಿ ಉಳಿದುಕೊಂಡಿದ್ದಾರೆ. ಮೊಬೈಲ್ ಫೋನ್ ಬಳಸುವುದಿಲ್ಲವಂತೆ, ಪತ್ರಿಕೆ ಮತ್ತು ಟಿವಿ ಮೂಲಕ ಎಲ್ಲಾ ಮಾಹಿತಿ ಪಡೆಯುತ್ತಾರೆ. ಇದಲ್ಲದೆ, ಟಾಟಾ ಸನ್ಸ್, ಟಿವಿಎಸ್, ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಟಾಟಾ ಪವರ್, ಇಂಡಿಯನ್ ಹೋಟೆಲ್ ಮತ್ತು ಟಾಟಾ ಕೆಮಿಕಲ್ಸ್ನಲ್ಲಿ ಪ್ರಮುಖ ಷೇರುದಾರರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ