/newsfirstlive-kannada/media/post_attachments/wp-content/uploads/2024/11/NANO-CAR-1.jpg)
ನ್ಯಾನೋ ಕಾರು. ಇದು ರತನ್ ಟಾಟಾ ಅವರ ಕನಸಿನ ಕೂಸು. ಈ ಕಾರಿನ ಕನಸು ಹುಟ್ಟಿಕೊಂಡಿದ್ದೇ ಮಧ್ಯಮ ವರ್ಗದ ಜನರನ್ನು ಟಾರ್ಗೆಟ್ ಮಾಡಿಕೊಂಡು. ಒಮ್ಮೆ ರತನ್ ಟಾಟಾ ಅವರು ಮಳೆಯಲ್ಲಿ ಕಾರಿನಲ್ಲಿ ಹೊರಟಾಗ, ಬೈಕ್ನಲ್ಲಿ ಪತಿ ಹಾಗೂ ಪತ್ನಿಯರಿಬ್ಬರು ಮಳೆಯಲ್ಲಿ ನೆನೆಯುತ್ತಾ ನಿಂತಿದ್ದನ್ನು ಕಂಡ ಟಾಟಾ ಅವರು, ನಾನು ಬಡವರಿಗಾಗಿ, ಮಧ್ಯಮವರ್ಗದವರಿಗಾಗಿ ಒಂದು ಕಾರ್ ತಯಾರು ಮಾಡುತ್ತೇನೆ ಎಂದು ಶಪಥ ಮಾಡುತ್ತಾರೆ. ಅವರ ಅಂದಿನ ಶಪಥದ ಫಲವಾಗಿಯೇ ಭಾರತದ ಮಾರುಕಟ್ಟೆಗೆ ನ್ಯಾನೋ ಎಂಬ ಪುಟ್ಟ ಅದ್ಭುತವೊಂದು ಆಟೋಮೊಬೈಲ್ ಮಾರುಕಟ್ಟೆಗೆ ಪ್ರವೇಶ ಪಡೆಯಿತು.
ರತನ್ ಟಾಟಾ ಅವರ ಕನಸಿನ ಕೂಸಾದ ನ್ಯಾನೋ ಮಾರುಕಟ್ಟೆಗೆ ಬಂದ ಮೇಲೆ ಅವರು ನಿರೀಕ್ಷೆ ಮಾಡಿದಷ್ಟು ಸಕ್ಸಸ್ ಆಗಲಿಲ್ಲ. ಆ ಬಗ್ಗೆ ರತನ್ ಟಾಟಾ ಅವರಿಗೂ ಕೂಡ ಬೇಸರ ಮೂಡಿತ್ತು. ಜನರು ನ್ಯಾನೋವನ್ನು ಬೇರೆಯದ್ದೇ ರೀತಿ ಸ್ವೀಕರಿಸಿದರು. ಇದು ಬಡತನದ ಗುರುತು ಎಂದು ತಿಳಿದುಕೊಂಡರು ಎಂದು ರತನ್ ಟಾಟಾ ಬೇಸರ ಹೊರಹಾಕಿದ್ದು ಇದೆ.
ಇದನ್ನೂ ಓದಿ:BSNL: ಗ್ರಾಹಕರಿಗೆ ಮತ್ತೊಂದು ಗುಡ್ನ್ಯೂಸ್ ಕೊಟ್ಟ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್
ಸದ್ಯ ರತನ್ ಟಾಟಾ ಅವರು ನಮ್ಮೆಲ್ಲರನ್ನು ಅಗಲಿದ್ದಾರೆ. ಅವರು ಅಗಲಿದ ಒಂದು ವಾರಾದಲ್ಲಿ ಟಾಟಾ ಗ್ರೂಪ್ ರತನ್ ಟಾಟಾ ಅವರ ಕನಸಿನ ಕೂಸನ್ನು ಮತ್ತೆ ಮುನ್ನೆಲೆಗೆ ತರಲು ಸಿದ್ಧತೆಗಳನ್ನು ನಡೆಸಿದೆ. ಹೊಸ ಅವತಾರದಲ್ಲಿ ಮತ್ತೊಮ್ಮೆ ನ್ಯಾನೋ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲು ಟಾಟಾ ಗ್ರೂಪ್ ಸಿದ್ಧತೆ ನಡೆಸಿದೆ. ಹೊಸ ಡಿಸೈನ್, ಹೊಸ ಲುಕ್ನಲ್ಲಿ ನ್ಯಾನೋ ಕಾರು ಬರಲಿದೆ ಎಂದು ಹೇಳಲಾಗುತ್ತಿದೆ.
ಖರೀದಿದಾರರಿಗೆ ಕೈಗೆಟುಕುವ ದರದಲ್ಲಿಯೇ,ಬಡವ ಹಾಗೂ ಮಧ್ಯಮವರ್ಗವನ್ನು ಗುರಿಯಿಟ್ಟುಕೊಂಡೇ ಈ ಕಾರು ಮಾರುಕಟ್ಟೆಗೆ ಬರಲಿದೆ ಎಂದು ಟಾಟಾ ಗ್ರೂಪ್ನ ಮೂಲಗಳು ತಿಳಿಸಿವೆ. ಈ ಕಾರು ಆಧುನಿಕ ಸೌಂದರ್ಯತೆಯನ್ನು ಹೊತ್ತು ಜನರ ಮುಂದೆ ಬರಲಿದೆ. ರೆಫ್ರೆಶ್ಡ್ ಬಾಡಿ ಕಾಂಟೌರ್ಸ್, ಸೊಪಿಸ್ಟಿಕೆಟೇಡ್ ಹೆಡ್ಲೈಟ್ ಹೀಗೆ ವಿವಿಧ ರೀತಿಯ ಬದಲಾವಣೆಯೊಂದಿಗೆ ಸಿದ್ಧಗೊಳ್ಳಲಿದೆ ನ್ಯಾನೋ.
ಇದನ್ನೂ ಓದಿ:ಕಂಪ್ಯೂಟರ್ಗಳಲ್ಲಿ ನಿಮ್ಮ ಕೆಲಸ ಇನ್ನಷ್ಟು ಸುಲಭ.. ನಿಮಗಾಗಿ ಬರ್ತಿದೆ AI ಏಜೆಂಟ್..!
ಇನ್ನು ಟಾಟಾ ಗ್ರೂಪ್ ಸಿದ್ಧಗೊಳಿಸುತ್ತಿರುವ ಹೊಸ ಅವತಾರದ ನ್ಯಾನೋದ ವಿಶೇಷತೆಗಳನ್ನು ನೋಡುವುದಾದ್ರೆ. ಇದು 624ಸಿಸಿ ಪೆಟ್ರೋಲ್ ಇಂಜಿನ್ನನ್ನು ಹೊಂದಿದೆ. ಕಾರಿನ ಮೈಲೇಜ್ ಪ್ರತಿ ಲೀಟರ್ ಪೆಟ್ರೋಲ್ಗೆ 30 ಕಿಲೋ ಮೀಟರ್ ಚಲಿಸಲಿದೆ ಎಂದು ಹೇಳಲಾಗುತ್ತಿದೆ. ಇದು ಓಡುವ ವೇಗ ಗರಿಷ್ಠ ಗಂಟೆಗೆ 105 ಕಿಲೋ ಮೀಟರ್ ಇದೆ. ಹೈವೇ ಹಾಗೂ ಪಟ್ಟಣಗಳ ರಸ್ತೆಗಳಿಗೂ ಈ ಕಾರ್ ಹೊಂದಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಕಾರು ಮಾಲೀಕರಿಗೆ ಸರಿಯಾದ ಕಮ್ಫರ್ಟ್ ನೀಡುವ ಈ ಕಾರು, ಅಪ್ಗ್ರೇಡೆಡ್ ವಿಂಡೋಗಳನ್ನು ಹೊಂದಿದೆ. ಏರ್ ಕಂಡಿಷನರ್ ಜೊತೆಗೆ ಅತ್ಯಾಧುನಿ ಮ್ಯೂಸಿಕ್ ಸಿಸ್ಟಮ್ನ್ನು ಕೂಡ ಹೊಂದಿದೆ. ನಾಲ್ಕು ಜನರು ಆರಾಮದಾಯವಕವಾಗಿ ಕುಳಿತು ಪ್ರಯಾಣ ಮಾಡುವಷ್ಟು ಸುಖಕರವಾಗಿ ಈ ಕಾರ್ ಇರಲಿದೆ. ಇನ್ನೂ ಕಾರ್ನ ಆರಂಭಿಕ ಬೆಲೆ ಕೇವಲ 2.5 ಲಕ್ಷ ರೂಪಾಯಿ ಎಂದು ಹೇಳಲಾಗಿದ್ದು. ಕೈಗೆಟುಕುವ ದರದಲ್ಲಿ ಮಧ್ಯಮದ ವರ್ಗದವರು ಹಾಗೂ ಬಡವರು ಕೂಡ ಖರೀದಿ ಮಾಡಬಹುದಾದ ಕಾರ್ ಆಗಿ ಇದು ಮಾರುಕಟ್ಟೆಯಲ್ಲಿ ಹವಾ ಸೃಷ್ಟಿಸುವ ಎಲ್ಲಾ ಸಾಧ್ಯತೆಗಳು ಇವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ