ಪ್ರೀತಿಯ ಗೆಳೆಯನಿಗೆ ಮಾಜಿ ಗೆಳತಿಯಿಂದ ಭಾವುಕ ವಿದಾಯ.. ನಿನ್ನ ನಷ್ಟ ಸಹಿಸಿಕೊಳ್ಳುವುದು ಕಷ್ಟವೆಂದ ಸಿಮಿ ಗೆರೆವಾಲ್

author-image
AS Harshith
Updated On
ಪ್ರೀತಿಯ ಗೆಳೆಯನಿಗೆ ಮಾಜಿ ಗೆಳತಿಯಿಂದ ಭಾವುಕ ವಿದಾಯ.. ನಿನ್ನ ನಷ್ಟ ಸಹಿಸಿಕೊಳ್ಳುವುದು ಕಷ್ಟವೆಂದ ಸಿಮಿ ಗೆರೆವಾಲ್
Advertisment
  • ಇಬ್ಬರ ಡೇಟಿಂಗ್​ ವಿಚಾರವನ್ನು ಹೇಳಿಕೊಂಡಿದ್ದ ಸಿಮಿ ಗೆರೆವಾಲ್​
  • 2011ರ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ರು ಬಚ್ಚಿಟ್ಟಿದ್ದ ಗುಟ್ಟು
  • ಮದುವೆಯಾಗಲು ಹಲವು ಬಾರಿ ಬಯಸಿದ್ರೂ ಯಾಕೆ ಮದ್ವೆಯಾಗಿಲ್ಲ?

ಕೈಗಾರಿಕೋದ್ಯಮಿ ರತನ್​ ಟಾಟಾ ನಿಧನರಾಗಿದ್ದಾರೆ. 86ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಗೆ ತುತ್ತಾಗಿ ಉಸಿರು ನಿಲ್ಲಿಸಿದ್ದಾರೆ. ಸೋಮವಾರದಂದು ಮುಂಬೈನ ಬ್ರೀಚ್​ ಕ್ಯಾಂಡಿ ಆಸ್ಪತ್ರೆಗೆ ದಾಖಲಾದ ಅವರು ಬುಧವಾರ ರಾತ್ರಿಯಂದು ಕೊನೆಯುಸಿರೆಳೆದಿದ್ದಾರೆ. ಇವರ ಸಾವಿಗೆ ದೇಶದ ನಾಗರೀಕರು ಕಣ್ಣೀರು ಸುರಿಸಿದ್ದಾರೆ. ರತನ್​ ಟಾಟಾರನ್ನು ಕಳೆದುಕೊಂಡ ಮಾಜಿ ಗೆಳತಿ ಸಿಮಿ ಗರೆವಾಲ್​​ ಕೂಡ ಭಾವುಕ ಸಂದೇಶ ಬರೆದಿದ್ದಾರೆ.

ಎಕ್ಸ್​ನಲ್ಲಿ ಬರೆದುಕೊಂಡಿದ್ದರುವ ಸಿಮಿ ಗೆರೆವಾಲ್​, ‘‘ನಿನ್ನ ನಷ್ಟವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ.. ತುಂಬಾ ಕಷ್ಟ.. ವಿದಾಯ ನನ್ನ ಸ್ನೇಹಿತ’’ ಎಂದು ಬರೆದುಕೊಂಡಿದ್ದಾರೆ.


">October 9, 2024

ಸಿಮಿ ಗೆರೆವಾಲ್​ ಯಾರು?

ರತನ್​ ಟಾಟಾ ಮತ್ತು ಸಿಮಿ ಗೆರೆವಾಲ್​ ನಿಕಟ ಸ್ನೇಹಿತರಾಗಿದ್ದು, ಡೇಟಿಂಗ್​ ಮಾಡುತ್ತಿದ್ದರು. ಈ ವಿಚಾರವನ್ನು ಸಿಮಿ ಹೇಳಿಕೊಂಡಿದ್ದರು. 2011ರಲ್ಲಿ ಸಂದರ್ಶನವೊಂದರಲ್ಲಿ ‘‘ನಾನು ಮತ್ತು ರತನ್​​ ಬಹಳ ಹಿಂದೆ ಹೋಗುತ್ತೇವೆ. ಅವರು ಪರಿಪೂರ್ಣ ವ್ಯಕ್ತಿ, ಹಾಸ್ಯ ಪ್ರಜ್ಞೆ ಹೊಂದಿದ್ದಾರೆ. ಸಾಧಾರಣ ಮತ್ತು ಪರಿಪೂರ್ಣ ವ್ಯಕ್ತಿ. ಹಣವು ಅವರ ಪ್ರೇರಕ ಶಕ್ತಿಯಾಗಿರಲಿಲ್ಲ’’ ಎಂದು ಹೇಳಿದ್ದರು.

ಇದನ್ನೂ ಓದಿ: Ratan Tata: ಯವ್ವನದಲ್ಲಿ ಪ್ರೀತಿಗೆ ಬಿದ್ದಿದ್ದ ರತನ್​ ಟಾಟಾ ಮದ್ವೆ ಯಾಕಾಗಿಲ್ಲ! ಇಲ್ಲಿದೆ ಅವರ ಲವ್​ ಸ್ಟೋರಿ

ರತನ್​ ಟಾಟಾರವರು ಸಿಮಿ ಗೆರೆವಾಲ್​​ರವರ ಚಾಟ್​​ ಶೋದಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರು ಮದುವೆಯಾಗಲು ಹಲವು ಬಾರಿ ಬಯಸಿದ್ದರಂತೆ. ಈ ವಿಚಾರವನ್ನು ಅವರು ಬಹಿರಂಗ ಪಡಿಸಿದ್ದರು. ಆದರೆ ಇಲ್ಲಿಯವರೆಗೆ ಇಬ್ಬರು ಮದುವೆಯಾಗಿಲ್ಲ.

publive-image

ಕ್ಯೂಟ್​ ಲವ್​ ಸ್ಟೋರಿ

ರತನ್​ ಟಾಟಾ ಕೂಡ ತಮ್ಮ ಲವ್​ ಸ್ಟೋರಿ ಬಗ್ಗೆ ಹಂಚಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಆಗಲಿಲ್ಲ ಎಂದು ಹೇಳಿಕೊಂಡಿದ್ದರು.

‘ಕಾಲೇಜಿನ ನಂತರ, ನಾನು ಲಾಸ್ ಏಂಜಲೀಸ್‌ನಲ್ಲಿನ ಆರ್ಕಿಟೆಕ್ಚರ್ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಬಂದೆ. ಅಲ್ಲಿ ನಾನು 2 ವರ್ಷಗಳ ಕಾಲ ಕೆಲಸ ಮಾಡಿದೆ. ಸ್ವಂತ ಕಾರು ಖರೀದಿಸಿದೆ, ನನ್ನ ಕೆಲಸವನ್ನು ಇಷ್ಟಪಟ್ಟೆ. ಲಾಸ್ ಏಂಜಲೀಸ್‌ನಲ್ಲಿ ನಾನು ಒಬ್ಬಾಕೆಯನ್ನು ಪ್ರೀತಿಸುತ್ತಿದ್ದೆ ಮತ್ತು ನಮ್ಮಿಬ್ಬರ ಮದುವೆಯಾಗುವುದು ಖಚಿತವಾಗಿತ್ತು. ಅದೇ ಸಮಯದಲ್ಲಿ ನನ್ನ ಅಜ್ಜಿಯ ಆರೋಗ್ಯ ಸರಿ ಇರ್ಲಿಲ್ಲ. ಹೀಗಾಗಿ ಅವರನ್ನು ನೋಡಲೆಂದು ನಾನು ತಾಯ್ನಾಡಿಗೆ ಹಿಂದಿರುಗಲು ನಿರ್ಧರಿಸಿದ್ದೆ.

ಇದನ್ನೂ ಓದಿ: ಚಿಕ್ಕವಯಸ್ಸಲ್ಲೇ ಹೆತ್ತವರು ದೂರ, ಅಜ್ಜಿ ಜೊತೆ ಬಾಲ್ಯ! ರತನ್ ಟಾಟಾ ಬೆಳೆದು ಬಂದ ಹಾದಿಯೇ ರೋಚಕ

ನಾನು ಮದುವೆಯಾಗ ಬಯಸಿದ್ದ ಹುಡುಗಿಯೂ ನನ್ನೊಂದಿಗೆ ಭಾರತಕ್ಕೆ ಬರುತ್ತಾಳೆಂದು ಭಾವಿಸಿದ್ದೆ. ಆದ್ರೆ, ಆಕೆ ಭಾರತಕ್ಕೆ ಬರ್ಲಿಲ್ಲ. 1962ರ ಇಂಡೋ-ಚೀನಾ ಯುದ್ಧದ ಕಾರಣ ಪೋಷಕರು ಆಕೆಯನ್ನು ಎಲ್ಲಿಗೂ ಹೋಗಲು ಬಿಡ್ಲಿಲ್ಲ. ಇದಾದ ಬಳಿಕ ನಮ್ಮ ಸಂಬಂಧ ದೂರವಾಯ್ತು. ಇದಾದ ಮೇಲೆ ನನ್ನ ಬದುಕಿನಲ್ಲಿ ಬಹಳ ಮಂದಿ ಮಹಿಳೆಯರು ಬಂದು ಹೋದರು. ಆದರೆ ಯಾರೂ ತನ್ನ ಕೈಹಿಡಿಯಲಿಲ್ಲ ಎಂದು ರತನ್​ ಟಾಟಾ ಹೇಳಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment