ಈ ಜನರ ರೇಷನ್ ಕಾರ್ಡ್​ ರದ್ದು! ಸರ್ಕಾರದ ಇಂಥ ನಿರ್ಧಾರಕ್ಕೆ ಕಾರಣ ಏನು?

author-image
Ganesh
Updated On
35 ಲಕ್ಷ ಕುಟುಂಬದ BPL ಕಾರ್ಡ್​ ರದ್ದಾಗುವ ಆತಂಕ; ಸರ್ಕಾರ ಮಾಡ್ತಿರುವ ನೂತನ ಸರ್ವೇಯ ಮಾನದಂಡಗಳು ಏನು..?
Advertisment
  • ಹಲವರಿಗೆ ಎರಡು ಹೊತ್ತಿನ ಊಟಕ್ಕೂ ಹಣವಿಲ್ಲ
  • ಸರ್ಕಾರ ಕಡಿಮೆ ಬೆಲೆಯಲ್ಲಿ ಪಡಿತರ ನೀಡುತ್ತಿದೆ
  • ಬಡತನ ರೇಖೆಗಿಂತ ಕೆಳಗಿರುವ ಅನೇಕರಿಗೆ ರೇಷನ್ ಕಾರ್ಡ್

ಕೇಂದ್ರ ಸರ್ಕಾರ ಬಡವರಿಗಾಗಿ ಅನೇಕ ಯೋಜನೆಗಳನ್ನು ತಂದಿದೆ. ಈ ಯೋಜನೆಗಳಿಂದ ಕೋಟಿ ಕೋಟಿ ಜನರು ಪ್ರಯೋಜನ ಪಡೆಯುತ್ತಿದ್ದಾರೆ. ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಅನೇಕ ಜನರಿದ್ದಾರೆ. ಹಲವರಿಗೆ ಎರಡು ಹೊತ್ತಿನ ಊಟಕ್ಕೂ ಹಣವಿಲ್ಲ. ಅಂತಹವರಿಗೆ ಸರ್ಕಾರ ಕಡಿಮೆ ಬೆಲೆಯಲ್ಲಿ ಪಡಿತರ ನೀಡುತ್ತದೆ.

ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಈ ಜನರಿಗೆ ಪಡಿತರ ಚೀಟಿ ನೀಡುತ್ತದೆ. ಪಡಿತರ ಚೀಟಿಯ ಸಹಾಯದಿಂದ ಹತ್ತಿರದ ಸರ್ಕಾರಿ ಪಡಿತರ ಅಂಗಡಿಗಳಲ್ಲಿ ಕಡಿಮೆ ಬೆಲೆಯಲ್ಲಿ ಪಡಿತರವನ್ನು ಪಡೆಯಬಹುದು.

ಇದನ್ನೂ ಓದಿ:ಊಟ ಆದ್ಮೇಲೆ ಯಾಕೆ ಸ್ನಾನ ಮಾಡಬಾರದು? ಒಂದು ಸಣ್ಣ ಯೋಚನೆ ನಿಮ್ಮ ಬದುಕನ್ನೇ ಬದಲಿಸಬಹುದು!

publive-image

ಕೆಲವು ತಿಂಗಳ ಹಿಂದೆ, ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡಲು ಸರ್ಕಾರ ಮಾರ್ಗಸೂಚಿ ಹೊರಡಿಸಿತ್ತು. ಎಲ್ಲಾ ಪಡಿತರ ಚೀಟಿದಾರರು ಇ-ಕೆವೈಸಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇದಕ್ಕೆ ಕೊನೆಯ ದಿನಾಂಕ ಕೂಡ ನಿಗದಿಯಾಗಿದೆ. ಈ ಹಿಂದೆ ಸರ್ಕಾರ ಸೆಪ್ಟೆಂಬರ್ 1ರವರೆಗೆ ಗಡುವು ನೀಡಿತ್ತು. ನಂತರ ನವೆಂಬರ್ 1 ರವರೆಗೆ ವಿಸ್ತರಿಸಲಾಗಿತ್ತು. ಈಗ ಪಡಿತರ ಚೀಟಿದಾರರಿಗೆ ಇ-ಕೆವೈಸಿ ಗಡುವನ್ನು ಡಿಸೆಂಬರ್ 1 ರವರೆಗೆ ವಿಸ್ತರಿಸಲಾಗಿದೆ.

ಡಿಸೆಂಬರ್ 1, 2024 ರೊಳಗೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದ ಪಡಿತರ ಚೀಟಿದಾರರ ಕಾರ್ಡ್​​ ರದ್ದಾಗಲಿದೆ. ಆ ಎಲ್ಲಾ ಪಡಿತರ ಚೀಟಿದಾರರ ಹೆಸರುಗಳನ್ನು ರೇಷನ್ ಕಾರ್ಡ್​ನಿಂದ ತೆಗೆದು ಹಾಕಲಾಗುತ್ತದೆ. ನಿಮ್ಮ ಪಡಿತರ ಚೀಟಿಯ ಇ-ಕೆವೈಸಿ ಪ್ರಕ್ರಿಯೆ ಇನ್ನೂ ಪೂರ್ಣಗೊಳಿಸದಿದ್ದರೆ, ಆದಷ್ಟು ಬೇಗ ಮಾಡಿಕೊಳ್ಳಿ.

ಇದನ್ನೂ ಓದಿ:ವರುಷಕ್ಕೆ ಬರುವುದು ಹರುಷದಿ ದೊಡ್ಡಬ್ಬ! ಬೂರೆ ರೂಪದಲ್ಲಿ ಬರುವ ನಮ್ಮ ಬಲ್ಲಾಳ ಬಲೀಂದ್ರ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment