ಜನನ, ಮರಣ ಪ್ರಮಾಣ ಪತ್ರಕ್ಕೂ ತಟ್ಟಿದ ಬೆಲೆ ಏರಿಕೆಯ ಬಿಸಿ.. ಸರ್ಟಿಫಿಕೆಟ್​ ಕೊಡಲು ಎಷ್ಟು ಹಣ ಪೀಕಲಾಗುತ್ತಿದೆ?

author-image
Gopal Kulkarni
Updated On
ಜನನ, ಮರಣ ಪ್ರಮಾಣ ಪತ್ರಕ್ಕೂ ತಟ್ಟಿದ ಬೆಲೆ ಏರಿಕೆಯ ಬಿಸಿ.. ಸರ್ಟಿಫಿಕೆಟ್​ ಕೊಡಲು ಎಷ್ಟು ಹಣ ಪೀಕಲಾಗುತ್ತಿದೆ?
Advertisment
  • ಗ್ಯಾರಂಟಿ ಎಫೆಕ್ಟ್​.. ಜನನ ಪ್ರಮಾಣ ಪತ್ರದ ಬೆಲೆಯೂ ಹೆಚ್ಚಳ
  • ರಾಜ್ಯ ಸರ್ಕಾರದ ವಿರುದ್ಧ ಹಾವೇರಿ ಜಿಲ್ಲೆಯ ಜನರು ಆಕ್ರೋಶ
  • 5 ರಿಂದ 50 ರೂಪಾಯಿಗೆ ಏರಿದ ಜನನ, ಮರಣ ಪ್ರಮಾಣ ಪತ್ರ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಅದರೆ ಗ್ಯಾರಂಟಿ ಯೋಜನೆ ಎಪೇಕ್ಟ್ ನಿಂದ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ನೀಡುವ ಪ್ರಮಾಣ ಪತ್ರ ದರವನ್ನ ಡಬ್ಬಲ್ ಅಲ್ಲಾ ತ್ರಿಬಲ್ ಮಾಡಲಾಗಿದೆ. ಯಾವುದಕ್ಕೆ ದರವನ್ನ ಹೆಚ್ಚು ಮಾಡಲಾಗಿದೆ ಅಂತೀರಾ ಈ ಸ್ಟೋರಿ ನೋಡಿ.

ಇದನ್ನೂ ಓದಿ:ಜೈಲಿಂದ ರಿಲೀಸ್ ಆದ ರಜತ್, ವಿನಯ್.. ಹೇಳಿದ್ದೇನು? ಟಾಪ್‌ 10 ಫೋಟೋ ಇಲ್ಲಿದೆ!

ರಾಜ್ಯದ ಜನರ ಪಾಲಿಗೆ ‘ಗ್ಯಾರೆಂಟಿ’ ಸರ್ಕಾರ ದುಬಾರಿಯಾಗಿದೆ. ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಿಂದ ಕಿತ್ತುಕೊಳ್ತಿರುವ ಸರ್ಕಾರಕ್ಕೆ ಪ್ರತಿನಿತ್ಯ ಜನರು ಹಿಡಿಶಾಪ ಹಾಕ್ತಿದ್ದಾರೆ. ಹುಟ್ಟಿನಿಂದ ಹಿಡಿದು ಮನುಷ್ಯನ ಸಾವಿನವರೆಗೂ ಸರ್ಕಾರ ಜನರ ಜೇಬಿಗೆ ಕೈ ಹಾಕಿ ಕಿತ್ತುಕೊಳ್ತಿದ್ದು, ರಾಜ್ಯದ ಜನತೆ ಹೈರಾಣಾಗಿ ಹೋಗಿದ್ದಾರೆ. ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಜನನ-ಪ್ರಮಾಣ ಪತ್ರಕ್ಕೂ ಮೂರು ಪಟ್ಟು ಹಣ ವಸೂಲಿ ಮಾಡ್ತಿರೋದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: 1ನೇ ತರಗತಿಗೆ ಮಕ್ಕಳನ್ನ ಸೇರಿಸಲು ವಯಸ್ಸಿನ ಸಮಸ್ಯೆ ಪರಿಹರಿಸದ ಸಚಿವ ಮಧು ಬಂಗಾರಪ್ಪ

publive-image

ಕಳೆದ ವರ್ಷ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಜನಿಸಿದ ಮಗುವಿನ ಪ್ರಮಾಣ ಪತ್ರ ಪಡೆಯಲು ಐದು ರೂಪಾಯಿ ನೀಡಿದ್ರೆ ಸಾಕು ಸಿಗ್ತಿತ್ತು. ಮರಣ ಪ್ರಮಾಣ ಪತ್ರಕ್ಕೆ 10 ರೂಪಾಯಿ ನಿಗದಿ ಮಾಡಲಾಗಿತ್ತು. ಅದರೆ ಗ್ಯಾರಂಟಿ ಯೋಜನೆಯಿಂದ ಹಣ ಹೊಂದಿಸಲು ಹೆಣಗಾಡುತ್ತಿರೋ ಸರ್ಕಾರ ಈಗ ಏಕಾಏಕಿ ಎಲ್ಲದರ ದರ ಹೆಚ್ಚಳ ಮಾಡಿದೆ. ಜನನ ಪ್ರಮಾಣ ಪತ್ರಕ್ಕೆ 5 ರೂನಿಂದ 50 ರುಪಾಯಿ ಮಾಡಿದೆ. ಮರಣ ಪ್ರಮಾಣ ಪತ್ರಕ್ಕೆ 10 ರಿಂದ 50 ರೂಪಾಗಿಗೆ ಹೆಚ್ಚಿಸಿದೆ. ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಡ್ಮಿಟ್ ಆಗುವ ರೋಗಿಗಳ ದರವನ್ನೂ 20 ರೂ.ನಿಂದ ರಿಂದ 50 ರುಪಾಯಿಗೆ ಹೆಚ್ಚಿಸಿದೆ. ಹೀಗಾಗಿ ಜಿಲ್ಲೆಯ ಜನರು ಸರ್ಕಾರ ವಿರುದ್ಧ ಹಿಡಿ ಶಾಪ ಹಾಕ್ತಿದ್ದಾರೆ.

publive-image

ಕಳೆದ ಎರಡು ವಾರಗಳ ಹಿಂದೆ ರೇಟ್ ಬೋರ್ಡ್ ಹಾಕಿದ್ದು ಇದೆಲ್ಲ ಗ್ಯಾರಂಟಿ ಯೋಜನೆಯ ವರದಾನ.. ಕೂಡಲೇ ಸರ್ಕಾರ ಜನನ-ಮರಣ ಪ್ರಮಾಣ ಪತ್ರದ ದರವನ್ನ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ವಿಶ್ವ ಪ್ರಸಿದ್ಧಿ ಪಡೆದಿರುವ ಮುಧೋಳ ಬೇಟೆ ನಾಯಿ ಬಗ್ಗೆ ನಿಮಗೆಷ್ಟು ಗೊತ್ತು? ಈ ತಳಿಗಳನ್ನು ಹೆಚ್ಚು ಸಾಕುವುದೇಕೆ?

ಕಾಂಗ್ರೆಸ್​ನ ಗ್ಯಾರಂಟಿ ಮಾತುಗಳಿಗೆ ಮರುಳಾಗಿ ಕೈಗೆ ಅಧಿಕಾರ ಕೊಟ್ಟು ರಾಜ್ಯದ ಜನರು.. ಇದೀಗ ಪ್ರತಿನಿತ್ಯ ಬೆಲೆ ಏರಿಕೆಯಿಂದ ಬೇಸತ್ತು ಹೋಗಿದ್ದಾರೆ. ಇನ್ನಾದರೂ ಸರ್ಕಾರ ಎಚ್ಚತ್ತುಕೊಂಡು ಪ್ರಮಾಣ ಪತ್ರದ ದರವನ್ನ ಕಡಿಮೆ ಮಾಡುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment